Asianet Suvarna News Asianet Suvarna News

ಮಗಳನ್ನು ಡ್ರಗ್‌ನಿಂದ ರಕ್ಷಿಸಿ: VHPಗೆ ಕ್ರಿಶ್ಚಿಯನ್ ಮಹಿಳೆ ಪತ್ರ!

  •  ಡ್ರಗ್ ದಂಧೆಯಿಂದ ಮಗಳನ್ನು ರಕ್ಷಿಸಲು ಕ್ರಿಶ್ಚಿಯನ್ ಮಹಿಳೆಯಿಂದ ವಿಶ್ವ ಹಿಂದೂ ಪರಿಷತ್ ಗೆ ಪತ್ರ!
  • ಮಂಗಳೂರಿನ ಕ್ರೈಸ್ತ ಮಹಿಳೆಯಿಂದ ವಿಶ್ವಹಿಂದೂ ಪರಿಷತ್ ಮುಖಂಡರ ಮೊರೆ
  • ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆಯಿಂದ ಪತ್ರ
Christian Woman Writes Letter To VHP For Save her Daughter From Drugs Addiction  snr
Author
Bengaluru, First Published Dec 27, 2021, 12:16 PM IST

ಮಂಗಳೂರು (ಡಿ.27):  ಡ್ರಗ್ (Drugs) ದಂಧೆಯಿಂದ ಮಗಳನ್ನು ರಕ್ಷಿಸಲು ಕ್ರಿಶ್ಚಿಯನ್ ಮಹಿಳೆಯಿಂದ (Christian Women)  ವಿಶ್ವ ಹಿಂದೂ ಪರಿಷತ್ ಗೆ  (VHP) ಪತ್ರ (Letter) ಬರೆದಿರುವ ಘಟನೆ ಮಂಗಳೂರಿನಲ್ಲಿ (Mangaluru)  ನಡೆದಿದೆ.  ಮಂಗಳೂರಿನ ಕ್ರೈಸ್ತ ಮಹಿಳೆ ವಿಶ್ವ ಹಿಂದೂ ಪರಿಷತ್ ಮುಖಂಡರ ಮೊರೆ ಹೋಗಿದ್ದು ತಮ್ಮ ಮಗಳನ್ನು  ಡ್ರಗ್ಸ್ ಕೂಪದಿಂದ ಕರೆತರಲು ಕೋರಿದ್ದಾರೆ.  ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಪತ್ರ ಬರೆದಿದ್ದು,  ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ ದಂಧೆಯಲ್ಲಿ ತಮ್ಮ ಮಗಳು  ಸಿಲುಕಿದ್ದಾಳೆ.  ಕಳೆದ ಮೂರು ವರ್ಷಗಳಿಂದ ಡ್ರಗ್ ದಾಸಳಾಗಿರುವ ಮಗಳನ್ನು  ಸರಿಪಡಿಸಿ ತನಗೆ ನೀಡಬೇಕೆಂದು  ಪತ್ರದಲ್ಲಿ ತಿಳಿಸಿದ್ದಾರೆ. 

ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯ (Sexual Harassment) , ಡ್ರಗ್ ಪೂರೈಕೆ ಮಾಡುತ್ತಿದ್ದು ಮಗಳು ಡ್ರಗ್ (Drug) ಚಟಕ್ಕೆ ಬಿದ್ದು ಮಾನಸಿಕವಾಗಿ ಕುಗ್ಗಿ ಅಸ್ವಸ್ಥತೆ ‌ಒಳಗಾಗಿದ್ದಾಳೆ.  ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ ಪೂರೈಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದು  ಪೊಲೀಸ್ ಠಾಣೆ (Police Station) ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ.   ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ವಿಎಚ್ ಪಿಗೆ ಪತ್ರ ಬರೆದು ಮಹಿಳೆ ದಂಧೆಯಿಂದ ಮುಕ್ತಿ ಕೋರಿದ್ದಾರೆ.

ಹೊಸ ವರ್ಷದ  ಹೊತ್ತಲ್ಲಿ ಬೆಂಗಳೂರಲ್ಲಿ ಡ್ರಗ್ ಹಾವಳಿ :   ಹೊಸ ವರ್ಷಕ್ಕೂ(New Year) ಮುನ್ನ ನಗರದಲ್ಲಿ ಗಾಂಜಾ (Ganja) ಘಾಟು ಜೋರಾಗಿದ್ದು ಪೊಲೀಸರು ಹಲವು ಕಡೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.  ಎಚ್ಎಎಲ್ ಪೊಲೀಸರು (Bengaluru Police) ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ .  ವಿಭೂತಿ ಪುರದ ತೋಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಚ್ ಎ ಎಲ್ ಪೊಲೀಸರ ದಾಳಿ ನಡೆಸಿದ್ದರು. ದಾಳಿ ವೇಳೆ 9 ಕೆಜಿ ಗಾಂಜಾ , ಒಂದು ಬೈಕ್ ಹಾಗೂ ತೂಕದ ಮಷಿನ್ ವಶಕ್ಕೆ ಪಡೆಯಲಾಗಿದೆ. 

