ಜೈಲಿನಿಂದ ಬಂದ ಮೇಲೂ ಮತ್ತೆ ಡ್ರಗ್ಸ್‌ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ

ಬಂಧಿತ ಆರೋಪಿಗಳಿಂದ 561 ಗ್ರಾಂ ಎಂಡಿಎಂಎ ಹಾಗೂ ಕೋಕೇನ್‌ ಸೇರಿದಂತೆ 95 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ 

Four Arrested For Drugs Racket in Bengaluru grg

ಬೆಂಗಳೂರು(ಆ.27):  ನಗರದಲ್ಲಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಸಿಸಿಬಿ ಹಾಗೂ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಮೂನಫಿಸ್‌ ಅಲಿಯಾಸ್‌ ಟೋನಿ, ನೈಜೀರಿಯಾ ಮೂಲದ ಮೂಸಸ್‌ ಹಾಗೂ ಆತನ ಇಬ್ಬರು ಸ್ನೇಹಿತರು ಬಂಧಿತರಾಗಿದ್ದು, ಆರೋಪಿಗಳಿಂದ 561 ಗ್ರಾಂ ಎಂಡಿಎಂಎ ಹಾಗೂ ಕೋಕೇನ್‌ ಸೇರಿದಂತೆ .95 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ.

ಹೆಣ್ಣೂರು ಸಮೀಪ ಡ್ರಗ್ಸ್‌ ಪೂರೈಕೆಗೆ ಬಂದಾಗ ನೈಜೀರಿಯಾ ಪ್ರಜೆಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ತಂಡದಿಂದ ಸುಮಾರು .60 ಲಕ್ಷ ಮೌಲ್ಯದ 561 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನನ್ನು ಕಳೆದ ವರ್ಷ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು, ಜಾಮೀನು ಪಡೆದು ಜೈಲಿನಿಂದ ಹೊರ ಬಂದ ನಂತರ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ದೆಹಲಿ ಮೂಲದ ಪೂರೈಕೆದಾರರಿಂದ ಡ್ರಗ್ಸ್‌ ಖರೀದಿಸಿ ನಗರದಲ್ಲಿ ಇವರು ಮಾರಾಟ ಮಾಡುತ್ತಿದ್ದರು. ವ್ಯಾಪಾರಿ ವೀಸಾದಡಿ ಆರೋಪಿಗಳು ಭಾರತಕ್ಕೆ ಬಂದಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

1,000 ಕೋಟಿ ರೂ. ಮೌಲ್ಯದ ಮಿಯಾಂವ್ ಮಿಯಾಂವ್ ಡ್ರಗ್ಸ್ ವಶಪಡಿಸಿಕೋಮಡ ಗುಜರಾತ್‌ ಎಟಿಎಸ್‌

ದುಬೈಯಿಂದ ಗಡಿ ಪಾರಾಗಿದ್ದ ಟೋನಿ

ಎಚ್‌ಬಿಆರ್‌ ಲೇಔಟ್‌ನ 3ನೇ ಹಂತದ ಸರ್ವಿಸ್‌ ರಸ್ತೆ ಬಳಿ ಡ್ರಗ್ಸ್‌ ಮಾರಾಟಕ್ಕೆ ಯತ್ನಿಸಿದ್ದಾಗ ಟೋನಿ ಬಾಣಸವಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳ ಮೂಲದ ಟೋನಿ ಕ್ರಿಮಿನಲ್‌ ಹಿನ್ನಲೆಯುಳ್ಳವನಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ದುಬೈಗೆ ಹೋಗಿದ್ದ. ಕೆಲ ತಿಂಗಳ ನಂತರ ಹಣದಾಸೆಗೆ ದುಬೈನಲ್ಲಿ ಕೂಡಾ ಡ್ರಗ್‌್ಸ ದಂಧೆಗಿಳಿದು ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ನಂತರ ಆತನನ್ನು ದುಬೈ ಪೊಲೀಸರು ಗಡಿಪಾರು ಮಾಡಿದ್ದರು. ಕೇರಳಕ್ಕೆ ಮರಳಿದ ಟೋನಿ, ಬೆಂಗಳೂರಿಗೆ ಬಂದು ಡ್ರಗ್ಸ್‌ ದಂಧೆ ಶುರು ಮಾಡಿದ್ದ. ಎಚ್‌ಬಿಆರ್‌ ಲೇಔಟ್‌ನಲ್ಲಿ ನೆಲೆಸಿದ್ದ ಆತ, ಹೊರ ರಾಜ್ಯಗಳಿಂದ ಡ್ರಗ್ಸ್‌ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಯಿಂದ .35 ಲಕ್ಷ ಮೌಲ್ಯದ ಎಕ್ಸ್‌ಟಸಿ ಎಂಡಿಎಂಎ ಹಾಗೂ ಕೊಕೇನ್‌ ಜಪ್ತಿ ಮಾಡಲಾಗಿದೆ. ಈತನ ಸಂಪರ್ಕದಲ್ಲಿದ್ದವರ ಪತ್ತೆಗೆ ತನಿಖೆ ಮುಂದುವರೆಸಿದೆ ಎಂದು ಬಾಣಸವಾಡಿ ಠಾಣೆ ಪೊಲೀಸರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios