ಪತ್ನಿಯನ್ನು 5 ತುಂಡುಗಳಾಗಿ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಗಂಡ

 ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಪತ್ನಿಯನ್ನು 5 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿ ಮೃತದೇಹವನ್ನು  ಮನೆಯೊಳಗಿದ್ದ ಖಾಲಿ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

Man killed his wife in to 5 pieces and put her body in water tank akb

ರಾಯ್‌ಪುರ:  ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಪತ್ನಿಯನ್ನು 5 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿ ಮೃತದೇಹವನ್ನು  ಮನೆಯೊಳಗಿದ್ದ ಖಾಲಿ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಈ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲು ಹೋದ ಪೊಲೀಸರಿಗೆ ಅಲ್ಲಿ ಮತ್ತೊಂದು ಅಪರಾಧ ಪ್ರಕರಣದ ವಾಸನೆ ಬಡಿದಿದೆ. ನೋಟಿನೊಂದಿಗೆ ಬರಬೇಕಾದವರು ಕೊಳೆತ ಶವ ಹಿಡಿದುಕೊಂಡು ಬರುವಂತಾಗಿದೆ. 

ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರ (Bilaspur) ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ಖಾಲಿ ನೀರಿನ ತೊಟ್ಟಿಯೊಳಗೆ ಬಚ್ಚಿಟ್ಟಿದ್ದಾನೆ. ಫೆ.5 ರಂದು ಭಾನುವಾರ ಪೊಲೀಸರು ಮನೆಯೊಳಗೆ ಇರಿಸಲಾಗಿದ್ದ ತೊಟ್ಟಿಯಿಂದ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ.

ಜನವರಿ 6 ರಂದು ಪತ್ನಿಗೆ ಅಕ್ರಮ ಸಂಬಂಧವಿರುವ ಅನುಮಾನದಿಂದ  ದಾಂಪತ್ಯ ದ್ರೋಹದ ಆರೋಪದ ಮೇಲೆ  ಆರೋಪಿ ತನ್ನ ಪತ್ನಿ 23 ವರ್ಷದ ಸತಿ ಸಾಹು (Sati Sahu) ಎಂಬಾಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ

ಆರೋಪಿ ಮನೆಯಲ್ಲಿ ನಕಲಿ ನೋಟು ಮುದ್ರಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಬಿಲಾಸ್‌ಪುರ ಪೊಲೀಸ್ ಇಲಾಖೆಯ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕದ ತಂಡ ದಾಳಿ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಸಂತೋಷ್ ಸಿಂಗ್ (Santosh Singh) ಹೇಳಿದ್ದಾರೆ. ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿದಾಗ, ಬಾತ್ ರೂಮ್ ಹತ್ತಿರವಿರುವ ಕೊಠಡಿಯಿಂದ ಕೆಟ್ಟ ವಾಸನೆ ಬರಲಾರಂಭಿಸಿದ್ದು, ಬಳಿಕ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಠಡಿಯಲ್ಲಿ ಇರಿಸಲಾಗಿದ್ದ ಖಾಲಿ ನೀರಿನ ಟ್ಯಾಂಕ್‌ನಲ್ಲಿ ಟೇಪ್ ಮತ್ತು ಪಾಲಿಥಿನ್‌ನಲ್ಲಿ ಸುತ್ತಿದ ದೇಹದ ಭಾಗಗಳು ಪೊಲೀಸರಿಗೆ ಸಿಕ್ಕಿದೆ. 

ದಾಳಿ ನಡೆಸಿದ ಪೊಲೀಸರಿಗೆ ಶವದ ಭಾಗಗಳ ಜೊತೆ ಆತನ ಬಳಿ ಇದ್ದ ನಕಲಿ ನೋಟುಗಳು ಕಲರ್ ಪ್ರಿಂಟರ್, ನಕಲು ಮಾಡಿದ ಕಾಗದಗಳು ಮತ್ತು 500 ಮತ್ತು 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿವೆ. ತನ್ನ ಪತ್ನಿಗೆ ವಿವಾಹೇತರ ಸಂಬಂಧವಿರುವ (extramarital affair) ಶಂಕೆ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿದ್ದಾಗಿ ಆರೋಪಿ ಹೇಳಿದ್ದಾನೆ. ಅಲ್ಲದೇ ಈತನ ನಕಲಿ ನೋಟು ಮುದ್ರಿಸುವ ದಂಧೆಯಲ್ಲೂ ಆಕೆ ಹಸ್ತಕ್ಷೇಪ ಮಾಡುತ್ತಿದ್ದಳು ಎಂದು ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.  

Mangaluru Murder: ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ: ರೂಮೇಟು ಕೊಲೆ!

ಪತ್ನಿಯನ್ನು ಕೊಂದ ನಂತರ, ಆರೋಪಿಯು ನೀರಿನ ಟ್ಯಾಂಕ್ (water tank) ಮತ್ತು ಕಟರ್ ಯಂತ್ರವನ್ನು (cutter machine) ಖರೀದಿಸಿದ್ದಾನೆ. ನಂತರ  ಮಹಿಳೆಯ ದೇಹವನ್ನು ಐದು ಭಾಗಗಳಾಗಿ ಕತ್ತರಿಸಿ ಬೆಂಕಿ ಹಚ್ಚಲು ಯತ್ನಿಸಿದ್ದ, ಆದರೆ ಸುಡುವ ವಾಸನೆಯಿಂದ ಅವನು ಸಿಕ್ಕಿಹಾಕಿಕೊಳ್ಳಬಹುದೆಂದು ಹೆದರಿ ಶವವನ್ನು ನೀರಿನ ತೊಟ್ಟಿಯಲ್ಲಿ ಹಾಕಿ ಮರೆಮಾಚಲು ಯತ್ನಿಸಿದ್ದ ಎಂದು  ಪೊಲೀಸ್ ಅಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ. 

ತನ್ನ ಹೆಂಡತಿಯನ್ನು ಕೊಂದ ನಂತರ ಆರೋಪಿ ಆಕೆಯ ಮೃತದೇಹದ ಭಾಗಗಳನ್ನು ಟೇಪ್‌ನಿಂದ ಸುತ್ತಿ ಅವುಗಳನ್ನು ಟ್ಯಾಂಕ್‌ನೊಳಗೆ ಹಾಕುವ ಮೊದಲು ಪಾಲಿಥಿನ್‌ ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ. ನಂತರ ಆತ ತನ್ನ ಇಬ್ಬರು ಮಕ್ಕಳನ್ನು ತಖತ್‌ಪುರ (Takhatpur) ಗ್ರಾಮದಲ್ಲಿರುವ ತನ್ನ ಪೋಷಕರ ಮನೆಗೆ ಬಿಟ್ಟು ಬಂದಿದ್ದ. 10 ವರ್ಷಗಳ ಹಿಂದೆ ಇವರ ಮದುವೆ ನಡೆದಿದ್ದು, ಈಗ ಪತ್ನಿಯ ಕೊಲೆ ಮಾಡಿರುವುದರ ಜೊತೆಗೆ ಅಕ್ರಮ ನೋಟು ಮುದ್ರಣದ ಆರೋಪದ ಮೇಲೆ ಈತನನ್ನು ಪೊಲೀಸರು ಬಂಧಿಸಿದ ಜೈಲಿಗಟ್ಟಿದ್ದಾರೆ.

Latest Videos
Follow Us:
Download App:
  • android
  • ios