ಮುದ್ದೇಬಿಹಾಳ(ನ.18): ತಾಲೂಕಿನ ಮುದ್ನಾಳ ವ್ಯಾಪ್ತಿಯ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಹತ್ಯೆಯಾದ ದಂಪತಿಯನ್ನ ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದ್ದು, ಶಾಂತಿಲಾಲ ದೇವಲಪ್ಪ ರಾಠೋಡ(50) ಈತನ ಪತ್ನಿ ರುಕ್ಮಿಣಿ ಶಾಂತಿಲಾಲ ರಾಠೋಡ(45) ಹತ್ಯೆಯಾದವರು. 

ತಂಗಿಯ ಚುಡಾಯಿಸಿದನ್ನು ಪ್ರಶ್ನೆ ಮಾಡಿದ್ದಕ್ಕೆ ಅಣ್ಣನ ಗುಂಡಿಟ್ಟು ಕೊಂದರು!

ಈ ದಂಪತಿ ಕಳೆದ ವರ್ಷಗಳಿಂದ ಹಳ್ಳದ ತಾಂಡಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿದ್ದು ಪ್ರಕರಣ ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆದರೆ, ಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್‌ ಇಲಾಖೆಯವರು ತಿಳಿಸಿದ್ದಾರೆ.