ಬಾಲಕನೋರ್ವ ಡ್ರಗ್ ಸೇವಿಸಿ ಪೋಷಕರ ಬಳಿ ಹಣ ನೀಡುವಂತೆ ಅವರನ್ನು ಹೊಡೆದು ಬಡೆದು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳ: ಬಾಲಕನೋರ್ವ ಡ್ರಗ್ ಸೇವಿಸಿ ಪೋಷಕರ ಬಳಿ ಹಣ ನೀಡುವಂತೆ ಅವರನ್ನು ಹೊಡೆದು ಬಡೆದು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಲ್ಲೇ ಸುಶಿಕ್ಷಿತ ರಾಜ್ಯ ಎನಿಸಿರುವ ದೇವರನಾಡು ಕೇರಳದಲ್ಲಿ(Kerala) ಈ ಆಘಾತಕಾರಿ ಘಟನೆ ನಡೆದಿದೆ. ಇದು ಜುಲೈನಲ್ಲಿ ನಡೆದ ಘಟನೆಯ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್ ಆಗಿದೆ. ಈ ಬಾಲಕ ಡ್ರಗ್‌ನ ದುಶ್ಚಟಕ್ಕೆ ಒಳಗಾಗಿ ಈ ರೀತಿ ಆಡುತ್ತಿದ್ದಾನೆ ಎಂದು ತಿಳಿದು ಬಂದಿದ್ದಾನೆ.
ಈಗಷ್ಟೇ ಹರೆಯಕ್ಕೆ ಕಾಲಿರಿಸಿದ ಬಾಲಕನ ಈ ಸಹಿಸಿಕೊಳ್ಳಲಾಗದ ನಡವಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈತ ಹಣ ನೀಡುವಂತೆ ಆಗ್ರಹಿಸಿ ಜೋರಾಗಿ ಕಿರುಚಾಡುತ್ತಿದ್ದು, ಮನೆಯ ಜಗಲಿ ಮೇಲೆ ಕುಳಿತ ವೃದ್ಧೆಯ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಜೊತೆಗೆ ಮತ್ತೊಬ್ಬರು ಮಹಿಳೆಯ ಮೇಲೆ ಚಪ್ಪಲಿ ತೂರುತ್ತಿದ್ದಾನೆ. ಈ ಬಾಲಕನ ಈ ವಿಚಿತ್ರ ನಡವಳಿಕೆಯನ್ನು ಸಮೀಪದಲ್ಲೇ ಇದ್ದವರು ಯಾರೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ.
ಈ ವೇಳೆ ಮಹಿಳೆಯೊಬ್ಬರು ಅವನನ್ನು ಅವನಷ್ಟಕ್ಕೆ ಬಿಟ್ಟು ಬಿಡಿ ಏನೂ ಬೇಕಾದರೂ ಮಾಡಲಿ ಎಂದು ಮಲೆಯಾಳಿ ಭಾಷೆಯಲ್ಲಿ (Maleyali Language) ಹೇಳುತ್ತಿರುವುದು ಕೇಳುತ್ತಿದೆ. ಜುಲೈನಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಸುಶಿಕ್ಷಿತರು ಎನಿಸಿರುವ ಕೇರಳದಲ್ಲಿ ದುಶ್ಚಟಗಳನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಯುವ ಸಮೂಹ ಡ್ರಗ್‌ಗಳಿಗೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಅವರು ಆರೋಪಿಸಿದರು. ಡ್ರಗ್‌ಗೆ ದಾಸನಾದ ಪುತ್ರನೋರ್ವನಿಗೆ ತಾಯಿಯೊಬ್ಬಳು ಕಂಬಕ್ಕೆ ಕಟ್ಟಿ ಕಣ್ಣುಗಳಿಗೆ ಮೆಣಸಿನ ಪುಡಿ ಹಾಕಿ ಥಳಿಸುತ್ತಿರುವ ವಿಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಸೋನಾಲಿ ಪೋಗಟ್ ಕೇಸ್: ರೆಸ್ಟೋರೆಂಟ್ ಮಾಲೀಕನ ಬಂಧನ, ಬಾಥ್‌ರೂಮ್‌ನಲ್ಲಿ ಸಿಕ್ತು ಡ್ರಗ್ಸ್!
