Asianet Suvarna News Asianet Suvarna News

ಸೆಲ್ಫಿ ಗೀಳಿಗೆ ವಿದ್ಯುತ್‌ ತಗುಲಿ ಮರ್ಮಾಂಗ ಸುಟ್ಟುಕೊಂಡ ವಿದ್ಯಾರ್ಥಿ

ವಿದ್ಯುತ್ ಚಾಲಿತ ರೈಲುಗಳು ಸಂಚರಿಸುವ ಇಲ್ಲಿಯ ಶಿರಡಿನಗರದ ರೈಲು ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ವಿದ್ಯುತ್ ತಗುಲಿ ಮರ್ಮಾಂಗಕ್ಕೆ ತೀವ್ರತರ ಗಾಯವಾದ ಘಟನೆ  ನಡೆದಿದೆ.

selfie obsession a student  burned his penius electric touch at hubballi rav
Author
First Published Dec 7, 2022, 10:48 AM IST

ಹುಬ್ಬಳ್ಳಿ (ಡಿ.7) : ವಿದ್ಯುತ್ ಚಾಲಿತ ರೈಲುಗಳು ಸಂಚರಿಸುವ ಇಲ್ಲಿಯ ಶಿರಡಿನಗರದ ರೈಲು ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ವಿದ್ಯುತ್ ತಗುಲಿ ಮರ್ಮಾಂಗಕ್ಕೆ ತೀವ್ರತರ ಗಾಯವಾದ ಘಟನೆ  ನಡೆದಿದೆ. ನಗರದ ವಿನಾಯಕ ಎಂಬಾತನೇ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿ. ಸದ್ಯ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದ್ದು, ರೈಲ್ವೆ ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಸೆಲಿ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪಸರಿಸಿದ್ದರಿಂದ ಬಟ್ಟೆಗೆ ಬೆಂಕಿ ಹತ್ತಿಕೊಂಡು ದೇಹಕ್ಕೆ ಆವರಿಸಿದೆ.  ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ತುಮಕೂರು: ವಿದ್ಯುತ್ ತಗುಲಿ ಜೂನಿಯರ್ ಖ್ಯಾತಿಯ ರವಿಚಂದ್ರನ್ ಸಾವು

ಸೇಲ್ಫಿ ಗೀಳುಗೆ ಬಿದ್ದಿದ್ದ ವಿದ್ಯಾರ್ಥಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ. ಅಲ್ಲಿ ಬರುವ ರಿಯಾಕ್ಷನ್‌ಗಳಿಗೆ ಪ್ರಚೋದನೆಗೊಂಡು ಅಪಾಯಕಾರಿ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದ. ವಿದ್ಯಾರ್ಥಿ ಕಣ್ಣಿಗೆ ಬಿದ್ದಿದ್ದ ಶಿರಡಿನಗರದ ರೈಲು ಹಳಿ. ಹೇಳಿಕೇಳಿ ಇದು ಅಪಾಯಕಾರಿ ಸ್ಥಳ. ಹೈಟೆನ್ಷನ್ ವಿದ್ಯುತ್ ಹರಿಯುತ್ತದೆ ಎಂಥ ಸ್ಥಳದಲ್ಲಿ ಸೆಲ್ಫಿ ತೆಗೆಯಲು ಹೋಗಿದ್ದ ವಿದ್ಯಾರ್ಥಿ ವಿನಾಯಕ. ಸೆಲ್ಫಿ ತೆಗೆಯುವ ವೇಳೆ ವಿದ್ಯುತ್ ತಗುಲಿದೆ. ವಿದ್ಯುತ್ ಸ್ಪರ್ಶದಿಂದ ಮರ್ಮಾಂಗ ಸುಟ್ಟುಹೋಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಮತ್ತೆಂದೂ ಇಂಥ ಹುಚ್ಚಾಟಗಳು ನಡೆಯದಂತೆ ಕಠಿಣ ಕ್ರಮ ಜರುಗಿಸಬಹುದು

