FIR: ಗಂಡನ ಮೊಬೈಲ್‌ಗೆ ಬಂದಿತ್ತು ಹೆಂಡತಿ ರಾಸಲೀಲೆ ವಿಡಿಯೋ: ಹೆಂಡತಿ ಪ್ರಿಯಕರನನ್ನ ಮುಗಿಸೇಬಿಟ್ಟ ಗಂಡ..!
10 ವರ್ಷದ ಸಂಸಾರ 2 ಮಕ್ಕಳು ಆದರೂ ಬಿಡಲಿಲ್ಲ ಪ್ರಿಯಕರನ ಸಹವಾಸ..!
ಪತ್ನಿ ರಾಸಲೀಲೆ ವಿಡಿಯೋ ನೋಡಿ ಮಚ್ಚಿಡಿದು ಹೊರಟ ಗಂಡ..!
ಹೆಂಡತಿ ಪ್ರಿಯಕರನನ್ನ ಕೊಲೆ ಮಾಡಿ ಜೈಲು ಸೇರಿದ..!
ಮೈಸೂರು (ಮಾ.07): ಅವನು 28 ವರ್ಷದ ಯುವಕ. ಮನೆಯಲ್ಲಿ ಆತನ ಮದುವೆ ಮಾತುಕಥೆ ನಡೆಯುತ್ತಿತ್ತು. ಹೊಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಊರಲ್ಲೆಲ್ಲಾ ಒಳ್ಳೆ ಹೆಸರನ್ನೇ ಸಂಪಾಧಿಸಿದ್ದನು. ತನ್ನ ಸ್ವಂತ ದುಡಿಮೆಯಲ್ಲೆ ಮನೆ ಕಟ್ಟಿ ಹೆತ್ತವರನ್ನ ನೋಡಿಕೊಂಡಿದ್ದ ಯುವಕ ತನ್ನದೇ ಗ್ರಾಮದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣಬಿಟ್ಟಿರುವ ದೃಶ್ಯ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ
ಇನ್ನು ಯುವಕನನ್ನು ಯಾರೋ ಮಚ್ಚಿನಲ್ಲಿ ಹೊಡೆದು ಕೊಂದು ಹಾಕಿದ್ದರು. ಆದರೆ, ಪೊಲೀಸರಿಗೆ ವಿಷಯ ಗೊತ್ತಾಗೋಕು ಮುಂಚೆಯೇ ಕೊಲೆ ಮಾಡಿದವನು ಠಾಣೆಗೆ ಬಂದು ಶರಣಾಗಿಬಿಟ್ಟಿದ್ದನು. ಪೊಲೀಸರೆದುರು ನಿಂತು ಒಂದು ಲವ್ ಸ್ಟೋರಿಯನ್ನ ಹೇಳೋದಕ್ಕೆ ಶುರು ಮಾಡಿದ್ದನು. ಅಷ್ಟಕ್ಕೂ ಅಲ್ಲಿ ಕೊಲೆಯಾದವನು ಯಾರು.? ಕೊಲೆ ಮಾಡಿದವನು ಯಾರು.? ಅವನು ಹೇಳಿದ ಲವ್ ಸ್ಟೋರಿಗೂ ಕೊಲೆಗೂ ಏನ್ ಸಂಬಂಧ ಇದೆಲ್ಲಾವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.!
ಪತ್ನಿಯನ್ನು 5 ತುಂಡುಗಳಾಗಿ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಗಂಡ
ಅನೈತಿಕ ಲವ್ ಸ್ಟೋರಿ ಕೇಳಿದವರಿಗೆ ಶಾಕ್: ಹಾಡಹಗಲೇ ಗಿರೀಶ್ ಎನ್ನುವ ವ್ಯಕ್ತಿ ಮಹೇಶ ಎನ್ನುವ ಯುವಕನನ್ನ ಹೊಡೆದು ಹಾಕಿದ್ದನು. ಇವರಿಬ್ಬರೂ ಒಟ್ಟಿಗೆ ಓಡಾಡಿಕೊಂಡಿದ್ದ ಹಾಯ್ ಬಾಯ್ ಫ್ರೆಂಡ್ಸ್‌ಗಳು. ಹೀಗಿದ್ದವರ ಮಧ್ಯದಲ್ಲಿ ಅದೇನಾಯ್ತು..? ಇದೇ ಅಲ್ಲಿನ ಗ್ರಾಮಸ್ಥರಿಗೆ ಹುಟ್ಟಿದ ಪ್ರಶ್ನೆಯಾಗಿದೆ. ಆದರೆ, ಇದೇ ಪ್ರಶ್ನೆಯನ್ನ ಇಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು ಒಂದು ಲವ್ ಸ್ಟೋರಿ ಕಥೆಯಾಗಿದೆ. ಅದೂ ಕೂಡ ಅನೈತಿಕ ಲವ್ ಸ್ಟೋರಿ ಎಂಬುದು ತನಿಖೆಯ ನಂತರ ಪತ್ತೆಯಾಗಿರುವ ವಿಷಯವಾಗಿದೆ.
