ಯುವಕನೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಮರ್ಮಾಘಾತ ನೀಡಿದ್ದಾನೆ. ಕುಡಿದ ಮತ್ತಿನಲ್ಲಿ ಸ್ನೇಹಿತನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು,  ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಒಡಿಶಾ: ಯುವಕನೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಮರ್ಮಾಘಾತ ನೀಡಿದ್ದಾನೆ. ಕುಡಿದ ಮತ್ತಿನಲ್ಲಿ ಸ್ನೇಹಿತನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ 30 ವರ್ಷದ ಅಕ್ಷಯ್ ರೌತ್ ಎಂಬಾತ ತನ್ನ 32 ವರ್ಷದ ಸ್ನೇಹಿತ ಭಾಗ್ಬಾತ್ ದಾಸ್‌ ಖಾಸಗಿ ಭಾಗಕ್ಕೆ ಕತ್ತರಿ ಹಾಕಿದ್ದಾನೆ. ಕೇಂದ್ರಪಾರಾ ಜಿಲ್ಲೆಯಲ್ಲಿ ಬರುವ ರಾಜ್ನಾಗರ್ ಪೊಲೀಸ್ ಠಾಣೆ ಪ್ರದೇಶ ವ್ಯಾಪ್ತಿಗೆ ಬರುವ ಪೆಂಥಾ ಬೀಚ್‌ನಲ್ಲಿ ಕುಡಿದು ಪಾರ್ಟಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಭಗ್ಬಾತ್ ದಾಸ್‌ ಹಾಗೂ ಸ್ನೇಹಿತ ಅಕ್ಷಯ್ ರೌತ್ ( Akshya Rout) ಬೀಚ್‌ನಲ್ಲಿ ಪಾರ್ಟಿ ಮಾಡಲು ಹೋಗಿದ್ದಾರೆ. ನಂತರ ಬೀಚ್‌ನಲ್ಲಿ ಕುಡಿಯುತ್ತಾ ಕುಳಿತ ಇವರಿಗೆ ಕಿಕ್ ಏರಿದ್ದು, ಇಬ್ಬರೂ ಮಾತಿನ ಚಕಮಕಿ ನಡೆಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಇವರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಅಕ್ಷಯ್ ರೌತ್ ಹರಿತವಾದ ಆಯುಧದಿಂದ ಭಗ್ಬಾತ್ ದಾಸ್‌ನ (Bhagabat Das) ಮರ್ಮಾಂಗವನ್ನು ಕತ್ತರಿಸಿದ್ದಾನೆ. 

ಇವರಿಬ್ಬರು ಆಟೋ ಬುಕ್ ಮಾಡಿ ಜೊತೆಯಾಗಿ ಬೀಚ್‌ಗೆ ಪಾರ್ಟಿ ಮಾಡಲು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇವರನ್ನು ಬೀಚ್‌ಗೆ ಬಿಟ್ಟ ಆಟೋ ಚಾಲಕನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾನೆ. ಇತ್ತ ಗಾಯಗೊಂಡ ಭಗ್ಬಾತ್ ದಾಸ್‌ನನ್ನು ರಾಜ್ನಾನಗರದಲ್ಲಿರುವ (Rajnagar) ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ನಂತರ ಆತನನ್ನು ಕಥಕ್‌ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 307 (ಕೊಲೆಗೆ ಯತ್ನಿಸಿದ ಪ್ರಕರಣ) ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ

5 ಮದ್ವೆಯಾದವ 5ನೇ ಹೆಂಡ್ತಿಯಿಂದ ಬರ್ಬರವಾಗಿ ಹತ್ಯೆಯಾದ: ಮರ್ಮಾಂಗ ಕತ್ತರಿಸಿ ಎಸೆದ ಪತ್ನಿ

ಐದು ಮದ್ವೆಯಾದ ವ್ಯಕ್ತಿಯನ್ನು ಆತನ 5ನೇ ಹೆಂಡ್ತಿಯೊಬ್ಬಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೂಲಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ. ಐದು ಮದ್ವೆಯಾಗಿದ್ದ ಈತನನ್ನು ಈತನ 5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ ಆತನ ದೇಹವನ್ನು ದೂರ ಎಸೆಯುವ ಮೊದಲು ಆತನ ಮರ್ಮಾಂಗವನ್ನು ಕತ್ತರಿಸಿ ಎಸೆದಿದ್ದಾಳೆ. 

ಕೊಲೆಯಾದ ಬಿರೇಂದ್ರ ಗುರ್ಜರ್ (Birender Gurjar) ಶವ ಫೆಬ್ರವರಿ 21ರಂದು ಪತ್ತೆಯಾಗಿದ್ದು, ಈ ವೇಳೆ ಆತನ ಮರ್ಮಾಂಗ ಹಾಗೂ ಕುತ್ತಿಗೆಯಲ್ಲಿ ಗಾಯಗಳಿದ್ದವು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದರು. ಇತ್ತ ಮೃತ ಬಿರೇಂದ್ರನ ಪತ್ನಿ ಕಾಂಚನಾ ಗುರ್ಜರ್ (Kanchan Gurjar) ತನ್ನ ಗಂಡನ ಹತ್ಯೆ ಕುರಿತಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ ಸ್ಟೇಷನ್ ಇನ್ಚಾರ್ಜ್‌ ಅರುಣ್ ಪಾಂಡೆ (Arun Pandey) ಹೇಳಿದ್ದಾರೆ.

ಸೆಲ್ಫಿ ಗೀಳಿಗೆ ವಿದ್ಯುತ್‌ ತಗುಲಿ ಮರ್ಮಾಂಗ ಸುಟ್ಟುಕೊಂಡ ವಿದ್ಯಾರ್ಥಿ

ಇದಾದ ಬಳಿಕ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಗಳು ಸ್ನೇಹಿತರು ಸೇರಿದಂತೆ ಎಲ್ಲರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈ ತನಿಖೆ ವೇಳೆ ಮೃತನ ಪತ್ನಿಯನ್ನು ಕೂಡ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ್ದು, ಆಕೆಗೆ ಹಲವು ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ಬಾಯಿಬಿಡಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.