ಕಾರು ಮಗುಚಿ ವ್ಯಕ್ತಿ ಸಾವು

ಚನ್ನಪಟ್ಟಣ: ಕಾರು ಮಗುಚಿ ಕಾರಿನಲ್ಲಿದ್ದ ಪ್ರಯಾಣಿಕ ಸಾವನ್ನ​ಪ್ಪಿ​ರುವ ಘಟನೆ ತಾಲೂಕಿನ ಬೆಂಗಳೂರು-ಮೈಸೂರು ಬೈಪಾಸ್‌ ರಸ್ತೆಯ ಲಂಬಾಣಿ ತಾಂಡ್ಯದ ಸಮೀಪ ಸಂಭವಿಸಿದೆ. ಫೈಜಲ… ಪಾಷಾ(30) ಮೃತ ದುರ್ದೈವಿ. ಬೆಂಗಳೂರಿನ ನೀಲಸಂದ್ರ ನಿವಾಸಿ. ಈತ ಕುಟುಂಬದೊಂದಿಗೆ ಕಾರಿನಲ್ಲಿ ಮೈಸೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕ ಬ್ರೇಕ್‌ ಹಾಕಿದ್ದರಿಂದ ಕಾರು ಆಯತಪ್ಪಿ ಮಗುಚಿ ಬಿದ್ದಿದೆ. ತೀವ್ರ ಗಾಯಗೊಂಡಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಸ್ತೆ ಅಪಘಾತದಲ್ಲಿ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಇತರೆ ನಾಲ್ಕು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಹ್ಮಣೀಪುರ ಶಾಲೆಯಲ್ಲಿ ಕಳವು

ಚನ್ನಪಟ್ಟಣ: ಶಾಲಾ ಕೊಠಡಿಯ ಬಾಗಿಲು ಹೊಡೆದು ಬಿಸಿಯೂಟದ ಆಹಾರ ಪದಾರ್ಥಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಬ್ರಹ್ಮಣೀಪುರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಬಾಗಿಲು ಹೊಡೆದಿರುವ ಕಳ್ಳರು ಆಹಾರ ಸಾಮಗ್ರಿಗಳಿದ್ದ ಕೊಠಡಿಗೆ ನುಗ್ಗಿ 650 ಕೆಜಿ ಅಕ್ಕಿ ಹಾಗೂ 50 ಕೆಜಿ ಹಾಲಿನ ಪುಡಿ, ಒಂದು ಯುಪಿಎಸ್‌ ಬ್ಯಾಟರಿಯನ್ನು ಕಳವು ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಗರಾಜಪುರ ಪಿಎಸಿಎಸ್‌ ನ್ನಲ್ಲಿ ಕಳವು

ಚನ್ನಪಟ್ಟಣ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲು ಹೊಡೆದು ಸಂಘದ ಕಚೇರಿಯಲ್ಲಿದ್ದ ಸಿಸಿ ಟಿವಿ, ಹಾರ್ಡ್‌ ಡಿÓ್ಕ… ಹಾಗೂ 350 ರು. ನಗದನ್ನು ಕಳವು ಮಾಡಿರುವ ಘಟನೆ ತಾಲೂಕಿನ ಸಿಂಗರಾಜಪುರದಲ್ಲಿ ನಡೆದಿದೆ. ಸಂಘದ ಬೀರುವಿನಲ್ಲಿರಿಸಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಸಿಸಿ ಕ್ಯಾಮರಾ ಹಾರ್ಡ್‌ ಡಿÓ್ಕ… ಹಾಗೂ ನಗದನ್ನು ಕಳವು ಮಾಡಿದ್ದಾರೆ. ಸಂಘದ ಪ್ರಭಾರ ಕಾರ್ಯದರ್ಶಿ ಸಿದ್ದರಾಮು ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಂಗರಾಜಪುರ ಪಿಎಸಿಎಸ್‌ನಲ್ಲಿ ಹಿಂದಿನ ಮುಖ್ಯಕಾರ್ಯನಿರ್ವಾಹಕ ಹಣದ ಅವ್ಯವಹಾರ ಮಾಡಿದ್ದಾರೆಂದು ಪ್ರಕರಣ ದಾಖಲಾಲಾಗಿತ್ತು. ಇದೀಗ ಸಂಘದ ಹಾರ್ಡ್‌ ಡಿಸ್‌್ಕ ಕಳÜವಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

Junior Ravichandran ವಿದ್ಯುತ್ ತಗುಲಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು!

ಮಾರಣಾಂತಿಕ ಹಲ್ಲೆ: ವ್ಯಕ್ತಿ ಸಾವು

ಚನ್ನಪಟ್ಟಣ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನ​ಪ್ಪಿ​ರುವ ಘಟನೆ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಶಿವಪ್ರಕಾಶ್‌ ಮೃತರು. ನ.29ರಂದು ಗ್ರಾಮದ ಈತನ ಸ್ನೇಹಿತ ಅಭಿ ಹಾಗೂ ಇತರರು ಮರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ಶಿವಪ್ರಕಾಶ್ನನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.5ರಂದು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿದಂತೆ ನಾಲ್ಕು ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios