ಪ್ರೇಮಕ್ಕೆ ವಿರೋಧ: ಗೆಳತಿ, ಆಕೆಯ ಸಹೋದರನನ್ನು ಸುತ್ತಿಗೆಯಿಂದ ಹೊಡೆದು ಕೊಂದ ವ್ಯಕ್ತಿ!
Latest Crime News: ಜೂನ್ 18 ರಂದು ಪಂದ್ರಾ ಪ್ರದೇಶದ ಓಜಾ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಯುವತಿಯ ತಾಯಿಗೂ ಚಾಕುವಿನಿಂದ ಇರಿದಿದ್ದಾನೆ
ರಾಂಚಿ (ಜೂ. 28): ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ವರದಿಯಾದ ಭೀಕರ ಘಟನೆಯಲ್ಲಿ (Crime News), ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಗೆಳತಿ ಮತ್ತು ಆಕೆಯ 14 ವರ್ಷದ ಸಹೋದರನನ್ನು ಸುತ್ತಿಗೆಯಿಂದ ಹೊಡೆದು ಕೊಲೆ (Murder) ಮಾಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿಯನ್ನು ಅರ್ಪಿತ್ ಅರ್ನವ್ ಎಂದು ಗುರುತಿಸಲಾಗಿದ್ದು, ತನ್ನ 17 ವರ್ಷದ ಗೆಳತಿ ಮತ್ತು ಆಕೆಯ ಸಹೋದರನನ್ನು ಅವರ ಮನೆಯಲ್ಲಿಯೇ ಕೊಂದಿದ್ದಾನೆ.
ಜೂನ್ 18 ರಂದು ಪಂದ್ರಾ ಪ್ರದೇಶದ ಓಜಾ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಯುವತಿಯ ತಾಯಿಗೂ ಚಾಕುವಿನಿಂದ ಇರಿದಿದ್ದಾನೆ. ಮತ್ತು ಚಾಕು ಮುರಿದಾಗ, ಸುತ್ತಿಗೆಯನ್ನು ಬಳಸಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜೂನ್ 18 ರಂದು ನಡೆದ ದಾಳಿಯಲ್ಲಿ ಬಾಲಕಿ ಮತ್ತು ಆಕೆಯ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹುಡುಗಿಯ ಕುಟುಂಬ ಅರ್ಪಿತ್ ಜತೆಗಿನ ಯುವತಿಯ ಡೇಟಿಂಗ್ ವಿರೋಧ ವ್ಯಕ್ತಪಡಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ಆರೋಪಿ ಅರ್ಪಿತ್ ಬೆಳಗಿನ ಜಾವ 3.30ರ ಸುಮಾರಿಗೆ ಯುವತಿಯ ಮನೆಗೆ ಬಂದಿದ್ದಾನೆ. ಈ ವೇಳೆ ಯುವತಿಯ ತಾಯಿ ಎಚ್ಚೆತ್ತುಕೊಂಡಿದ್ದು ಇಬ್ಬರೂ ಒಟ್ಟಿಗಿರುವುದನ್ನು ನೋಡಿದ್ದಾರೆ" ಎಂದು ರಾಂಚಿ ಎಸ್ಪಿ ಅನ್ಹುಮನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೇರೊಬ್ಬನೊಂದಿಗೆ ಪತ್ನಿ ಚಕ್ಕಂದ, ಕೆರಳಿ ರುಂಡ ಚೆಂಡಾಡಿದ ಗಂಡ
"ಇಬ್ಬರೂ ಒಟ್ಟಿಗೆ ಕಂಡ ಯುವತಿಯ ತಾಯಿ ಅರ್ಪಿತ್‌ಗೆ ಥಳಿಸಿದ್ದಾರೆ. ಈ ವೇಳೆ ಆರೋಪಿ ಚಾಕು ತೆಗೆದು ನಾಲ್ಕು ಬಾರಿ ಇರಿದಿದ್ದಾನೆ. ದಾಳಿಯ ವೇಳೆ ಚಾಕು ಮುರಿದಾಗ, ಅರ್ಪಿತ್ ಪಕ್ಕದಲ್ಲಿದ್ದ ಸುತ್ತಿಗೆಯನ್ನು ಎತ್ತಿಕೊಂಡು ತನ್ನ ಗೆಳತಿಯ ತಾಯಿಯ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗೆಳತಿ ಮಧ್ಯಪ್ರವೇಶಿಸಲು ಮುಂದಾದಾಗ ಅರ್ಪಿತ್ ಗೆಳತಿ ಮೇಲೂ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಗಲಾಟೆ ಕೇಳಿ ಬಾಲಕಿಯ ಸಹೋದರ ಅಲ್ಲಿಗೆ ಧಾವಿಸಿದ್ದು ಅವನಿಗೂ ಕೂಡ ಸುತ್ತಿಗೆಯಿಂದ ಹೊಡೆದಿದ್ದಾನೆ" ಎಂದು ಕುಮಾರ್ ತಿಳಿಸಿದ್ದಾರೆ.
ಅಪರಾಧದ ನಂತರ ಆರೋಪಿಗಳು ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಗೆ ಪರಾರಿಯಾಗಿದ್ದಾರೆ. ಕೊನೆಗೆ ರಾಂಚಿಗೆ ಮರಳಿದ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.