ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಅಬ್ದುಲ್ಲಾಪುರಂಪೇಟೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ಪುರಂಮೇಟ್ ಪೊಲೀಸರು ಆರೋಪಿಯ ಗೆಳತಿ ಹಾಗೂ ಗೆಳೆಯನನ್ನು ಬಂಧಿಸಿದ್ದಾರೆ.
ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಅಬ್ದುಲ್ಲಾಪುರಂಪೇಟೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ಪುರಂಮೇಟ್ ಪೊಲೀಸರು ಆರೋಪಿಯ ಗೆಳತಿ ಹಾಗೂ ಗೆಳೆಯನನ್ನು ಬಂಧಿಸಿದ್ದಾರೆ. ತ್ರಿಕೋನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ಪ್ರಕರಣ ನಡೆದಿದೆ. ಬುಡಕಟ್ಟು ಸಮುದಾಯದ ವಿದ್ಯಾರ್ಥಿ 22 ವರ್ಷದ ಯುವಕ ನವೀನ್ ಎಂಬಾತನನ್ನು ಹೃದಯ ಬಗೆದು ಅದನ್ನು ಹಲವು ಪೀಸುಗಳಾಗಿ ಕತ್ತರಿಸಿ ಆತನ ಮರ್ಮಾಂಗವನ್ನು ಸಹ ಹಲವು ತುಂಡುಗಳಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಅಬ್ದುಲ್‌ಪುರಂಮೇಟ್ ಪೊಲೀಸರು ಹರಿಹರಕೃಷ್ಣ ಎಂಬ ಪ್ರಮುಖ ಆರೋಪಿಯನ್ನು ಈ ಮೊದಲು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದ ಬಳಿಕ ಆತನ ಗೆಳತಿ ನಿಹಾರಿಕಾ ಹಾಗೂ ಗೆಳೆಯ 21 ವರ್ಷದ ಹಸ್ಸನ್ ಎಂಬಾತನನ್ನು ಬಂಧಿಸಿದ್ದಾರೆ. ಹಸ್ಸನ್ ಆರೋಪಿ ಹರಿಹರಕೃಷ್ಣಗೆ ಆಶ್ರಯ ನೀಡಿದ್ದಲ್ಲದೇ ಮೃತ ನವೀನ್ ದೇಹದ ತುಂಡು ತುಂಡಾದ ಭಾಗಗಳನ್ನು ಮಣ್ಣು ಮಾಡಲು ಸಹಾಯ ಮಾಡಿದ್ದ. ಇನ್ನು ಗೆಳತಿ ನಿಹಾರಿಕಾಳನ್ನು ಕೊಲೆ ಪ್ರಕರಣ ತಿಳಿದು ಅದನ್ನು ಮುಚ್ಚಿಟ್ಟಿದ್ದಕ್ಕೆ ಬಂಧಿಸಲಾಗಿದೆ.
ಶ್ರದ್ಧಾ ಮೂಳೆ ಗ್ರೈಂಡರ್‌ನಲ್ಲಿ ಪುಡಿ ಮಾಡಿದ್ದ ಅಫ್ತಾಬ್!
ಫೆ.17 ರಂದು ಆರೋಪಿ ಹರಿಹರಕೃಷ್ಣ, ಕೊಲೆಯಾದ ನವೀನ್‌ನನ್ನು ಅಬ್ದುಲ್‌ಪುರಂಮೇಟ್ ಸಮೀಪದ ರಮಾದೇವಿ ಶಾಲೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಬಳಿಕ ಅಲ್ಲಿ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದ. ಬಳಿಕ ನವೀನ್ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದ, ಅಲ್ಲದೇ ಆತನ ಹೃದಯವನ್ನು ಬಗೆದಿದ್ದ ಅಲ್ಲದೇ ಹೊಟ್ಟೆಯ ಭಾಗವನ್ನು ಕೂಡ ತುಂಡು ತುಂಡಾಗಿ ಕತ್ತರಿಸಿದ್ದಲ್ಲದೇ ಖಾಸಗಿ ಭಾಗವನ್ನು ಕೂಡ ಹಲವು ತುಂಡುಗಳಾಗಿ ಮಾಡಿದ್ದ. ಹೀಗೆ ಭೀಕರವಾಗಿ ಹತ್ಯೆ ಮಾಡಿ ಹರಿಹರಕೃಷ್ಣ ನಂತರ ಆತನ ದೇಹದ ಭಾಗಗಳನ್ನು ತನ್ನ ಬಳಿ ಇದ್ದ ಚೀಲವೊಂದರಲ್ಲಿ ತುಂಬಿಸಿಕೊಂಡು ಬ್ರಹ್ಮನಪಲ್ಲಿ (Brahmanpally) ಬಳಿ ಇರುವ ಗೆಳೆಯ ಹಸನ್ ಮನೆಗೆ ಬಂದಿದ್ದ. ಅಲ್ಲಿ ಗೆಳೆಯ ಹಸನ್‌ಗೆ ಈ ಕೊಲೆ ಪ್ರಕರಣದ ಬಗ್ಗೆ ತಿಳಿಸಿ ಸಹಾಯ ಕೇಳಿದ್ದ. ನಂತರ ಹರಿಹರಕೃಷ್ಣ ಹಾಗೂ ಹಸನ್ ಇಬ್ಬರೂ ಜೊತೆಯಾಗಿ ಮನ್ನೆಗುಡ್ಡ(Manneguda) ದ ನಿರ್ಜನ ಪ್ರದೇಶಕ್ಕೆ ತೆರಳಿ ನವೀನ್ ಮೃತದೇಹವಿದ್ದ ಚೀಲವನ್ನು ಅಲ್ಲಿ ಎಸೆದು ಬಂದಿದ್ದಾರೆ. ನಂತರ ಹಸನ್ ಮನೆಯಲ್ಲೇ ಹರಿಹರಕೃಷ್ಣ ರಾತ್ರಿ ಕಳೆದಿದ್ದಾನೆ.
