ಹೆಂಡ್ತಿ ಮೇಲಿನ ಸಿಟ್ಟಿಗೆ 2 ಮಕ್ಕಳನ್ನ ಕೊಂದು ಆಟೋದಲ್ಲಿಟ್ಟು ಸುತ್ತಾಡಿಸಿದ ಪಾಪಿ ತಂದೆ!
* ಕಲಬುರಗಿ ನಗರದಲ್ಲಿ ನಡೆದ ಘಟನೆ
* ಹೆಣ್ಣುಮಕ್ಕಳನ್ನು ಕೊಂದು ಶವಗಳೊಂದಿಗೆ ಬಾಡಿಗೆ ಆಟೋ ಓಡಿಸಿದ ತಂದೆ
* ಜನರು ಪೊಲೀಸರಿಗೆ ಮಾಹಿತಿ ನೀಡಿದಾಗ ಬೆಳಕಿಗೆ ಬಂದ ಘಟನೆ
ಕಲಬುರಗಿ(ಜೂ.30): ಆಟೋ ಚಾಲಕನೊಬ್ಬ ತನ್ನಿಬ್ಬರು ಹೆಣ್ಣುಮಕ್ಕಳನ್ನು ಕೊಂದು ಶವಗಳೊಂದಿಗೆ ಬಾಡಿಗೆ ಆಟೋ ಓಡಿಸಿದ ವಿಲಕ್ಷಣ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.
ರಾಜೀವಗಾಂಧಿ ನಗರ ನಿವಾಸಿ, ಆಟೋ ಚಾಲಕ ಲಕ್ಷ್ಮೀಕಾಂತ್ ಕೊಲೆ ಆರೋಪಿ. ಈತ ಪತ್ನಿ ಮೇಲಿನ ಸಿಟ್ಟಿಗೆ ಮಕ್ಕಳಾದ ಸೋನಿ (11) ಮಯೂರಾ (10)ಳನ್ನು ಕೊಲೆಗೈದಿದ್ದಾನೆ.
ಪ್ರೇಮಕ್ಕೆ ವಿರೋಧ: ಗೆಳತಿ, ಆಕೆಯ ಸಹೋದರನನ್ನು ಸುತ್ತಿಗೆಯಿಂದ ಹೊಡೆದು ಕೊಂದ ವ್ಯಕ್ತಿ!
ಈತ ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮೇ ಎಂಬುವಳು ನಾಲ್ಕು ಮಕ್ಕಳನ್ನು ಬಿಟ್ಟು ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿ ಓಡಿಹೋಗಿದ್ದಳು ಎನ್ನಲಾಗಿದೆ. ನಂತರ ಕುಡಿತದ ಲಕ್ಷ್ಮೀಕಾಂತ ನಾಲ್ಕು ದಿನಗಳ ಹಿಂದಷ್ಟೇ ಇಬ್ಬರು ಮಕ್ಕಳನ್ನು ಅಜ್ಜಿಯ ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಬಂದು ಕೊಲೆ ಮಾಡಿ ಶವಗಳನ್ನು ಆಟೋದ ಸೀಟ್ ಹಿಂಭಾಗದಲ್ಲಿ ಬಚ್ಚಿಟ್ಟು ಬಾಡಿಗೆಗೆ ಪ್ರಯಾಣಿಕರನ್ನು ಕರೆದುಕೊಂಡು ನಗರವೆಲ್ಲ ಸುತ್ತಿದ್ದಾನೆ. ಆಟೋದಿಂದ ದುರ್ವಾಸನೆ ಬಂದು, ರಕ್ತದ ಕಲೆಗಳು ಕಂಡು ಜನರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.