'ಅಜ್ಮೇರ್ ದರ್ಗಾ ಮೂಲತಃ ಶಿವ ದೇವಸ್ಥಾನ'ಕೋರ್ಟ್ ಅರ್ಜಿ ಪುರಸ್ಕರಿಸಿದ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಡ ಓವೈಸಿ ಕಿಡಿ!
ರಾಜಸ್ಥಾನದ ಅಜ್ಮೀರ್ ದರ್ಗಾ ಮೂಲತಃ ಶಿವ ದೇವಾಲಯ. ಹಿಂದೂ ದೇವಾಲಯದ ದರ್ಗಾ ನಿರ್ಮಿಸಲಾಗಿದೆ ಎಂದು ಹೇಳಲಾದ ಅರ್ಜಿಯನ್ನು ಅಜ್ಮೇರ್ ನ್ಯಾಯಾಲಯ ಪುರಸ್ಕರಿಸಿದ ಬೆನ್ನಲ್ಲೇ ಇದೀಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದು ಮೋದಿ ಸರ್ಕಾರದ ವಿರುದ್ಡ ಕಿಡಿಕಾರಿದ್ದಾರೆ.
Khwaja Moinuddin Chishti Dargah : ರಾಜಸ್ಥಾನದ ಅಜ್ಮೀರ್ ದರ್ಗಾ ಮೂಲತಃ ಶಿವ ದೇವಾಲಯ. ಹಿಂದೂ ದೇವಾಲಯದ ದರ್ಗಾ ನಿರ್ಮಿಸಲಾಗಿದೆ ಎಂದು ಹೇಳಲಾದ ಅರ್ಜಿಯನ್ನು ಅಜ್ಮೇರ್ ನ್ಯಾಯಾಲಯ ಪುರಸ್ಕರಿಸಿದ ಬೆನ್ನಲ್ಲೇ ಇದೀಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದು ಮೋದಿ ಸರ್ಕಾರದ ವಿರುದ್ಡ ಕಿಡಿಕಾರಿದ್ದಾರೆ.
ಅಜ್ಮೀರ್ ಷರೀಫ್ ದರ್ಗಾದೊಳಗೆ ಶಿವ ಮಂದಿರವಿದೆ ಎಂಬ ಮೊಕದ್ದಮೆಯ ಕುರಿತು ಪ್ರತಿಕ್ರಿಯಿಸಿದ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು, ದರ್ಗಾ ಕಳೆದ 800 ವರ್ಷಗಳಿಂದ ಇದೆ. ನೆಹರೂ ಅವರಿಂದ ಇಲ್ಲಿಯವರೆಗೆ ಎಲ್ಲಾ ಪ್ರಧಾನಿಗಳು ದರ್ಗಾಕ್ಕೆ ಚಾದರ್‌ಗಳನ್ನು ಕಳುಹಿಸುತ್ತಿದ್ದಾರೆ. ಪ್ರಧಾನಿ ಮೋದಿಯವರೂ ಚಾದರ್ ಕಳುಹಿಸಿದ್ದಾರೆ. ಮಸೀದಿ ಮತ್ತು ದರ್ಗಾಗಳ ಬಗ್ಗೆ ಬಿಜೆಪಿ-ಆರ್‌ಎಸ್‌ಎಸ್ ಈ ರೀತಿ ಏಕೆ ದ್ವೇಷವನ್ನು ಹರಡುತ್ತಿದೆ? ಕೆಳಗಿನ ನ್ಯಾಯಾಲಯಗಳು ಪೂಜಾ ಸ್ಥಳದ ಕಾನೂನನ್ನು ಏಕೆ ಕೇಳುತ್ತಿವೆ? ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
'ಅಜ್ಮೇರ್ ದರ್ಗಾ ಮೂಲತಃ ಶಿವ ದೇವಸ್ಥಾನ..' ಅರ್ಜಿ ಪುರಸ್ಕರಿಸಿದ ರಾಜಸ್ಥಾನ ಕೋರ್ಟ್, ನೋಟಿಸ್ ಜಾರಿ
