ಸೋನಾಲಿ ಪೋಗಟ್ ಕೇಸ್: ರೆಸ್ಟೋರೆಂಟ್ ಮಾಲೀಕನ ಬಂಧನ, ಬಾಥ್‌ರೂಮ್‌ನಲ್ಲಿ ಸಿಕ್ತು ಡ್ರಗ್ಸ್!
ಟಿಕ್ ಟಾಕ್ ಸ್ಟಾರ್ ಹಾಗೂ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸ್ ದೊಡ್ಡ ಕ್ರಮ ಕೈಗೊಂಡಿದ್ದಾರೆ. ಸೋನಾಲಿ ಪೋಗಟ್ ತಂಗಿದ್ದ ಗೋವಾದ ಕರ್ಲಿ ಕ್ಲಬ್ ಮಾಲೀಕನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರಕರಣದಲ್ಲಿ ಸೋನಾಲಿ ಅವರ ಪಿಎ ಸುಧೀರ್ ಸಂಗ್ವಾನ್ ಹಾಗೂ ಸುಖ್‌ವಿಂದರ್ ಸಿಂಗ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಪಣಜಿ (ಆ.27): ಟಿಕ್ ಟಾಕ್ ತಾರೆ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಗೋವಾದ ಕರ್ಲಿ ಕ್ಲಬ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಕ್ಲಬ್‌ನ ಬಾಥ್‌ರೂಮ್‌ನಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೋಗಟ್‌ನ ಪಿಎ ಸುಧೀರ್ ಸಾಂಗ್ವಾನ್, ಕರ್ಲಿ ಕ್ಲಬ್‌ನ ಮಾಲೀಕ ಸುಖ್ವಿಂದರ್ ಸಿಂಗ್ ಮತ್ತು ಡ್ರಗ್ ಪೆಡ್ಲರ್ ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ಬಂಧಿಸಿದ ಆರೋಪಿಗಳ ಪೈಕಿ ಒಬ್ಬ ಸೋನಾಲಿ ಪೋಗಟ್ ಅವರಿಗೆ ಡ್ರಗ್ಸ್ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಂಜುನಾ ಬೀಚ್‌ನಲ್ಲಿ ಸೋನಾಲಿ ಪೋಗಟ್ ಇತರ ಗೆಳೆಯರೊಂದಿಗೆ ಆಟವಾಡುವ ವೇಳೆ ಅವರು ಕುಡಿಯುತ್ತಿದ್ದ ಡ್ರಿಂಕ್ಸ್‌ನಲ್ಲಿ ಡ್ರಗ್ಸ್ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದರ ನಡುವೆ ಕರ್ಲಿ ಕ್ಲಬ್ ಮಾಲೀಕನನ್ನು ಬಂಧಿಸುವ ಮೊದಲು, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಕುಟುಂಬದ ಆರೋಪದ ನಂತರ ಪೊಲೀಸರು ಸುಧೀರ್ ಮತ್ತು ಸುಖ್‌ವಿಂದರ್ ಅವರನ್ನು ಬಂಧನ ಮಾಡಿದ್ದರು. ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ವಾಸಿ ಅವರು ಆಗಸ್ಟ್ 22 ರಂದು ಫೋಗಟ್ ಅವರೊಂದಿಗೆ ಗೋವಾ ತಲುಪಿದ್ದರು. ವಾಸ್ತವವಾಗಿ, ಮರಣೋತ್ತರ ಪರೀಕ್ಷೆಯ ವರದಿಯು ಸೋನಾಲಿಯ ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ ಎಂದೂ ಬಹಿರಂಗ ಮಾಡಿದೆ.