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ  ವಿವರ ನೀಡಿದ್ದಾರೆ. ಹೊಸ ವರ್ಷಕ್ಕೆ ಮಾದಕ ವಸ್ತು (Drugs) ಸರಬರಾಜು ಅಗುತ್ತಿದೆ ಅನ್ನೋ ಮಾಹಿತಿ ಇತ್ತು. ಈ ನಿಟ್ಟಿನಲ್ಲಿ ನಮ್ಮ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಮೈಕೋ‌ ಲೇಔಟ್ ಪೊಲೀಸರು 1 ಕೋಟಿ ಮೌಲ್ಯದ ಆಶಿಸ್ ಆಯಿಲ್ ವಶಪಡಿಸಿಕೊಂಡಿದ್ದಾರೆ.. ಪ್ರಕಾಶ್ ಹಾಗೂ ಧಾಮರಾಜ್ ಬಂಧಿತ ಆರೋಪಿಗಳು. ನ್ಯೂ ಇಯರ್ ಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಮಾದಕ ವಸ್ತುಗಳನ್ನು ತರುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದು  ವೈಜಾಗ್ ನಿಂದ ಮಾದಕ ವಸ್ತು ತೆಗೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

ನಿರಂತರ ಕಾರ್ಯಾಚರಣೆ: ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿತ್ತು. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ನ್ನು ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಬಂಧಿಸಿತ್ತು.

ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ  ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಕೋಣನಕುಂಟೆ ಪೊಲೀಸರಿಂದ ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಮಣಿಪುರಿ ಗ್ಯಾಂಗ್  ಬಂಧನವಾಗಿದೆ. ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರು ಸೆರೆ ಸಿಕ್ಕಿದ್ದರು.. ಮೊಯಿನ್ ಅಲಾಂ, ಮೊಹದ್ ಸಯಿದುರ್, ವಾಕೀಮ್ ಯೂನಸ್ ಎಂಬುವರನ್ನು ಬಂಧಿಸಲಾಗಿತ್ತು.

ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಒಂದು ಗ್ರಾಂ ಹೆರಾಯಿನ್ ನನ್ನ ಇಪ್ಪತ್ತರಿಂದ ಇಪ್ಪತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.

ಬನಶಂಕರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧಿಸಿದ್ದರು.  ಆಪರೇಷನ್ ಮಾಡಿಸಿಕೊಳ್ಳಲು ಬಂದವ ಡ್ರಗ್ ಪೆಡ್ಲರ್ ಆಗಿ ಬದಲಾಗಿದ್ದ. ಗಂಟಲ ಶಸ್ತ್ರಚಿಕಿತ್ಸೆಗೆಂದು ಬಂದು ಡ್ರಗ್ ಪೆಡ್ಲಿಂಗ್ ಗೆ ಇಳಿದಿದ್ದ. ನೈಜೀರಿಯಾ ಮೂಲದ ಪ್ರಿನ್ಸ್ ಅನಿ ಚಿಡೋಜಿಯನ್ನು ಬಂಧಿನವಾಗಿದ್ದು ವೀಸಾ ಅವಧಿ ಮುಗಿದರೂ ಇಲ್ಲಿಯೇ ಇದ್ದ.

ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧಸಿದ್ದರು.  ಶಬ್ಬಿರ್ ಮತ್ತು ಅನಿಲ್ ಬಂಧಿಸಲಾಗಿತ್ತು.  ಒಡಿಶಾ ದಿಂದ ತಮಿಳುನಾಡಿನ ಮೂಲಕ  ಬೆಂಗಳೂರಿಗೆ ತಂದಿದ್ದ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದರು. ಆರೋಪಿಗಳಿಂದ ಎಂಟು ಕೆ ಜಿ ಹದಿನಾರು ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.

ಎಲ್ಲಿಂದ ಶುರು: ಮುಂಬೈನಲ್ಲಿ ಬಾಲಿವುಡ್ ನಾಯಕ ಸುಶಾಂತ್ ಸಿಂಗ್ ನಿಗೂಢ ಸಾವಿನ ನಂತರ ಡ್ರಗ್ಸ್ ಸುಳಿ ತಲೆ ಎತ್ತಿತ್ತು. ಬಾಲಿವುಟ್ ನಟಿ ರಿಯಾ ಚಕ್ರವರ್ತಿ ಸೇರಿ ಅನೇಕ ನಟಿ ಮಣಿಗಳ ವಿಚಾರಣೆ ನಡೆಯಿತು. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಮತ್ತು ಸಂಜನಾ ಗರ್ಲಾನಿ ಜೈಲು ವಾಸ ಅನುಭವಿಸಬೇಕಾಗಿ ಬಂದಿತ್ತು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಹ ವಿಚಾರಣೆಯ ಹಂತದಲ್ಲಿಯೇ ಇದೆ. ನಟಿಯರ ತಲೆಕೂದಲು ಪರೀಕ್ಷೆ ವರದಿಯಲ್ಲಿ ಡ್ರಗ್ಸ್ ಸೇವಿಸಿದ್ದರ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಒಟ್ಟಿನಲ್ಲಿ ಎಲ್ಲಿಂದಲೋ ಹುಟ್ಟಿಕೊಂಡ ಡ್ರಗ್ಸ್ ಜಾಲಕ್ಕೆ  ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ.

Follow Us:
Download App:
  • android
  • ios