ಮೀರತ್ (ನ. 13)    ಸಹೋದರಿಗೆ  ಕಿರುಕುಳ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.  ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದು ಪ್ರಶ್ನೆ ಮಾಡಿದ ಹುಡುಗಿಯ ಅಣ್ಣನನ್ನು  ಕಿರುಕುಳ ನೀಡುತ್ತಿದ್ದ ವ್ಯಕ್ತಿ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

ಮನೆಯಲ್ಲೆ ಸಣ್ಣ ಅಂಗಡಿ ನಡೆಸುತ್ತಿದ್ದ ಸಹೋದರ ಬ್ಯಾಟರಿ ತಯಾರಿಕೆ  ಕೆಲಸವನ್ನು ಮಾಡಿಕೊಂಡಿದ್ದ. ಗುರುವಾರ ಮುಂಜಾನೆ ಅಂಗಡಿಗೆ  ಬಂದ ಪಕ್ಕದ ಮನೆಯ ಕಪಿಲ್  ಎಂಬಾತ ಸಕ್ಕರೆ ಕೊಡುವಂತೆ ಕೇಳಿದ್ದಾನೆ. ಇದಕ್ಕೆ  ಹತ್ಯೆಗೀಡಾದ ಅಂಗಡಿ ಮಾಲೀಕ ರಾಮವೀರ್ ಅಂಗಡಿ ಇಷ್ಟು ಬೇಗನೆ ತೆರಯಲ್ಲ, ಸ್ವಲಪ ಸಮಯ ಬಿಟ್ಟು ಬನ್ನಿ ಎಂದು ತಿಳಿಸಿದ್ದಾನೆ.

ಭೀಮಾತೀರದ ಫೈರಿಂಗ್ ಪ್ರಕರಣಕ್ಕೆ ರೋಚಕ ತಿರುವು

ಅಂತೂ ಒತ್ತಾಯದ ಮೇರೆಗೆ ಅಂಗಡಿ ತೆರೆದು ಸಕ್ಕರೆ ಪ್ಯಾಕ್ ಮಾಡುತ್ತಿದ್ದಾಗ ಕಪಿಲ್ ಜತೆ ಬಂದಿದ್ದ ಆಕಾಶ್ ಎಂಬಾತ  ಗುಂಡು ಹಾರಿಸಿದ್ದಾಣೆ. ನಂತರ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.

ಒತ್ತಾಯದ ನಂತರ ರಾಮ್‌ವೀರ್ ಅಂಗಡಿಯನ್ನು ತೆರೆದರು. ಅವನು ಸಕ್ಕರೆ ಪ್ಯಾಕ್ ಮಾಡಲು ಪ್ರಾರಂಭಿಸಿದಾಗ, ಕಪಿಲ್ ಸಹೋದರ ಆಕಾಶ್ ಬಲಿಪಶುವನ್ನು ಅವನ ಕುತ್ತಿಗೆಗೆ ಹೊಡೆದನು. ಮುಂದಿನ ಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ರಾಮ್ ವೀರ್ ರನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ರಾಮ್ ವೀರ್ ತಂದೆ ಹೇಳುವಂತೆ ಆಕಾಶ್ ಅವರ ಮಗಳನ್ನು ಮದುವೆಯಾಗ ಬಯಸಿದ್ದ. ಮದುವೆ ಮಾಡಿಕೊಡಿ ಎಂದು ಪದೇ ಪದೇ ಪೀಡಿಸುತ್ತಿದ್ದ.  ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಯುವತಿ  ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಂಗಿಗೆ ಕಿರುಕುಳ ನೀಡುತ್ತಿದ್ದಾಗ ಅಣ್ಣ ಹಲವು ಸಾರಿ ತಡೆದಿದ್ದ.