*ಕಾರಿನಲ್ಲಿ ಹಿಂಬಾಲಿಸಿ, ಮಚ್ಚು ಬೀಸಿ ಹಣದೊಂದಿಗೆ ಪರಾರಿ*ಮಾಳಗಾಳ ಮೇಲ್ಸೇತುವೆಯಲ್ಲಿ   ₹1.30 ಲಕ್ಷ ದರೋಡೆ!*ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಕೋಳಿ ಸಾಗಿಸುವ ಟೆಂಪೋ ಅಡ್ಡಗಟ್ಟಿಚಾಲಕನಿಗೆ ಮಚ್ಚಿನಿಂದ ಹಲ್ಲೆಗೈದು ರೂ. 1.30 ಲಕ್ಷ ದರೋಡೆ ಮಾಡಿ ಪರಾರಿಯಾಗಿರುವ (Robbery) ಘಟನೆ ಕಾಮಾಕ್ಷಿಪಾಳ್ಯ (Kamakshipalya) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಕೋಟಪ್ಪ (43) ಗಾಯಗೊಂಡ ಚಾಲಕ. ಭಾನುವಾರ ತಡರಾತ್ರಿ 12.30ರ ಸುಮಾರಿಗೆ ಮಾಳಗಾಳ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟಪ್ಪ ಅವರು ತಮಿಳುನಾಡಿನಿಂದ (Tamil Nadu) ಕೋಳಿಗಳ ಲೋಡ್‌ ತಂದು ನಗರದ ಲಗ್ಗೆರೆ, ಸುಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕೋಳಿ ಅಂಗಡಿಗೆ ಕೊಡುತ್ತಾರೆ. ಭಾನುವಾರ ಕೋಳಿ ಲೋಡ್‌ ತಂದು ಅಂಗಡಿಗಳಿಗೆ ನೀಡಿ ಹಣ ಸಂಗ್ರಹಿಸಿಕೊಂಡು ತಮಿಳುನಾಡಿನತ್ತ ಹೊರಟ್ಟಿದ್ದರು. 

ತಡರಾತ್ರಿ 12.30ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿ ಮಾಳಗಾಳ ಬಳಿಯ ರಿಂಗ್‌ ರಸ್ತೆಯ ಮೇಲ್ಸೇತುವೆಯಲ್ಲಿ ಟೆಂಪೋ ಅಡ್ಡಗಟ್ಟಿನಿಲ್ಲಿಸಿದ್ದಾರೆ. ನಂತರ ಏಕಾಏಕಿ ಮಚ್ಚು ತೆಗೆದು ಚಾಲಕ ಕೋಟಪ್ಪ ಅವರ ಮೇಲೆ ಹಲ್ಲೆಗೈದು ಟೆಂಪೊ ಡ್ಯಾಶ್‌ ಬೋರ್ಡ್‌ನಲ್ಲಿ ಇರಿಸಿದ್ದ .1.30 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಹಿಂಬಾಲಿಸಿ, ಮಚ್ಚು ಬೀಸಿ ಹಣದೊಂದಿಗೆ ಪರಾರಿ!

ಘಟನೆ ವೇಳೆ ಟೆಂಪೋದಲ್ಲಿ ಚಾಲಕ ಕೋಟಪ್ಪ ಸೇರಿ ಮೂವರು ಇದ್ದರು. ದುಷ್ಕರ್ಮಿಗಳು ಮಚ್ಚು ತೋರಿಸಿ ಎಲ್ಲರನ್ನೂ ಹೆದರಿಸಿದ್ದಾರೆ. ಟೆಂಪೋದಲ್ಲಿ ಹಣವಿರುವ ವಿಚಾರ ತಿಳಿದೇ ದುಷ್ಕರ್ಮಿಗಳು ಈ ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಈ ಸಂಬಂಧ ಕೋಟಪ್ಪ ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾದಲ್ಲಿ ಮೂವರು ಖದೀಮರ ಬಂಧನ

ತೀವ್ರ ಕುತೂಹಲ, ಆತಂಕಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದರೋಡೆ(Robbery) ಪ್ರಕರಣವನ್ನು ಭೇದಿಸುವಲ್ಲಿ ಅಂಕೋಲಾ ಪೊಲೀ​ಸರು(Police) ಯಶ​ಸ್ವಿ​ಯಾ​ಗಿ​ದ್ದಾ​ರೆ. ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ಉಮೇಶ ಭೀಮಪ್ಪಾ ಬಂಕಾಪುರ, ಹುಬ್ಬಳ್ಳಿಯ ತಾರಿಹಾಳದ ಪರಶುರಾಮ ವಡ್ಡರ್‌, ಓರ್ವ ಬಾಲಾಪರಾಧಿಯನ್ನು(Juvenile) ಬಂಧಿ​ಸ​ಲಾ​ಗಿದೆ(Arrest).

ಈ ಬಗ್ಗೆ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೆಕರ್‌, ಅಂಕೋಲಾ -ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ(Ankola-Hubballi National Highway) 63ರ ಠಾಕೂರ ಡಾಬಾದ ಬಳಿ ಗುರು​ವಾರ ಮುಂಜಾನೆ ಬೈಕ್‌ ಮೇಲೆ ಬಂದ ಅಪರಿಚಿತರ ತಂಡ ಚಲಿಸುತ್ತಿದ್ದ ಕಾರಿನ ಮೇಲೆ ಕಲ್ಲು ಎಸೆದು ಜಖಂಗೊಳಿಸಿತು. ಕಾರು ನಿಲ್ಲಿಸಿದ ವೇಳೆ ಆರೋಪಿಗಳು(Accused) 6 ಲಕ್ಷ ರೂ. ನಗದು, ಮೊಬೈಲ್‌, ಚೆಕ್‌ ಹಾಗೂ ವ್ಯವಹಾರದ ಪುಸ್ತಕಗಳನ್ನು ಸುಲಿಗೆ ಮಾಡಿ ನಾಪತ್ತೆಯಾಗಿತ್ತು.

ಪ್ರಕ​ರ​ಣ​ದಲ್ಲಿ ನೊಂದ ಬಾಲಚಂದ್ರ ಬನ್ಸಾಲಿ ಹಾಗೂ ಕೇವಲಚಂದ್‌ ಜೈನ್‌ ಅವರು ದೂರು ನೀಡಿದ್ದರು. ಈ ಬಗ್ಗೆ ಪ್ರಕ​ರಣ ದಾಖ​ಲಿಸಿ, ಕಾರ್ಯಾಚರಣಗೆ ಇಳಿದ ಪೊಲೀಸರು ಸುಂಕಸಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿಗಳನ್ನು ಕೇವಲ 24 ಗಂಟೆ​ಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಪೂರ್ತಿ ಸ್ಟೋರಿ ಇಲ್ಲಿ ಓದಿ

ಇದನ್ನೂ ಓದಿ:

1) Cybercrime : ನಿವೃತ್ತ ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಾಟರಿ ಆಸೆ.. ಒಕೆ ಅಂದಿದ್ದಕ್ಕೆ!

2) Bizarre Crime : ನಿದ್ದೆ ಮಾಡ್ತಿದ್ದವನ ಮೇಲೆ ನೀರು...ಪ್ರಶ್ನಿಸಿದ್ದಕ್ಕೆ ತುಟಿಯೇ ಕಟ್!

3) Bengaluru Drug Maffia : NCB ಭರ್ಜರಿ ಬೇಟೆ - ಸೌತ್ ಆಫ್ರಿಕನ್ ಪೆಡ್ಲರ್ ಅರೆಸ್ಟ್