Asianet Suvarna News Asianet Suvarna News

ಅಫ್ತಾಬ್‌ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!

ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಅಫ್ತಾಬ್‌ ವಿರುದ್ಧ ದೂರು ನೀಡಿದ್ದಳು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ

aftab will kill and cut me into pieces shraddha walkars sos to police ash
Author
First Published Nov 23, 2022, 4:35 PM IST

ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ (Shraddha Walkar) ಹತ್ಯೆ ಪ್ರಕರಣ (Murder Case) ದಿನೇ ದಿನೇ ಒಂದೊಂದು ಟ್ವಿಸ್ಟ್‌ ಸಿಗುತ್ತಲೇ ಇದೆ. ಶ್ರದ್ಧಾ ವಾಕರ್‌ಳನ್ನು ಅಫ್ತಾಬ್‌ ಪೂನಾವಾಲ (Aftab Poonawalla) ಬರ್ಬರವಾಗಿ ಹತ್ಯೆ ಮಾಡಿದ್ದು, ಆಕೆಯ ಮೃತದೇಹವನ್ನು 35 ಪೀಸ್‌ (Piece) ಮಾಡಿದ್ದಾನೆ. ಅಲ್ಲದೆ, ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ (Refrigerator) ಎಂದೂ ದೆಹಲಿ ಪೊಲೀಸರು (Delhi Police) ಮಾಹಿತಿ ನೀಡಿದ್ದರು. ಇನ್ನು, ಈ ಹತ್ಯೆ ಮೇ ತಿಂಗಳಲ್ಲಿ ನಡೆದಿದ್ದರೂ, ಇದು ಬೆಳಕಿಗೆ ಬಂದಿದ್ದು ಮಾತ್ರ ನವೆಂಬರ್‌ನಲ್ಲಿ ಅಂದರೆ 6 ತಿಂಗಳ ಬಳಿಕ. ಆದರೆ, ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಅಫ್ತಾಬ್‌ ವಿರುದ್ಧ ದೂರು ನೀಡಿದ್ದಳು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ತನ್ನ ಲಿವ್‌ - ಇನ್‌ - ಪಾರ್ಟ್‌ನರ್‌ ಅಫ್ತಾಬ್‌ ಪೂನಾವಾಲ ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಹಾಗೂ ನನ್ನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡುತ್ತಾನೆ ಎಂದು ನನಗೆ ಭಯವಿದೆ ಎಂದು ಆಕೆ ಮಹಾರಾಷ್ಟ್ರ ಪೊಲೀಸರಿಗೆ (Maharashtra Police) ದೂರು ನೀಡಿದ್ದಳಂತೆ. 

ನವೆಂಬರ್ 23, 2020 ರಂದು ಶ್ರದ್ಧಾ ವಾಕರ್‌ ನೀಡಿದ್ದ ದೂರಿನ ಪತ್ರ ಸರಿಯಾಗಿ 2 ವರ್ಷಗಳ ಬಳಿಕ ಅಂದರೆ ನವೆಂಬರ್ 23, 2022 ರಂದೇ ಬೆಳಕಿಗೆ ಬಂದಿರುವುದು ಕಾಕತಾಳೀಯವೋ ಅಚ್ಚರಿಯ ಸಂಗತಿಯೋ. ಅಅಲ್ಲದೆ, ಅಫ್ತಾಬ್ ಪೂನಾವಾಲ ತನ್ನ ಮೇಲೆ ಹಲ್ಲೆ ಮಾಡುತ್ತಾನೆ, ಇದು ಆತನ ಪೋಷಕರಿಗೂ ಗೊತ್ತಿದೆ ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳೂ ಎಂದೂ ಅಧಿಕಾರಿಯೊಬ್ಬುರ ಬುಧವಾರ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Shraddha murder Case: ಪಾಲಿಗ್ರಾಫ್‌ ಪರೀಕ್ಷೆಗೆ ಒಳಗಾದ ಅಫ್ತಾಬ್ ಪೂನಾವಾಲಾ

ಶ್ರದ್ಧಾ ವಾಕರ್‌ಳನ್ನು ಅಫ್ತಾಪ್‌ ಪೂನಾವಾಲ ಕತ್ತು ಹಿಸುಕಿ ಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಆಕೆಯ ಮೃತದೇಹವನ್ನು 35 ಪೀಸ್‌ಗಳಾಗಿ ಮಾಡಿ, ದೇಹದ ಹಲವು ಭಾಗಗಳನ್ನು ಸುಮಾರು 3 ವಾರಗಳ ಕಾಲ 300 ಲೀಟರ್‌ ಫ್ರಿಡ್ಜ್‌ನಲ್ಲಿಟ್ಟಿದ್ದ. ನಸುಕಿನ ಜಾವ ಆಕೆಯ ಮೃತದೇಹದ ಹಲವು ಭಾಗಗಳನ್ನು ಹಲವು ದಿನಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಕಾಡಿನಲ್ಲಿ ಹಾಗೂ ನಗರದ ಹಲವೆಡೆ ಮೃತದೇಹ ಬಿಸಾಡಿದ್ದ ಎಂದೂ ದೆಹಲಿ ಪೊಲೀಸರು ಹೇಳಿದ್ದಾರೆ. ಮೇ ತಿಂಗಳಲ್ಲಿ ಈ ಹತ್ಯೆ ಪ್ರಕರಣ ನಡೆದಿದೆ ಎಂದೂ ತಿಳಿದುಬಂದಿದೆ. 