ಇತ್ತೀಚೆಗೆ ಯುವ ಸಮೂಹ ಡ್ರಗ್‌ಗೆ ಹೆಚ್ಚೆಚ್ಚು ದಾಸರಾಗುತ್ತಿದ್ದಾರೆ. ಯುವ ಸಮೂಹ ಹಾಗೂ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿರುವ ಡ್ರಗ್ ಪೆಡ್ಲರ್‌ಗಳ ಹಾವಳಿಗೆ ಪೋಷಕರು ದಂಗಾಗಿದ್ದಾರೆ. ಪ್ರಮುಖ ನಗರಗಳ ಪ್ರತಿಷ್ಠಿತ ಕಾಲೇಜುಗಳ ಸುತ್ತಮುತ್ತ ಡ್ರಗ್ ಪೆಡ್ಲರ್‌ಗಳು ಸುತ್ತುತ್ತಾ ಸಿಗರೇಟ್‌ಗಳಲ್ಲಿ ತಿನಿಸುಗಳಲ್ಲಿ ಡ್ರಗ್‌ಗಳನ್ನು ಕದ್ದುಮುಚ್ಚಿ ಮಾರಾಟ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಡ್ರಗ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟಲು ಪೊಲೀಸರು ಹಲವು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು, ಅನೇಕ ಖದೀಮರು ರಂಗೋಲಿ ಕೆಳಗೆ ನುಸುಳಿ ಎಸ್ಕೇಪ್ ಆಗುತ್ತಿದ್ದಾರೆ.
ಉಡುಪಿಗೆ ಎಂಟ್ರಿ ಆಗುತ್ತಿದ್ದಂತೆ ಡ್ರಗ್ಸ್ ವಿರುದ್ಧ ಸಮರ ಸಾರಿದ ಎಸ್ಪಿ
ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಆ ದಿನವೇ ಡ್ರಗ್ ಜಾಲದ ಮೇಲೆ ದಾಳಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ಉಪ ವಿಭಾಗದ ಗಂಗೊಳ್ಳಿ ಠಾಣೆಯಲ್ಲಿ ಒಂದು ಹಾಗೂ ಕುಂದಾಪುರ ಠಾಣೆಯಲ್ಲಿ ಪ್ರತ್ಯೇಕ ಮೂರು ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 9 ಜನರನ್ನು ವಶಕ್ಕೆ ಪಡೆದಿದ್ದರು.
ಜೈಲಿನಿಂದ ಬಂದ ಮೇಲೂ ಮತ್ತೆ ಡ್ರಗ್ಸ್ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ
ಕುಂದಾಪುರ ನಗರ ಠಾಣಾ ಉಪನಿರೀಕ್ಷಕ ಸದಾಶಿವ ಗವರೋಜಿ ಅವರು ಕೋಡಿ ಬೀಚ್ ನಲ್ಲಿ ಗಸ್ತು ತಿರುಗುತ್ತಿದ್ದಾಗ ಅನುಮಾಸ್ಪದ ವ್ಯಕ್ತಿಯನ್ನು ತಪಾಸಣೆ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ಖಚಿತಗೊಂಡಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ಕುಂದಾಪುರ ಗ್ರಾಮಾಂತರ ಪಿ.ಎಸ್.ಐ ಪವನ್ ರಾತ್ರಿ ಗಸ್ತು ತಿರುಗುತ್ತಿದ್ದಾಗ ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಬಳಿ ಗಾಂಜಾ ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಓರ್ವ ಸಿಕ್ಕಿಬಿದ್ದಿದ್ದಾನೆ. ಅನುಮಾನದ ಮೇಲೆ ಆತನಿಗೆವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಸುದೀಪ್ ವಶಕ್ಕೆ ಪಡೆದ ಆರೋಪಿ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.