ನಂತರ ಫೆ.18 ರಂದು ಗೆಳತಿ ನಿಹಾರಿಕಾಳನ್ನು (Niharika) ಹರಿಹರಕೃಷ್ಣ (Hariharakrishna) ಹಸ್ತಿನಾಪುರಂನಲ್ಲಿ ಭೇಟಿ ಆಗಿದ್ದು, ತಾನು ಮಾಡಿದ ಕೊಲೆಯ ಬಗ್ಗೆ ಆಕೆಗೆ ತಿಳಿಸಿದ್ದಾಳೆ. ಅಲ್ಲದೇ ಆಕೆಯಿಂದ ಖರ್ಚಿಗಾಗಿ 1500 ರೂಪಾಯಿಯನ್ನು ಪಡೆದ ಆತ ಫೆ.20 ರಂದು ಆಕೆಗೆ ಕೊಲೆ ನಡೆದ ಸ್ಥಳವನ್ನು ದೂರದಿಂದ ತೋರಿಸಿದ್ದಾನೆ. ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಇಬ್ಬರೂ ಒಂದೆಡೆ ರಾತ್ರಿ ಊಟ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣವಿಲ್ಲದ್ದರೂ ಆಪಲ್ ಮೊಬೈಲ್ ಆರ್ಡರ್: ಡೆಲಿವರಿ ಬಾಯ್‌ನನ್ನು ಕೊಲೆ ಮಾಡಿ ಪಾರ್ಸೆಲ್ ಕಿತ್ತುಕೊಂಡ ಗ್ರಾಹಕ
ಬಂಧನಕ್ಕೂ ಮೊದಲು ಆರೋಪಿ ಹರಿಹರಕೃಷ್ಣ, ನವೀನ್ ಮೃತದೇಹವನ್ನು ಸುಡಲು ಬಯಸಿದ್ದು, ಇದಕ್ಕಾಗಿ ಹಸನ್ ಸಹಾಯ ಪಡೆದು ಇಬ್ಬರು ಸೇರಿ ಮನ್ನೆಗುಡ್ಡದಲ್ಲಿ ಶವ ಎಸೆದ ಸ್ಥಳದಿಂದ ಶವದ ಭಾಗಗಳನ್ನು ಅಬ್ದುಲ್‌ಪುರಂಮೇಟ್‌ಗೆ ತಂದಿದ್ದಾರೆ. ನಂತರ ನಿಹಾರಿಕಾ ಮನೆಗೆ ಭೇಟಿ ನೀಡಿದ ಹರಿಹರಕೃಷ್ಣ ಅಲ್ಲಿ ಯಾರು ಇಲ್ಲದ ಕಾರಣ ಅಲ್ಲೇ ಸ್ನಾನ ಮಾಡುತ್ತಿದ್ದ. ಅಲ್ಲದೇ ಇಬ್ಬರೂ ತಮ್ಮ ಫೋನ್‌ನಲ್ಲಿದ್ದ ಸಂವಹನಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಡಿಲೀಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಇತ್ತ ಪ್ರಮುಖ ಆರೋಪಿ ಹರಿಹರಕೃಷ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಇತ್ತೀಚೆಗೆ ಹೀಗೆ ಭೀಕರವಾಗಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಕಳೆದ ವರ್ಷ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣನಂತರ ದೇಶದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು ಗೆಳೆಯ ಅಫ್ತಾಬ್ ಕೊಲೆ ಮಾಡಿ 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ. ಬಳಿಕ ತಿಂಗಳ ಕಾಲ ಸ್ವಲ್ಪ ಸ್ವಲ್ಪವೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೂರದ ಕಾಡಿನಲ್ಲಿ ಎಸೆದು ಬರುತ್ತಿದ್ದ. ಶ್ರದ್ಧಾ ಪೋಷಕರು ಮಗಳು ನಾಪತ್ತೆಯಾದಸ ಬಗ್ಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.