Dhabha Set on Fire: ಬಿಲ್‌ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

*ಸೋಲದೇವನಹಳ್ಳಿ ಯೂ ಟರ್ನ್‌ ಡಾಬಾದಲ್ಲಿ ಘಟನೆ
*ತಡರಾತ್ರಿ ವರೆಗೂ ಮತನಾಡುತ್ತಾ ಕುಳಿತ್ತಿದ್ದ ಪುಂಡರು
*ಸಮಯ ಮುಗಿದಿದೆ, ಬಿಲ್‌ ಪಾವತಿಸಿ ಎಂದಿದ್ದಕ್ಕೆ ಸಿಟ್ಟು
*ಡಾಬಾ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು

Dhabha in Bengaluru soladevanahalli Set on Fire by Mischiefs for asking bill mnj

ಬೆಂಗಳೂರು: ಬಿಲ್‌ ನೀಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರು ಅಪರಿಚಿತ ಯುವಕರು ಡಾಬಾ ಬಾಗಿಲಿಗೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿರುವ ಘಟನೆ ಸೋಲದೇವನಹಳ್ಳಿ (Soladevanahalli) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿ ಅವಘಡದಲ್ಲಿ ಡಾಬಾ ಸಿಬ್ಬಂದಿ (Dhaba) ಹಾಸನ ಮೂಲದ ಮನೋಜ್‌ (29) ಎಂಬಾತನಿಗೆ ಗಾಯಗಳಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಗುರುವಾರ ರಾತ್ರಿ ಇಬ್ಬರು ಯುವಕರು ಸೋಲದೇವನಹಳ್ಳಿ ವ್ಯಾಪ್ತಿಯ ಯೂ ಟರ್ನ್‌ ಡಾಬಾದಲ್ಲಿ (U Turn Dabha) ಊಟ ಮಾಡಿದ್ದಾರೆ. ಊಟದ ಬಳಿಕವೂ ತುಂಬಾ ಹೊತ್ತು ಡಾಬಾದಲ್ಲೇ ಕುಳಿತು ಮಾತಿನಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ಸಪ್ಲೈಯರ್‌ ಡಾಬಾ ಬಾಗಿಲು ಹಾಕುವ ಸಮಯವಾಗಿದ್ದು, ಬಿಲ್‌ ಪಾವತಿಸುವಂತೆ (Payment) ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಯುವಕರು ಸಪ್ಲೈಯರ್‌ ಜತೆ ಜಗಳ ಮಾಡಿ ತೆರಳಿದ್ದಾರೆ.

ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಪರಾರಿ!

ತಡರಾತ್ರಿ 12.30ಕ್ಕೆ ಮತ್ತೆ ದ್ವಿಚಕ್ರವಾಹನದಲ್ಲಿ ಡಾಬಾ ಬಳಿ ಬಂದಿರುವ ಅಪರಿಚಿತ ಯುವಕರು, ಡಾಬಾದ ಬಾಗಿಲಿಗೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ವೇಳೆ ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಮನೋಜ್‌, ಓಡಿ ಬಂದು ಬಾಗಿಲು ತೆರೆದಿದ್ದಾರೆ. ಈ ವೇಳೆ ಬೆಂಕಿ ತಾಕಿದ ಪರಿಣಾಮ ಗಾಯಗೊಂಡರು. ಕೂಡಲೇ ಓಡಿ ಬಂದ ಡಾಬಾ ಇತರೆ ಸಿಬ್ಬಂದಿ ಬೆಂಕಿ ನಂದಿಸಿ, ಮನೋಜ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಡಾಬಾ ಮಾಲೀಕ ದೀಪಕ್‌ ದೂರು ನೀಡಿದ್ದಾರೆ. ಡಾಬಾದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್‌ಗೆ ಬೆಂಕಿ ಹಚ್ಚಲು ಬಂದವರು ಅಮಲಲ್ಲಿ ಕಾಂಡಿಮೆಂಟ್ಸ್‌ ಸುಟ್ಟರು