ಶ್ರದ್ಧಾ 2 ವರ್ಷಗಳ ಹಿಂದೆ ನೀಡಿದ್ದ ದೂರಿನ ವಿವರ..
  
ಶ್ರದ್ಧಾ ವಾಕರ್‌ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಿವಾಸಿಯಾಗಿದ್ದಳು. ಆಕೆ ನವೆಂಬರ್ 2020ರಲ್ಲಿ ಅಫ್ತಾಬ್‌ ಪೂನಾವಾಲ ತನ್ನನ್ನು ನಿಂದಿಸುತ್ತಿದ್ದಾನೆ ಹಾಗೂ ಪದೇ ಪದೇ ಹಲ್ಲೆ ಮಾಡುತ್ತಾನೆ ಎಂದೂ ಪಾಲ್ಘರ್‌ ಪ್ರದೇಶದ ತುಲಿಂಜ್‌ ಪೊಲೀಸರಿಗೆ ಆಕೆ ದೂರು ನೀಡಿದ್ದಳು. 

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ: ತನ್ನ ಕುಟುಂಬದ ನಾಲ್ವರನ್ನು ಕೊಂದ ಮಾದಕ ವ್ಯಸನಿ..!

ಅಲ್ಲದೆ, ಇಂದು ಆತ ನನ್ನನ್ನು ಉಸಿರುಗಟ್ಟಿ ಕೊಲೆ ಮಾಡಲು ಯತ್ನಿಸಿದ ಹಾಗೂ ಅವನು ನನ್ನನ್ನು ಕೊಲೆ ಮಾಡಿ ಪೀಸ್‌ಗಳನ್ನಾಗಿ ಕಟ್‌ ಮಾಡಿ ಎಸೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ ಹಾಗೂ ಬ್ಲ್ಯಾಕ್‌ಮೇಲ್‌ ಮಾಡುತ್ತಾನೆ. ಆದರೆ, ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಕಾರಣ ನನಗೆ ಪೊಲೀರ ಬಳಿ ಹೋಗುವ ಧೈರ್ಯ ಸಹ ಇಲ್ಲ ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳು.       

ಅಲ್ಲದೆ, ನನ್ನ ಮೇಲೆ ಅಫ್ತಾಬ್‌ ಹಲ್ಲೆ ಮಾಡುತ್ತಾನೆ  ಹಾಗೂ ನನನ್ನು ಕೊಲೆ ಮಾಡಲು ಯತ್ನಿಸಿದ ಎಂಬುದು ಅವನ ಪೋಷಕರಿಗೂ ಗೊತ್ತಿದೆ ಎಂದು ಸಹ ಶ್ರದ್ಧಾ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ, ನಾವಿಬ್ಬರೂ ಲಿವ್ ಇನ್‌ ಪಾರ್ಟ್‌ನರ್‌ ಆಗಿ ಜೊತೆಯಲ್ಲಿ ವಾಸ ಮಾಡುತ್ತಿರುವುದು ಅಫ್ತಾಬ್‌ ಪೊಷಕರಿಗೆ ಗೊತ್ತಿತ್ತು ಹಾಗೂ ವಾರಾಂತ್ಯದಲ್ಲಿ ಅವರು ನಮ್ಮನ್ನು ಭೇಟಿ ಮಾಡುತ್ತಿದ್ದರು ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.  

ಇದನ್ನೂ ಓದಿ: Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್‌ ಅನುಮತಿ
        
"ನಾವು ಯಾವುದೇ ಸಮಯದಲ್ಲಿಯಾದರೂ ಶೀಘ್ರದಲ್ಲೇ ಮದುವೆಯಾಗುವುದರಿಂದ ಮತ್ತು ಅವರ ಕುಟುಂಬದ ಆಶೀರ್ವಾದವನ್ನು ಹೊಂದಿದ್ದರಿಂದ ನಾನು ಅವನೊಂದಿಗೆ ವಾಸಿಸುತ್ತಿದ್ದೆ. ಆದರೆ, ಇನ್ನು ಮುಂದೆ, ನಾನು ಅವನೊಂದಿಗೆ ವಾಸಿಸಲು ಸಿದ್ಧನಿಲ್ಲ. ಏಕೆಂದರೆ, ನನ್ನನ್ನು ಎಲ್ಲಿ ನೋಡಿದರೂ, ನನ್ನನ್ನು ಕೊಲ್ಲುವಂತೆ ಅಥವಾ ನೋಯಿಸುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ದೈಹಿಕ ಹಾನಿ ಸಂಭವಿಸಿದೆ ಎಂದು ಪರಿಗಣಿಸಬೇಕು ಎಂದೂ ಮಹಾರಾಷ್ಟ್ರ ಪೊಲೀಸರಿಗೆ ನೀಡಿರುವ ದೂರಿನ ಪತ್ರದಲ್ಲಿ ಹೇಳಿದ್ದಾಳೆ. 

Follow Us:
Download App:
  • android
  • ios