Asianet Suvarna News Asianet Suvarna News

ಹುಬ್ಬಳ್ಳಿ ಯುವತಿ ಕೊಲೆ ಕೇಸ್‌: ಹಂತಕನ ಭೇಟಿಗೆ 3 ಸಲ ಮೈಸೂರಿಗೆ ಹೋಗಿದ್ದ ಅಂಜಲಿ..!

ಅಂಜಲಿ ಎಂಬ ಯುವತಿಯನ್ನು ಮೇ. 15ರಂದು ಗಿರೀಶ್ ಅಲಿಯಾಸ್ ವಿಶ್ವನಾಥ ಸಾವಂತ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿ ಮೈಸೂರಿಗೆ ಪರಾರಿಯಾಗಿದ್ದ ಗಿರೀಶ್ ಮೇ. 17ರಂದು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಆಗ ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ಬಂಧಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು. 

police submit chargesheet of Anjali murder Case in Hubballi grg
Author
First Published Aug 25, 2024, 1:03 PM IST | Last Updated Aug 25, 2024, 1:03 PM IST

ಹುಬ್ಬಳ್ಳಿ(ಆ.25): ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ 494 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಂಜಲಿ ತನ್ನಿಂದ ದೂರವಾದ ಕಾರಣ ಕೋಪಗೊಂಡ ಆಕೆಯ ಪ್ರಿಯಕರ ಗಿರೀಶ್ ಸಾವಂತನೇ ಹತ್ಯೆ ಮಾಡಿದ್ದಾನೆ ಎಂಬ ಅಂಶವನ್ನು ಸಾಕ್ಷಿಗಳ ಸಮೇತ ಬಿಚ್ಚಿಟ್ಟಿದ್ದಾರೆ. 

ನಗರದ ವೀರಾಪುರ ಓಣಿಯ ನಿವಾಸಿ ಅಂಜಲಿ (21) ಎಂಬ ಯುವತಿಯನ್ನು ಮೇ 15ರಂದು ಗಿರೀಶ್ ಅಲಿ ಯಾಸ್ ವಿಶ್ವನಾಥ ಸಾವಂತ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿ ಮೈಸೂರಿಗೆ ಪರಾರಿಯಾಗಿದ್ದ ಗಿರೀಶ್ ಮೇ 17ರಂದು ದಾವಣಗೆರೆ ಬಳಿ ರೈಲಿನಲ್ಲಿ ಮಹಿಳೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಆಗ ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ಬಂಧಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು. 

ಹುಬ್ಬಳ್ಳಿ: ನೇಹಾ, ಅಂಜಲಿ ಹಂತಕರ ಪರ ವಕಾಲತ್ತು ವಹಿಸಲು ವಕೀಲರೇ ಸಿಗುತ್ತಿಲ್ಲ..!

ಕೃತ್ಯವನ್ನು ಖಂಡಿಸಿ ಹಲವಾರು ಪ್ರತಿ ಭಟನೆಗಳು ನಡೆದ ಬಳಿಕ ಸರ್ಕಾರ ಪ್ರಕರಣ ವನ್ನು ಸಿಐಡಿಗೆ ಒಪ್ಪಿಸಿತ್ತು. ಸಿಐಡಿ ಡಿವೈಎಸ್‌ಪಿ ಎಂ.ಎಚ್.ಉಮೇಶ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದ್ದು, 98 ದಿನಗಳ ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. 

ಚಾರ್ಜ್‌ಶೀಟ್‌ನಲ್ಲಿ ಏನಿದೆ?: 

ಅಂಜಲಿ ಹಾಗೂ ಗಿರೀಶ್ ಮಧ್ಯೆ ಸ್ನೇಹ ಇತ್ತು. ಮೈಸೂರಿನ ಮಹಾರಾಜ ಹೋಟೆಲ್ ಆವರಣದಲ್ಲಿರುವ ಎಂಎಸ್‌ಸಿ ಪಟ್ ಆ್ಯಂಡ್ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಗಿರೀಶ್‌ನನ್ನು ಭೇಟಿಯಾಗಲು ಅಂಜಲಿ 3 ಬಾರಿ ಮೈಸೂರಿಗೆ ಹೋಗಿದ್ದಳು. ಬಳಿಕ ಇಬ್ಬರ ನಡುವೆ ಮನಃಸ್ತಾಪವಾಗಿದ್ದರಿಂದ ಗಿರೀಶ್‌ಗೆ ಆಕೆ ಸರಿ ಯಾಗಿ ಸ್ಪಂದಿಸುತ್ತಿರಲಿಲ್ಲ. ಇದರಿಂದ ಮನನೊಂದು ಅಂಜಲಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆಗೆ ಬಳಸಿದ ಚಾಕುವನ್ನೂ ಮೈಸೂರಿನಿಂದಲೇ ತಂದಿದ್ದ. ಅಲ್ಲದೆ ತನ್ನ ಸುಳಿವು ಸಿಗಬಾರದೆಂದು ಮಾಸ್ಕ್ ಖರೀದಿಸಿ ಧರಿಸಿದ್ದ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

85 ಜನರ ಸಾಕ್ಷ್ಯ: 

ಗಿರೀಶ್‌ನ ತಾಯಿ, ಆತನೊಂದಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಅಂಜಲಿಯ ಅಜ್ಜಿ, ಸಹೋದರಿ ಯರು, ಘಟನಾ ಸ್ಥಳದ ಮನೆಯ ಸುತ್ತಲಿನ ಮಂದಿ, ಆಟೋಚಾಲಕ ಸೇರಿ 85 ಜನರ ಸಾಕ್ಷ್ಯಗಳ ಜತೆಗೆ ಸಿಸಿಟಿವಿ ದೃಶ್ಯ, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್‌ಎಲ್ ವರದಿ, ಮೊಬೈಲ್ ಫೋನ್ ಇತರ ಅಂಶಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. 

Latest Videos
Follow Us:
Download App:
  • android
  • ios