ಪಾನಮತ್ತರಾಗಿ(Alcohol) ಗಲಾಟೆ ಮಾಡಿದ್ದಕ್ಕೆ ಗೆಳೆಯರಿಬ್ಬರಿಗೆ ಬಾರ್‌ ಸಿಬ್ಬಂದಿ ಬೈದು, ಹೊರ ಹಾಕಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮರುದಿನ ರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಾರ್‌(Bar) ಬಳಿ ಬಂದ ಗೆಳೆಯರು ಕುಡಿದ ಅಮಲಿನಲ್ಲಿ ಬಾರ್‌ಗೆ ಬೆಂಕಿ ಹಚ್ಚುವ ಬದಲಾಗಿ ಕಾಂಡಿಮೆಂಟ್ಸ್‌ ಅಂಗಡಿ ಮುಂಭಾಗಕ್ಕೆ ಬೆಂಕಿಯಿಟ್ಟು ಈಗ ಪರಪ್ಪನ ಅಗ್ರಹಾರ(Parappana Agrahara) ಕೇಂದ್ರ ಕಾರಾಗೃಹ ಸೇರಿದ್ದಾರೆ.

ನಾಗರಬಾವಿಯ ಮೌನೇಶ್‌ ಕುರಿಹೊಳೆ ಹಾಗೂ ಯಲಚೇನಹಳ್ಳಿಯ ಕಾಶಿನಗರದ ಮೌನೇಶ್‌ ಸಣ್ಣಗೌಡರ್‌ ಬಂಧಿತರಾಗಿದ್ದು(Arrest), ಕೋಣನಕುಂಟೆ ಕ್ರಾಸ್‌ ಸಮೀಪ ವಸಂತಪುರ ಮುಖ್ಯರಸ್ತೆಯ ಕಾಂಡಿಮೆಂಟ್ಸ್‌ ಅಂಗಡಿಗೆ ಬಳಿ ಈ ಕೃತ್ಯ ಎಸಗಿದ್ದರು. ಬಳಿಕ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು(Police) ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳು ರಾಯಚೂರು(Raichur) ಜಿಲ್ಲೆ ದೇವದುರ್ಗ ತಾಲೂಕಿನ ಚಿಂಚೋಳಿ ಗ್ರಾಮದವರು. ಕರಿಹೊಳೆ ಕ್ಯಾಬ್‌ ಚಾಲಕನಾಗಿದ್ದರೆ(Cab Driver), ಸಣ್ಣಗೌಡರ್‌ ಗಾರೆ ಕೆಲಸಗಾರನಾಗಿದ್ದ. ವಸಂತಪುರದ ಮುಖ್ಯರಸ್ತೆಯಲ್ಲಿ ಕುಬೇರ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಡಿ.15ರಂದು ತೆರಳಿ ಈ ಗೆಳೆಯರು ಮದ್ಯ ಸೇವನೆಗೆ ಹೋಗಿದ್ದರು. ಆಗ ಮದ್ಯ ಸೇವಿಸಿದ ಅವರು, ಅಮಲಿನಲ್ಲಿ ಬಾರ್‌ನ ಶೌಚಾಲಯದಲ್ಲಿ ಸಿಂಕ್‌ ಹೊಡೆದು ಹಾಕಿದ್ದರು. ಇದಕ್ಕೆ ಬಾರ್‌ ಸಿಬ್ಬಂದಿ ಆಕ್ಷೇಪಿಸಿದ್ದರಿಂದ ಆರೋಪಿಗಳು(Accused) ಗಲಾಟೆ ಮಾಡಿದ್ದರು. ಪೂರ್ತಿ ಸ್ಟೋರಿ ಇಲ್ಲಿ ಓದಿ

ಇದನ್ನೂ ಓದಿ:

1) Robbery in Bengaluru: ಮಾಳಗಾಳ ಮೇಲ್ಸೇತುವೆಯಲ್ಲಿ ಕೋಳಿ ಸಾಗಣೆ ಟೆಂಪೋ ಅಡ್ಡಗಟ್ಟಿ ₹1.30 ಲಕ್ಷ ದರೋಡೆ!

2) Cybercrime : ನಿವೃತ್ತ ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಾಟರಿ ಆಸೆ.. ಒಕೆ ಅಂದಿದ್ದಕ್ಕೆ!

3) ಮಗಳನ್ನು ಡ್ರಗ್‌ನಿಂದ ರಕ್ಷಿಸಿ: VHPಗೆ ಕ್ರಿಶ್ಚಿಯನ್ ಮಹಿಳೆ ಪತ್ರ!

Latest Videos
Follow Us:
Download App:
  • android
  • ios