Asianet Suvarna News Asianet Suvarna News

ಮದುವೆಗೆ ಪ್ರಿಯಕರನ ಕಂಡೀಷನ್.. 3 ವರ್ಷದ  ಮಗಳ ಉಸಿರು ನಿಲ್ಲಿಸಿ, ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಕಟುಕಿ ತಾಯಿ

ಅದು ಗಂಡ-ಹೆಂಡತಿ ಮತ್ತು ಮುದ್ದಾದ ಮೂರು ವರ್ಷದ ಮಗಳ ಸುಂದರ ಸಂಸಾರ. ಆದರೂ ಮಹಿಳೆಯ ಮನಸ್ಸು ಜಾರಿತ್ತು. ಪ್ರಿಯಕರನ ಜೊತೆ ಸೇರಿಸಿಕೊಳ್ಳಲು ತಾನೇ ಹೆತ್ತ ಮಗುವನ್ನು ತಾಯಿ ಕೊಲೆ ಮಾಡಿದ್ದಾಳೆ.

external marital affair mother killed three year old daughter in bihar mrq
Author
First Published Aug 27, 2024, 5:36 PM IST | Last Updated Aug 27, 2024, 5:37 PM IST

ಪಾಟನಾ: ಬಿಹಾರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರಿಯಕರನನ್ನು ಮದುವೆಯಾಗಲು ಹೆತ್ತ ಕಂದಮ್ಮನನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಮೂರು ವರ್ಷದ ಮಗಳನ್ನು ಬಲಿ ನೀಡಿದ್ದಾಳೆ. ಕೊಲೆಯ ಬಳಿಕ ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿಸಿ ನಿರ್ಜನ ಪ್ರದೇಶದಲ್ಲಿ ತುಂಬಿಸಿ ಎಸೆದಿದ್ದಾಳೆ. ಗುರುವಾರ ಬೆಳಗ್ಗೆ ಮಗುವಿನ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಾಯಿಯೇ ಕೊಲೆ ಪಾತಕಿ ಎಂಬ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮಗುವಿನ ತಾಯಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮನೋಜ್ ಕುಮಾರ್  ಮತ್ತು ಕಾಜಲ್ ಕುಮಾರಿ ದಂಪತಿಯ ಮೂರು ವರ್ಷದ ಮಗಳು ಮಿಷ್ಟಿ ಕುಮಾರಿ ತಾಯಿಯಿಂದಲೇ ಕೊಲೆಯಾದ ಮಗು. ಮಗುವಿನ ತಂದೆ ಮನೋಜ್ ಕುಮಾರ್ ಪತ್ನಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಕಾಜಲ್ ಕುಮಾರಿ, ತಾನು ರಾಮಪುರಹರಿ ಕ್ಷೇತ್ರದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಹೇಳಿದ್ದಾಳೆ. ಮದುವೆಯಾಗುವಂತೆ ಕೇಳಿದಾಗ ಯುವಕ, ನಿನ್ನ ಮಗಳು ನಮ್ಮ ಜೊತೆಯಲ್ಲಿರೋದು ಬೇಡ ಎಂಬ ಕಂಡೀಷನ್ ಹಾಕಿದ್ದನು. ಖಾಸಗಿ ವಾಹಿನಿಯಲ್ಲಿ ಕ್ರೈಂ ಪೆಟ್ರೋಲ್ ಶೋ ನೋಡುತ್ತಿದ್ದ ಮಹಿಳೆ ಅದರಲ್ಲಿ ತೋರಿಸಿದಂತೆ ಮಗುವನ್ನು ಕೊಂದು, ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಕಸ ಎಸೆಯುವ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. 

ಕೊಲೆಗೂ ಮುನ್ನ ಗಂಡನಿಗೆ ಫೋನ್ ಮಾಡಿದ್ದ ಕಾಜಲ್, ಬರ್ತ್ ಡೇ ಆಚರಿಸಲು ಚಿಕ್ಕಮ್ಮನ ಮನೆಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಳು. ಮರುದಿನವೇ ಮಗುವಿನ ಶವ ಪತ್ತೆಯಾಗಿದೆ. ಇತ್ತ ಕಾಜಲ್ ಇನಿಯನ ಜೊತೆ ಪರಾರಿಯಾಗಿದ್ದಳು. ಮನೆಯಿಂದ ಹೊರಡುವ ಮುನ್ನ ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆ ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಳು. ಮನೆಯಿಂದ ಹೊರಗೆ ಕಾಲಿಡುತ್ತಲೇ  ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು ಎಂದ ಪೊಲೀಸರು  ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ಯುವತಿ ಕೊಲೆ ಕೇಸ್‌: ಹಂತಕನ ಭೇಟಿಗೆ 3 ಸಲ ಮೈಸೂರಿಗೆ ಹೋಗಿದ್ದ ಅಂಜಲಿ..!

ಪತಿ ಮನೋಜ್ ಕುಮಾರ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಜಲ್ ಪ್ರಿಯಕರನ ಫೋನ್ ಟ್ರೇಸ್ ಮಾಡಿ ಆತನ ಮನೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನಿಯನ ಜೊತೆ ಜೀವನ ನಡೆಸಲು ಮಗಳು ಅಡ್ಡಿಯಾಗಿದ್ದಳು. ಹಾಗಾಗಿ ನಾನೇ ಕೊಲೆ ಮಾಡಿದೆ ಎಂದು ಕಾಜಲ್ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮಗಳ ಜೊತೆ ಬಂದರೆ ನಾನು ನಿನ್ನನ್ನು ಒಪ್ಪಿಕೊಳ್ಳಲ್ಲ ಎಂದು ಷರತ್ತು ಹಾಕಿದ್ದನು. 

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ  ಎಸ್ಪಿ ಅವಧೇಶ್ ದೀಕ್ಷಿತ್, ಗಂಭೀರತೆಯನ್ನು ಪರಿಗಣಿಸಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲಾಗಿತ್ತು. ಎಫ್‌ಎಸ್‌ಎಫ್ ತಂಡ ಮನೆಯಿಂದ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತನ್ನ ಮೂರು ವರ್ಷದ ಮಗಳನ್ನು ಕೊಲೆ ಮಾಡಿರುವುದಾಗಿ ಆರೋಪಿ ಕಾಜಲ್ ಒಪ್ಪಿಕೊಂಡಿದ್ದಾಳೆ. ಮಹಿಳೆ ತನ್ನ ಮಗಳನ್ನು ಚಾಕುವಿನಿಂದ ಕೊಯ್ದು ಕೊಂದು, ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಟೆರೇಸ್‌ನಿಂದ ಎಸೆದಿದ್ದಾಳೆ. ಇದಾದ ಬಳಿಕ ಕೊಠಡಿಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾಳೆ. ಹತ್ಯೆಗೆ ಬಳಸಿದ್ದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಸಿಕ್ಕಿಬಿದ್ದ ಕಳ್ಳನ ಗುದದ್ವಾರಕ್ಕೆ ಮೆಣಸಿನ ಹುಡಿ ತುಂಬಿ ಹಲ್ಲೆ ಮಾಡಿದ ಜನ: ವೀಡಿಯೋ

Latest Videos
Follow Us:
Download App:
  • android
  • ios