ಈ ಪ್ರಕರಣವು ಶ್ರದ್ಧಾ ವಾಕರ್ ಕೊಲೆ ಪ್ರಕರಣದೊಂದಿಗೆ ಒಂದು ಹೋಲಿಕೆಯನ್ನು ಹೊಂದಿದ್ದು, ಇಬ್ಬರೂ ಮಹಿಳೆಯರ ಶವಗಳನ್ನು ಕೊಂದ ನಂತರ ರೆಫ್ರಿಜರೇಟರ್‌ನಲ್ಲಿ ಸ್ಟೋರ್‌ ಮಾಡಲಾಗಿದೆ.

ನವದೆಹಲಿ (ಫೆಬ್ರವರಿ 14, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ದಾ ವಾಕರ್‌ ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.ನಂತರ ದೇಶದ ಹಲವೆಡೆ ಇಂತದ್ದೇ ಕೆಲ ಪ್ರಕರಣಗಳು ಬೆಳಕಿಗೆ ಬಂದವು. ಈಗ ದೆಹಲಿಯಲ್ಲೇ ಶ್ರದ್ಧಾ ರೀತಿಯ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೈಋತ್ಯ ದೆಹಲಿಯ ನಜಾಫ್‌ಗಢದ ಢಾಬಾವೊಂದರಲ್ಲಿ 25 ವರ್ಷದ ಮಹಿಳೆಯ ಶವ ವ್ಯಾಲೆಂಟೈನ್ಸ್‌ ದಿನ ಅಂದರೆ ಫೆಬ್ರವರಿ 14, 2023 ರ ಮಂಗಳವಾರ ಫ್ರೀಜರ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, 2 - 3 ದಿನಗಳ ಹಿಂದೆ ಮಹಿಳೆಯನ್ನು ಕೊಂದು ಆಕೆಯ ಶವವನ್ನು ಢಾಬಾದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಢಾಬಾದ (Dhaba) ಫ್ರೀಜರ್‌ನಲ್ಲಿ (Freezer) ಮಹಿಳೆಯ ಮೃತದೇಹ (Women Deadbody) ಸಿಕ್ಕಿರುವ ಘಟನೆ ಸಂಬಂಧ ಆ ಢಾಬಾದ ಮಾಲೀಕ (Dhaba Owner) ಸಾಹಿಲ್ ಗಹ್ಲೋಟ್‌ನನ್ನು (Sahil Gahlot) ಬಂಧಿಸಲಾಗಿದೆ (Arrested). ಇನ್ನು, ಮೃತ ಮಹಿಳೆ ದೆಹಲಿಯ (Delhi) ಉತ್ತಮ್ ನಗರದ ನಿವಾಸಿ ಎಂದೂ ಪೊಲೀಸರು (Police) ತಿಳಿಸಿದ್ದು, ಆಕೆಯನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಸದ್ಯ, ಢಾಬಾ ಮಾಲೀಕ ಸಾಹಿಲ್ ಗಹ್ಲೋಟ್ ಅವರನ್ನು ಶಂಕೆಯ ಮೇಲೆ ಬಂಧಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಸಾಹಿಲ್ ಗಹ್ಲೋಟ್ ಮತ್ತು ಮಹಿಳೆ ಇಬ್ಬರೂ ಸಂಬಂಧದಲ್ಲಿದ್ದರು (Relationship) ಎಂದು ಪೊಲೀಸ್ ಅಧಿಕಾರಿ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಶ್ರದ್ಧಾ ವಾಕರ್‌ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?

ಸಾಹಿಲ್‌ ಗಹ್ಲೋಟ್ ಬೇರೊಬ್ಬರು ಮಹಿಳೆಯನ್ನು ಮದುವೆಯಾಗಲು ಸಿದ್ದತೆ ನಡೆಸಿದ್ದರು. ಈ ವಿಚಾರ ಆತನ ಗರ್ಲ್‌ಫ್ರೆಂಡ್‌ ಬೆಳಕಿಗೆ ಬಂದಾಗ, ಆಕೆ ಢಾಬಾ ಮಾಲೀಕನೊಂದಿಗೆ ಜಗಳವಾಡಿದರು ಮತ್ತು ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸಿದಳು ಎಂದು ಪೊಲೀಸ್‌ ಅಧಿಕಾರಿ ಸುದ್ದಿಗೋಷ್ಠಿ ಎಎನ್‌ಐಗೆ ತಿಳಿಸಿದ್ದಾರೆ. ಅಲ್ಲದೆ, ಇದರಿಂದ ಆಕ್ರೋಶಗೊಂಡ ಸಾಹಿಲ್‌ ಗೆಹ್ಲೋಟ್, ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರೀಜರ್‌ನಲ್ಲಿ ಬಚ್ಚಿಟ್ಟಿದ್ದ.

 2 - 3 ದಿನಗಳ ಹಿಂದೆ ಮಹಿಳೆಯನ್ನು ಕೊಲ್ಲಲಾಯಿತು ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇನ್ನು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ಅಫ್ತಾಬ್ ವಿರುದ್ಧ Shraddha Walkar ದೂರು: ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಫಡ್ನವೀಸ್

ಈ ಪ್ರಕರಣವು ಶ್ರದ್ಧಾ ವಾಕರ್ ಕೊಲೆ ಪ್ರಕರಣದೊಂದಿಗೆ ಒಂದು ಹೋಲಿಕೆಯನ್ನು ಹೊಂದಿದ್ದು, ಇಬ್ಬರೂ ಮಹಿಳೆಯರ ಶವಗಳನ್ನು ಕೊಂದ ನಂತರ ರೆಫ್ರಿಜರೇಟರ್‌ನಲ್ಲಿ ಸ್ಟೋರ್‌ ಮಾಡಲಾಗಿದೆ. ಶ್ರದ್ಧಾ ವಾಕರ್ ರನ್ನು ಮೇ 2022 ರಲ್ಲಿ ಕೊಲೆ ಮಾಡಲಾಗಿತ್ತು ಮತ್ತು ಬರೋಬ್ಬರಿ 6 ತಿಂಗಳ ನಂತರ ಆಕೆಯ ಕೊಲೆ ನಡೆದಿರುವುದನ್ನು ಪತ್ತೆಹಚ್ಚಲಾಯ್ತು.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾ, ಆಕೆಯ ಲಿವ್ ಇನ್ ಪಾರ್ಟ್‌ನರ್ ಆಗಿದ್ದ. ಅಫ್ತಾಬ್ ಪೂನಾವಾಲಾ ಸದ್ಯ ಜೈಲಿನಲ್ಲಿದ್ದು, ಮತ್ತು ಶ್ರದ್ಧಾಳನ್ನು ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಕೋಪದ ಭರದಲ್ಲಿ ತನ್ನ ಸಂಗಾತಿಯನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್‌ ಪೂನಾವಾಲಾ ಹೇಳಿಕೆ ನೀಡಿದ್ದ. 

ಇದನ್ನೂ ಓದಿ: ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!