ನವದೆಹಲಿ (ನ. 23) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಬೈ ಮೂಲದ ಈವೆಂಟ್ ಮ್ಯಾನೇಜರ್ ಮೇಲೆ  ಪಂಚತಾರಾ ಹೋಟೆಲ್ ನಲ್ಲಿ ಅತ್ಯಾಚಾರವಾಗಿದೆ 

ಏರೋಸಿಟಿಯ ಹೋಟೆಲ್ ನಲ್ಲಿ ಇಬ್ಬರು ಪುರುಷರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ಆರೋಪಿಗಳನ್ನು ಸಂದೀಪ್ ಮೆಹ್ತಾ ಅಲಿಯಾಸ್ ಮಿಕ್ಕಿ ಮತ್ತು ನವೀನ್ ದಾವರ್ ಎಂದು ಗುರುತಿಸಲಾಗಿದೆ. ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, ದಾವರ್‌ನನ್ನು ಕಿರುಕುಳ ಆರೋಪದಡಿ ಬಂಧಿಸಲಾಗಿದೆ.

ನವೆಂಬರ್ 20 ರಂದು ಮಹಿಳೆ ಪೊಲೀಸರ ಬಳಿ ಬಂದು ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಕೆಲವು ತಿಂಗಳ ಹಿಂದೆ ಮೆಹ್ತಾನ ಸಂಪರ್ಕ  ಸೋಷಿಯಲ್ ಮೀಡಿಯಾದಿಂದ ಆಗಿತ್ತು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.

ನಿದ್ರಿಸುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..ಬಾಯಿ ಬಿಟ್ಟರೆ ವಿಡಿಯೋ ಇದೆ!

ಕೆಲಸದ ನಿಮಿತ್ತ ಮಹಿಳೆ ನವೆಂಬರ್ 18 ರಂದು ದೆಹಲಿಗೆ ಬಂದಿಳಿದಿದ್ದಾರೆ.  ಮಹಿಳೆ ಪಂಚತಾರಾ ಹೋಟೆಲ್ ನಲ್ಲಿ ರೂಂ ಕಾಯ್ದಿರಿಸಿದ್ದಾರೆ. ನವೆಂಬರ್ 19 ರಂದು ಮಹಿಳೆ ಕೊನಾಟ್ ಪ್ಯಾಲೇಸ್‌ನಲ್ಲಿ ಮೆಹ್ತಾ ಮತ್ತು ಅವರ ಸ್ನೇಹಿತ ನವೀನ್ ಅವರನ್ನು ಭೇಟಿಯಾಗಿದ್ದರು.

ಕೊನಾಟ್ ಪ್ಯಾಲೇಸ್ ನಿಂದ ಹಿಂದಿರುಗುವಾಗ ನವೀನ್ ಮಹಿಳೆಗೆ ಕಿರುಕುಳ ನೀಡಿದ್ದಾನೆ.  ನವೀನ್ ನನ್ನು ಡ್ರಾಪ್ ಮಾಡಿದ ನಂತರ ಮೆಹ್ತಾ ಮತ್ತು ಮಹಿಳೆ ಹೋಟೆಲ್ ಗೆ ಬಂದಿದ್ದಾರೆ.  ಅವಕಾಶ ಬಳಸಿಕೊಂಡು ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮೆಡಿಕಲ್ ಹೆಲ್ಪ್ ಕೇಳಿದರೂ ನೀಡದೆ ಮಹಿಳೆಯನ್ನು ಆನಂದ್ ವಿಹಾರ್ ದಲ್ಲಿ ಇಳಿಸಿ ನಾಪತ್ತೆಯಾಗಿದ್ದಾನೆ. ಮಹಿಳೆ ದೂರಿನಲ್ಲಿ ಈ ಎಲ್ಲ ವಿಚಾರಗಳನ್ನು ಹೇಳಿದ್ದಾರೆ.