ಶ್ರದ್ಧಾ ವಾಕರ್‌ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?

ಅಫ್ತಾಬ್ ಪೂನಾವಾಲಾ ಕಳೆದ ವರ್ಷದ ಮೇ ತಿಂಗಳಲ್ಲಿ ತನ್ನ ಲಿವ್-ಇನ್ ಪಾರ್ಟ್‌ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ್ದ. 

aftab turned violent after shraddha walker went to meet another friend delhi police ash

ನವದೆಹಲಿ (ಜನವರಿ 25, 2023) : ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್‌ ಪ್ರಕರಣ ಬೆಳಕಿಗೆ ಬಂದು ಹಲವು ತಿಂಗಳುಗಳೇ ಕಳೆದರೂ ಈ ಪ್ರಕರಣ ಜನರ ನೆನಪಿನಿಂದ ಇನ್ನೂ ಮಾಸಿಲ್ಲ. ಆದರೆ, ಅಫ್ತಾಬ್‌ ಪೂನಾವಾಲಾ ಆಕೆಯ ಪ್ರಿಯಕರ ಶ್ರಧ್ದಾ ವಾಕರ್‌ನನ್ನು ನಿಜಕ್ಕೂ ಕೊಂದಿದ್ದೇಕೆ ಎಂಬುದು ಮಾತ್ರ ಇನ್ನು ಬೆಳಕಿಗೆ ಬಂದಿಲ್ಲ. ಹತ್ಯೆಗೆ ಲವ್ ಜಿಹಾದ್‌ ಕಾರಣ, ಹಾಗೂ ಅತ ಹಲವು ಗರ್ಲ್‌ಫ್ರೆಂಡ್‌ಗಳ ಜತೆ ಡೇಟಿಂಗ್ ನಡೆಸುತ್ತಿದ್ದ ಎಂದು ಹೇಳಲಾಗಿತ್ತು.

ತನ್ನ ಗೆಳತಿ ಶ್ರದ್ಧಾಳನ್ನು ಆಕೆಯ ಪ್ರಿಯಕರ ಅಫ್ತಾಬ್‌ ಪೂನಾವಾಲ 35 ತುಂಡುಗಳಾಗಿ ಕತ್ತರಿಸಿ ಹತ್ಯೆ ಮಾಡಲು, ಆಕೆ ತನ್ನ ಸ್ನೇಹಿತನನ್ನು ಭೇಟಿ ಮಾಡಲು ತೆರಳಿದ್ದೇ ಕಾರಣ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಈ ಹತ್ಯೆ ಪ್ರಕರಣ ಕುರಿತು ದೆಹಲಿ ಪೊಲೀಸರು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ 6629 ಪುಟಗಳ ಬೃಹತ್‌ ಆರೋಪ ಪಟ್ಟಿ ಸಲ್ಲಿಸಿದ್ದು ಅದರಲ್ಲಿ ಈ ಅಂಶವಿದೆ.

ಇದನ್ನು ಓದಿ: Shraddha Walker Murder: ಅಫ್ತಾಬ್‌ ಪೂನಾವಾಲಾ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ಶೀಟ್‌

ಘಟನೆ ನಡೆಯುವ ದಿನ ಶ್ರದ್ಧಾ ತನ್ನ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದಳು. ಶ್ರದ್ಧಾ ಗೆಳೆಯನನ್ನು ಅಫ್ತಾಬ್‌ ಇಷ್ಟಪಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಆಕ್ರೋಶಕ್ಕೆ ಒಳಗಾಗಿ ಕೊಲೆ ಮಾಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಫ್ತಾಬ್‌ ಕಳೆದ ಮೇನಲ್ಲಿ ಶ್ರದ್ಧಾಳನ್ನು ಹತ್ಯೆ ಮಾಡಿ 35 ತುಂಡುಗಳನ್ನಾಗಿ ಮಾಡಿ ದೆಹಲಿ ಹಲವು ಭಾಗಗಳಲ್ಲಿ ದೇಹದ ಭಾಗಗಳನ್ನು ಹಲವೆಡೆ ಬಿಸಾಡಿದ್ದ. ಜೊತೆಗೆ ಶ್ರದ್ಧಾಳನ್ನು ಹತ್ಯೆ ಮಾಡಲು ಅಫ್ತಾಬ್‌ ನಾನಾ ರೀತಿಯ ಉಪಕರಣಗಳನ್ನು ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಶ್ರದ್ಧಾ ಕೊಲೆ ಪ್ರಕರಣ
ಅಫ್ತಾಬ್ ಪೂನಾವಾಲಾ ಕಳೆದ ವರ್ಷದ ಮೇ ತಿಂಗಳಲ್ಲಿ ತನ್ನ ಲಿವ್-ಇನ್ ಪಾರ್ಟ್‌ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ್ದಾನೆ. ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು 3 ವಾರಗಳ ಕಾಲ 300-ಲೀಟರ್ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರು. ಅವರು ಮುಂದಿನ 18 ದಿನಗಳಲ್ಲಿ ಮೃತ ದೇಹದ ಉಳಿದ ಭಾಗಗಳನ್ನು ವಿಲೇವಾರಿ ಮಾಡಿದರು. ಕಳೆದ ತಿಂಗಳು ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ್ದರು. ಪ್ರಸ್ತುತ ಡಿಸೆಂಬರ್ 23 ರವರೆಗೆ ಆತ ನ್ಯಾಯಾಂಗ ಬಂಧನದಲ್ಲಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಅಫ್ತಾಬ್ ವಿರುದ್ಧ Shraddha Walkar ದೂರು: ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಫಡ್ನವೀಸ್

ಇನ್ನೊಂದೆಡೆ, ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿತ್ತು. ಮೆಹ್ರೌಲಿ ಅರಣ್ಯದಿಂದ ಮೂಳೆಗಳ ರೂಪದಲ್ಲಿ ಪೊಲೀಸರಿಗೆ ದೊರೆತ ಶವದ ತುಂಡುಗಳು ಶ್ರದ್ಧಾ ಅವರ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿವೆ. ಇದು ಸಿಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿತ್ತು. ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿ ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆಯೇ, ಮೆಹ್ರೌಲಿ ಅರಣ್ಯ ಮತ್ತು ಗುರುಗ್ರಾಮ್‌ನಲ್ಲಿ ಅವರು ಹೇಳಿದ ಸ್ಥಳದಿಂದ ಪೊಲೀಸರು ಮೃತದೇಹದ ಹಲವಾರು ತುಂಡುಗಳನ್ನು ಮೂಳೆಗಳ ರೂಪದಲ್ಲಿ ವಶಪಡಿಸಿಕೊಂಡರು. ಪೊಲೀಸರಿಗೆ ಮಾನವ ದೇಹದ ದವಡೆಯೂ ಪತ್ತೆಯಾಗಿತ್ತು. ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದರು. ಅಷ್ಟೇ ಅಲ್ಲ ಶ್ರದ್ಧಾ ವಾಕರ್‌ ತಂದೆಯ ಮಾದರಿಯನ್ನೂ ಡಿಎನ್‌ಎ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!

Latest Videos
Follow Us:
Download App:
  • android
  • ios