ಹೆಂಡತಿ ರಾಸಲೀಲೆ ವೀಡಿಯೋ ಪಸರ್ ಆಗಿತ್ತು: ಇವರೇನೋ ನಮ್ಮ ಬಳಿ ಬಂದು ಗಿರೀಶ ಹಿಂಗಿಂಗೆ ಅಂತ ಹೇಳಿದ್ದರೆ ನಾವು ಸರಿ ಮಾಡುತ್ತಿದ್ದೆವು. ಆದರೆ ಅಷ್ಟು ತಾಳ್ಮೆ ಗಿರೀಶನಿಗೆ ಇರಲಿಲ್ಲ. ಕಾರಣ ಅದು ಕೇವಲ ನಾಲ್ಕು ಗೋಡೆಯೊಳಗಿದ್ದ ಸಂಬಂದವಲ್ಲ. ಬದಲಿಗೆ ಇವರ ಲವ್ವಿ ಡವ್ವಿ ವಿಷ್ಯ ಇಡೀ ಊರಿಗೇ ಪಸರ್ ಆಗಿಬಿಟ್ಟಿತ್ತು. ಪ್ರಿಯಕರನೊಂದಿಗೆ ಇದ್ದ ಹೆಂಡತಿಯ ರಾಸಲೀಲೆಯ ವಿಡಿಯೋ ಆಕೆಯ ಪತಿ ಗಿರೀಶನಿಗೇ ಸಿಕ್ಕಿಬಿಟ್ಟಿತ್ತು. ಈ ಬಗ್ಗೆ ಗಿರೀಶನ ಹೆಂಡತಿಯನ್ನೂ ಮಾತನ್ನಾಡಿಸಿದ್ದೀವಿ ಆಕೆ ಹೇಳೋದನ್ನ ಕೇಳಿದರೆ ಒಂದು ಕ್ಷಣ ಥಂಡಾ ಹೊಡೆದು ಬಿಡ್ತೀವಿ.. ಹಾಗಾದ್ರೆ ಆಕೆ ಹೇಳಿದ್ದೇನು..? ಇಲ್ಲಿದೆ ನೋಡಿ.
6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ
ನಾನು ಗಂಡನೊಂದಿಗೆ ಇಲ್ಲ ಎಂದುಬಿಡೋದಾ ಹೆಂಡತಿ: ಅನೈತಿಕ ಸಂಬಂಧ ಹಿನ್ನಲೆ ಗಂಡ ಗಿರೀಶ ತನ್ನ ಹೆಂಡತಿಯ ಪ್ರಿಯಕರ ಮಹೇಶನ ಕಥೆ ಮುಗಿಸಿದ್ದನು. ಆದರೆ, ಏನಮ್ಮ ನಿನ್ನ ಗಂಡ ಹೀಗೊಂದು ಹೆಣ ಹಾಕಿದ್ದಾನೆ ಅಂತ ಕೇಳಿದರೆ ಆಕೆ ನನಗೆ ಮಹೇಶ ಯಾರು ಅನ್ನೋದೇ ಗೊತ್ತಿಲ್ಲ ಅಂತ ಹೇಳಿಬಿಟ್ಟಿದ್ದಾಳೆ. ಅಷ್ಟೇ ಅಲ್ಲ, ಸದ್ಯ ನಾನು ನನ್ನ ಗಂಡ ಈಗ ಒಟ್ಟಿಗೆ ಇಲ್ಲ ಎಂದುಬಿಟ್ಟಳು. ಹೆಂಡತಿಯ ಲವ್ವಿಡವ್ವಿ ವಿಷಯವನ್ನ ತಿಳಿದ ಗಿರೀಶ 8 ತಿಂಗಳ ಹಿಂದೆಯೇ ಆಕೆಯನ್ನ ಮನಯಿಂದ ಹೊರದಬ್ಬಿದ್ದನು. ಅವಳಿಗೆ ಡಿವೋರ್ಸ್ ಕೊಟ್ಟು ಮಕ್ಕಳ ಜೊತೆಗೆ ಜೀವನ ಮಾಡಿಕೊಂಡಿದ್ದನು. ಆದರೆ, ಯಾವಾಗ ಮಹೇಶ ಮತ್ತು ಆತನ ಹೆಂಡತಿಯ ರಾಸ ಲೀಲೆಯ ವಿಡಿಯೋ ವೈರಲ್ ಆಗಿ ತನ್ನ ಮೊಬೈಲ್ಗೂ ಬಂತೋ ಗಿರಿಶ ಮಚ್ಚು ಹಿಡಿದು ಮಹೇಶನನ್ನು ಮುಗಿಸಿಯೇ ಬಿಟ್ಟಿದ್ದಾನೆ.