ಸಾವಿನ ಬಗ್ಗೆ ಸಾಕಷ್ಟು ಅನುಮಾನ: ಅದೇ ಸಮಯದಲ್ಲಿ, ಗೋವಾ ಪೊಲೀಸರು (Goa Police) ಸಿಸಿಟಿವಿ ಫೂಟೇಜ್ ಅನ್ನು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಸುಧೀರ್, ಸೋನಾಲಿಗೆ (Sonali Phogat) ಬಾಟಲಿಯಿಂದ ಏನೋ ನೀಡುತ್ತಿರುವುದು ಕಂಡುಬಂದಿದೆ, ಆದರೆ ಟಿಕ್ ಟಾಕ್ ತಾರೆ ಪದೇ ಪದೇ ಆತನನ್ನು ತಡೆಯುತ್ತಿದ್ದರು. ಬಾಟಲಿಯಲ್ಲಿದ್ದ ಡ್ರಿಂಕ್ಸ್‌ಅನ್ನು ಕುಡಿಯಲು ಸೋನಾಲಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದೀಗ ಇದು ಸೋನಾಲಿಗೆ ನೀಡುತ್ತಿರುವ ಎಂಡಿಎಂಎ ಡ್ರಗ್ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನು ಖಚಿತಪಡಿಸಲು ರಾಸಾಯನಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಆಗಸ್ಟ್ 23 ರಂದು 42 ವರ್ಷದ ಸೋನಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದರು. ಆದರೆ, ಸೋನಾಲಿ ಫೋಗಟ್ ಅವರ ಸಹೋದರಿ ಆಕೆಯ ಸಾವನ್ನು ಪಿತೂರಿ ಎಂದು ಹೇಳಿದ್ದಾರೆ.
ಕೊಲೆಗೂ ಮುನ್ನ ಸೋನಾಲಿ ರೇಪ್: ಸಹೋದರ ರಿಂಕು ಆರೋಪ!
ಗೋವಾ ಐಜಿಪಿ ಓಮ್ವೀರ್ ಸಿಂಗ್ ಬಿಷ್ಣೋಯಿ (Omir Singh Bishnoi) ಪ್ರಕಾರ, ಪೋಗಟ್ ಅವರ ಸಹೋದರ ರಿಂಕು ಢಾಕಾ, ಸೋನಾಲಿ ಅವರ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಲಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರು ನೀಡಿದ್ದುರ. ಆದರೆ, ಮರಣೋತ್ತರ ವರದಿಯಲ್ಲಿ ಇಂಥ ಯಾವುದೇ ಘಟನೆಯಾಗಿರುವ ಬಗ್ಗೆ ಸಾಕ್ಷಿ ಇಲ್ಲ ಎಂದು ಹೇಳಿದ್ದಾರೆ.
6 ವರ್ಷಗಳ ಹಿಂದೆ ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಸೋನಾಲಿ ಫೋಗಟ್ ಅವರ ಪತಿ
ಹೃದಯಾಘಾತದಿಂದ ಆದ ಸಾವಲ್ಲ: ಇದೇ ವೇಳೆ ಹೃದಯಾಘಾತದಿಂದ ಸೋನಾಲಿ ಪೋಗಟ್ ಸಾವು ಕಂಡಿರುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿ ಹಾಕಿದ್ದಾರೆ. ಹೃದಯಾಘಾತದಿಂದ ಸಾವಾಗಿರುವ ಸಾಧ್ಯತೆ ಕಡಿಮೆ. ಪೋಗಟ್ ಅವರಿಗೆ ಸಿಂಥೆಟಿಕ್ ಡ್ರಗ್ ಅನ್ನು ನೀಡಲಾಗಿದೆ. ಬಹುಶಃ ಇದರಿಂದಲೇ ಅವರು ಸಾವು ಕಂಡಿರಬಹುದು ಎಂದಿದ್ದಾರೆ. 'ಸಿಸಿಟಿವಿ ದೃಶ್ಯವಾವಳಿಗಳನ್ನು ನೋಡಿದರೆ, ಸುಧೀರ್ ಸಂಗ್ವಾನ್ ಹಾಗೂ ಸುಖ್‌ವಿಂದರ್, ಸೋನಾಲಿ ಪೋಗಟ್ ಅವರ ಜೊತೆಗೂಡಿ ಪಾರ್ಟಿ ಮಾಡಿರುವುದು ಕಂಡು ಬಂದಿದೆ. ಈ ದೃಶ್ಯದಲ್ಲಿಯೇ ಒಬ್ಬ ವ್ಯಕ್ತಿಯೊಬ್ಬ ಆಕೆಗೆ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡಿರುವುದು ಕಂಡು ಬಂದಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಆತ ಇದನ್ನು ಒಪ್ಪಿಕೊಂಡಿದ್ದಾನೆ' ಎಂದು ಹೇಳಿದ್ದಾರೆ.