ಇದಕ್ಕೂ ಮೊದಲು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಸಾದುದ್ದೀನ್ ಓವೈಸಿ, ನ್ಯಾಯಾಲಯದ ಆದೇಶದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು. ಹಿಂದುತ್ವ ವ್ಯವಸ್ಥೆಯ ಅಜೆಂಡಾವನ್ನು ಈಡೇರಿಸಲು ಕಾನೂನು ಮತ್ತು ಸಂವಿಧಾನವನ್ನು ಗಾಳಿಗೆ ತೂರಲಾಗುತ್ತಿದೆ. ಸುಲ್ತಾನ್-ಎ-ಹಿಂದ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿ (ರಹಮ್ತುಲ್ಲಾ) ಭಾರತದ ಮುಸ್ಲಿಮರ ಪ್ರಮುಖ ಔಲಿಯಾ ಇಕ್ರಾಮ್‌ಗಳಲ್ಲಿ ಒಬ್ಬರು. ಜನರು ಶತಮಾನಗಳಿಂದ ಅವರ ಮಾದರಿಯನ್ನು ಅನುಸರಿಸುತ್ತಿದ್ದಾರೆ ಮತ್ತು ಅದನ್ನು ಮುಂದುವರಿಸುತ್ತಾರೆ, ಇನ್ಶಾ ಅಲ್ಲಾ.. ಅನೇಕ ರಾಜರು, ಮಹಾರಾಜರು, ಚಕ್ರವರ್ತಿಗಳು ಬಂದು ಹೋಗಿದ್ದಾರೆ, ಆದರೆ ಖ್ವಾಜಾ ಅಜ್ಮೇರಿ ನಗರದಲ್ಲಿ ಇನ್ನೂ ಜನವಸತಿ ಇದೆ.
1991 ರ ಪೂಜಾ ಸ್ಥಳಗಳ ಕಾಯಿದೆಯು ಯಾವುದೇ ಪೂಜಾ ಸ್ಥಳದ ಧಾರ್ಮಿಕ ಗುರುತನ್ನು ಬದಲಾಯಿಸಲಾಗುವುದಿಲ್ಲ ಅಥವಾ ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. 1991ರ ಕಾಯ್ದೆಯನ್ನು ಜಾರಿಗೊಳಿಸುವುದು ನ್ಯಾಯಾಲಯಗಳ ಕಾನೂನು ಕರ್ತವ್ಯವಾಗಿದೆ. ಹಿಂದುತ್ವ ಸಂಘಟನೆಗಳ ಅಜೆಂಡಾವನ್ನು ಈಡೇರಿಸಲು ಕಾನೂನು ಮತ್ತು ಸಂವಿಧಾನವನ್ನು ಗಾಳಿಗೆ ತೂರಿ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
'ವಕ್ಫ್ ಬೋರ್ಡ್ ರಿಯಲ್ ಎಸ್ಟೇಟ್ ಕಂಪನಿ..' ಓವೈಸಿಗೆ ತಿರುಗೇಟು ನೀಡಿದ ಟಿಟಿಡಿ ಚೇರ್ಮನ್!
ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಆರೋಪ ಏನು?
ದೆಹಲಿ ನಿವಾಸಿ, ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ, ಫಿರ್ಯಾದಿ ವಿಷ್ಣು ಗುಪ್ತಾ ಅವರು ವಿವಿಧ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಜ್ಮೀರ್ ದರ್ಗಾದ ಸಂಕಷ್ಟ ಮೋಚನ್ ಮಹಾದೇವ್ ದೇವಸ್ಥಾನದ ಹಕ್ಕು ಮಂಡಿಸಿದ್ದರು, ಈ ಪ್ರಕರಣದ ವಿಚಾರಣೆ ನಿನ್ನೆ (ಮಂಗಳವಾರ) ನಡೆದಿತ್ತು. ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆ ನಡೆಯಿತು. ಮೊಕದ್ದಮೆಯನ್ನು ಸ್ವೀಕರಿಸಿದ ನ್ಯಾಯಾಲಯವು ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಲು ಆದೇಶ ಹೊರಡಿಸಲು ನಿರ್ಧರಿಸಿತು. ನ್ಯಾಯಾಲಯ ಡಿಸೆಂಬರ್ 20ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ.