Asianet Suvarna News Asianet Suvarna News

Bengaluru Crime: ಬಾರ್‌ಗೆ ಬೆಂಕಿ ಹಚ್ಚಲು ಬಂದವರು ಅಮಲಲ್ಲಿ ಕಾಂಡಿಮೆಂಟ್ಸ್‌ ಸುಟ್ಟರು

*   ಬಾರ್‌ ಸಿಬ್ಬಂದಿ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹೋಗಿ ಎಡವಟ್ಟು
*   ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಗಳು
*   ಸಿಸಿಬಿ ಪೊಲೀಸರಿಂದ ಮೂವರು ಮನೆಗಳ್ಳರ ಬಂಧನ
 

Miscreants Fire to Condiments Store in Bengaluru grg
Author
Bengaluru, First Published Dec 22, 2021, 5:12 AM IST

ಬೆಂಗಳೂರು(ಡಿ.22):  ಪಾನಮತ್ತರಾಗಿ(Alcohol) ಗಲಾಟೆ ಮಾಡಿದ್ದಕ್ಕೆ ಗೆಳೆಯರಿಬ್ಬರಿಗೆ ಬಾರ್‌ ಸಿಬ್ಬಂದಿ ಬೈದು, ಹೊರ ಹಾಕಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮರುದಿನ ರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಾರ್‌(Bar) ಬಳಿ ಬಂದ ಗೆಳೆಯರು ಕುಡಿದ ಅಮಲಿನಲ್ಲಿ ಬಾರ್‌ಗೆ ಬೆಂಕಿ ಹಚ್ಚುವ ಬದಲಾಗಿ ಕಾಂಡಿಮೆಂಟ್ಸ್‌ ಅಂಗಡಿ ಮುಂಭಾಗಕ್ಕೆ ಬೆಂಕಿಯಿಟ್ಟು ಈಗ ಪರಪ್ಪನ ಅಗ್ರಹಾರ(Parappana Agrahara) ಕೇಂದ್ರ ಕಾರಾಗೃಹ ಸೇರಿದ್ದಾರೆ.

ನಾಗರಬಾವಿಯ ಮೌನೇಶ್‌ ಕುರಿಹೊಳೆ ಹಾಗೂ ಯಲಚೇನಹಳ್ಳಿಯ ಕಾಶಿನಗರದ ಮೌನೇಶ್‌ ಸಣ್ಣಗೌಡರ್‌ ಬಂಧಿತರಾಗಿದ್ದು(Arrest), ಕೋಣನಕುಂಟೆ ಕ್ರಾಸ್‌ ಸಮೀಪ ವಸಂತಪುರ ಮುಖ್ಯರಸ್ತೆಯ ಕಾಂಡಿಮೆಂಟ್ಸ್‌ ಅಂಗಡಿಗೆ ಬಳಿ ಈ ಕೃತ್ಯ ಎಸಗಿದ್ದರು. ಬಳಿಕ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು(Police) ಬಂಧಿಸಿದ್ದಾರೆ.

Gold Robbery| 2.5 ಕೋಟಿ ಮೌಲ್ಯದ ಚಿನ್ನದ ಗಟ್ಟಿ ದರೋಡೆ?

ಈ ಇಬ್ಬರು ಆರೋಪಿಗಳು ರಾಯಚೂರು(Raichur) ಜಿಲ್ಲೆ ದೇವದುರ್ಗ ತಾಲೂಕಿನ ಚಿಂಚೋಳಿ ಗ್ರಾಮದವರು. ಕರಿಹೊಳೆ ಕ್ಯಾಬ್‌ ಚಾಲಕನಾಗಿದ್ದರೆ(Cab Driver), ಸಣ್ಣಗೌಡರ್‌ ಗಾರೆ ಕೆಲಸಗಾರನಾಗಿದ್ದ. ವಸಂತಪುರದ ಮುಖ್ಯರಸ್ತೆಯಲ್ಲಿ ಕುಬೇರ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಡಿ.15ರಂದು ತೆರಳಿ ಈ ಗೆಳೆಯರು ಮದ್ಯ ಸೇವನೆಗೆ ಹೋಗಿದ್ದರು. ಆಗ ಮದ್ಯ ಸೇವಿಸಿದ ಅವರು, ಅಮಲಿನಲ್ಲಿ ಬಾರ್‌ನ ಶೌಚಾಲಯದಲ್ಲಿ ಸಿಂಕ್‌ ಹೊಡೆದು ಹಾಕಿದ್ದರು. ಇದಕ್ಕೆ ಬಾರ್‌ ಸಿಬ್ಬಂದಿ ಆಕ್ಷೇಪಿಸಿದ್ದರಿಂದ ಆರೋಪಿಗಳು(Accused) ಗಲಾಟೆ ಮಾಡಿದ್ದರು.

ಕೊನೆಗೆ ಅವರಿಂದ ಸಿಂಕ್‌ ಹೊಡೆದು ಹಾಕಿದ್ದಕ್ಕೆ ಹಣ ವಸೂಲಿ ಮಾಡಿ ಬಾರ್‌ ಸಿಬ್ಬಂದಿ ಹೊರಗೆ ಹಾಕಿದ್ದರು. ಇದರಿಂದ ಕೆರಳಿದ ಆರೋಪಿಗಳು, ಬಾರ್‌ ಕ್ಯಾಷಿಯರ್‌ ಹಾಗೂ ಕೆಲಸಗಾರರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದರು. ಅಂತೆಯೇ ಮರುದಿನ ಮಧ್ಯರಾತ್ರಿ 1.30ರ ಸುಮಾರಿಗೆ ಕಂಠಮಟಾ ಮದ್ಯ ಸೇವಿಸಿ, ಅದೇ ಬಾರ್‌ ಬಳಿಗೆ ಆರೋಪಿಗಳು ಬಂದಿದ್ದಾರೆ. ಆದರೆ ಮದ್ಯದ ಮತ್ತಿನಲ್ಲಿ ಬಾರ್‌ ಮುಂದೆ ಬೆಂಕಿ(Fire) ಹಚ್ಚುವ ಬದಲು ಬಾರ್‌ ಪಕ್ಕದ ಕಾಂಡಿಮೆಂಟ್ಸ್‌ ಅಂಗಡಿಯನ್ನು(Condiments Store) ಬಾರ್‌ ಎಂದೂ ಭಾವಿಸಿ ಅದರ ಮುಂದೆ ಪೆಟ್ರೋಲ್‌(Petrol) ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಪೊಲೀಸರಿಂದ ಮೂವರು ಮನೆಗಳ್ಳರ ಬಂಧನ

ಮೈಸೂರು:  ಸಿಸಿಬಿ ಘಟಕದ ಪೊಲೀಸರು(CCB Police) 3 ಜನ ಮನೆಗಳ್ಳರನ್ನು ಬಂಧಿಸಿ, 15 ಲಕ್ಷ ಮೌಲ್ಯದ 304 ಗ್ರಾಂ ತೂಕದ ಚಿನ್ನಾಭರಣ(Gold) ಹಾಗೂ 1 ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ನಗರ ವ್ಯಾಪ್ತಿಯಲ್ಲಿ ವರದಿಯಾಗುತ್ತಿರುವ ಮನೆ ಕನ್ನಾ ಕಳವು ಪ್ರಕರಣಗಳನ್ನು ಭೇದಿಸಲು ಹಾಗೂ ಅಪರಾಧ(Crime) ತಡೆ ಮಾಸದ ಪ್ರಯುಕ್ತ ವಿಶೇಷ ಗಮನ ಹರಿಸಿ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಮೂವರು ಕನ್ನ ಕಳುವು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಮನೆ ಕನ್ನ ಕಳುವು ಮಾಡಿರುವ ಬಗ್ಗೆ ತಿಳಿಸಿದರ ಮೇರೆಗೆ ಆರೋಪಿಗಳಿಂದ ಉದಯಗಿರಿ ಠಾಣೆಯ 2 ಮನೆ ಕನ್ನ ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ 304 ಗ್ರಾಂ ತೂಕದ ಚಿನ್ನಾಭರಣಗಳು, ಆರೋಪಿಗಳು ಕೃತ್ಯವೆಸಗಲು ಬಳಸುತ್ತಿದ್ದ ಪರಿಕರಗಳು ಹಾಗೂ ಯಮಹಾ ಪ್ಯಾಸಿನೋ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ.

Medical Seat Fraud: ವೈದ್ಯಕೀಯ ಸೀಟು ಆಸೆ ತೋರಿಸಿ 15 ಲಕ್ಷ ಮೋಸ

ಒಬ್ಬ ಆರೋಪಿಯ ವಿರುದ್ಧ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 30 ವಾರೆಂಟ್‌ಗಳು(Warrent) ಇದ್ದು, ಮತ್ತೊಬ್ಬ ಆರೋಪಿಯ ವಿರುದ್ಧ ಮಂಡಿ ಠಾಣೆಯಲ್ಲಿ 4 ವಾರೆಂಟ್‌ಗಳು ಬಾಕಿ ಇರುತ್ತವೆ. ಮೂರನೇ ಆರೋಪಿಯು 1 ಕೊಲೆ ಪ್ರಕರಣ, 2 ಕೊಲೆ ಪ್ರಯತ್ನ, 1 ಮನೆ ಕಳ್ಳತನ, 1 ಸುಲಿಗೆ ಪ್ರಕರಣಗಳಲ್ಲಿ ವಿಚಾರಣಾ ಆರೋಪಿಯಾಗಿರುತ್ತಾನೆ.

ಇದೇ ವಿಶೇಷ ತಂಡವು ಮೈಸೂರು(Mysur) ಜಿಲ್ಲೆಗೆ ಸೇರಿದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್‌ ಆಸಾಮಿಯೊಬ್ಬನನ್ನು ವಶಕ್ಕೆ ಪಡೆದು, ಜಯಪುರ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಈತನ ವಿರುದ್ಧ 15 ವಾರೆಂಟ್‌ಗಳು ಇರುವುದು ಕಂಡು ಬಂದಿದೆ. ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ, ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಆರ್‌. ಜಗದೀಶ್‌ ಹಾಗೂ ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
 

Follow Us:
Download App:
  • android
  • ios