Asianet Suvarna News Asianet Suvarna News

ಅಫ್ತಾಬ್ ವಿರುದ್ಧ Shraddha Walkar ದೂರು: ಪೊಲೀಸರ ಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಫಡ್ನವೀಸ್

2020 ರಲ್ಲಿ, ಅಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಶ್ರದ್ಧಾ ವಾಕರ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಹಾಗೂ ಹತ್ಯೆ ಪ್ರಕರಣವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಪ್ರಸ್ತಾಪಿಸಲಾಗಿದೆ.

will probe what action police took into shraddhas complaint against aftab devendra fadnavis ash
Author
First Published Dec 20, 2022, 8:02 PM IST

ನವೆಂಬರ್ 2020 ರಲ್ಲಿ ಅಫ್ತಾಬ್ ಪೂನಾವಾಲಾ (Aftab Poonawalla) ವಿರುದ್ಧ ಶ್ರದ್ಧಾ ವಾಕರ್ (Shraddha Walkar) ನೀಡಿದ ದೂರಿನ ಬಗ್ಗೆ ಪೊಲೀಸ್ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತನಿಖೆ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ (Maharashtra Deputy CM) ದೇವೇಂದ್ರ ಫಡ್ನವೀಸ್ (Devendra Fadnavis) ಹೇಳಿದ್ದಾರೆ. ಶ್ರದ್ಧಾ ವಾಕರ್‌ ಅವರ ಕ್ರೂರ ಹತ್ಯೆಯು ಕಳೆದ ತಿಂಗಳು ಬೆಳಕಿಗೆ ಬಂದಿದ್ದು, ಇದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ (Maharashtra Legislative Assembly) ಮಂಗಳವಾರ ಪ್ರಸ್ತಾಪಿಸಲಾಗಿದೆ. 2020 ರಲ್ಲಿ, ಅಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಶ್ರದ್ಧಾ ವಾಕರ್‌ ಪೊಲೀಸರಿಗೆ ದೂರು ನೀಡಿದ್ದರು. ಅವರು ತನ್ನನ್ನು ಕೊಲ್ಲುವುದಾಗಿ ಮತ್ತು ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಶ್ರದ್ಧಾ ಆರೋಪಿಸಿದ್ದರು. ಮಹಾರಾಷ್ಟ್ರದ ಪಾಲ್ಘರ್‌ನ ತುಳಿಂಜ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಅಫ್ತಾಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದೂ ದೂರು ನೀಡಿದ್ದರು.

ಈ ಪತ್ರ ಬೆಳಕಿಗೆ ಬಂದ ನಂತರ, ಶ್ರದ್ಧಾ ನಂತರ ತನ್ನ ದೂರನ್ನು ವಾಪಸ್ ಪಡೆದಿದ್ದರು ಎಂದು MBVV ಕಮಿಷನರೇಟ್‌ನ ಡಿಸಿಪಿ ಸುಹಾಸ್ ಬಾವಾಚೆ ಹೇಳಿದ್ದರು. ಈ ದೂರಿನ ಪತ್ರದ ಕುರಿತು ಮಾತನಾಡಿದ ದೇವೇಂದ್ರ ಫಡ್ನವೀಸ್, “ಇದುವರೆಗೆ ಶ್ರದ್ಧಾ ವಾಕರ್ ಮೇಲೆ ದೂರು ಹಿಂಪಡೆಯಲು ರಾಜಕೀಯ ಒತ್ತಡ ಇರಲಿಲ್ಲ ಎಂದು ತಿಳಿದುಬಂದಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’’. ದೂರು ದಾಖಲಿಸುವ ಮತ್ತು ಹಿಂತೆಗೆದುಕೊಳ್ಳುವ ನಡುವೆ ಒಂದು ತಿಂಗಳ ಅಂತರವಿತ್ತು. ಆ ಸಮಯದಲ್ಲಿ ಪೊಲೀಸರು ಏನು ಕ್ರಮ ಕೈಗೊಂಡರು  ಎಂಬುದನ್ನು ನಾವು ತನಿಖೆ ಮಾಡುತ್ತೇವೆ ಎಂದೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ಹೇಳಿದ್ದಾರೆ.

ಇದನ್ನು ಓದಿ: ಅಂತರ್‌ಧರ್ಮೀಯ ವಿವಾಹ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ: ಮತ್ತೊಂದು ಶ್ರದ್ಧಾ ಪ್ರಕರಣ ಘಟಿಸದಂತೆ ಕ್ರಮ..!

ಶ್ರದ್ಧಾ ಕೊಲೆ ಪ್ರಕರಣ
ಅಫ್ತಾಬ್ ಪೂನಾವಾಲಾ ಈ ವರ್ಷದ ಮೇ ತಿಂಗಳಲ್ಲಿ ತನ್ನ ಲಿವ್-ಇನ್ ಪಾರ್ಟ್‌ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ್ದಾನೆ. ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು 3 ವಾರಗಳ ಕಾಲ 300-ಲೀಟರ್ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರು. ಅವರು ಮುಂದಿನ 18 ದಿನಗಳಲ್ಲಿ ಮೃತ ದೇಹದ ಉಳಿದ ಭಾಗಗಳನ್ನು ವಿಲೇವಾರಿ ಮಾಡಿದರು. ಕಳೆದ ತಿಂಗಳು ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ್ದರು. ಪ್ರಸ್ತುತ ಡಿಸೆಂಬರ್ 23 ರವರೆಗೆ ಆತ ನ್ಯಾಯಾಂಗ ಬಂಧನದಲ್ಲಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಇನ್ನೊಂದೆಡೆ, ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಇತ್ತೀಚೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮೆಹ್ರೌಲಿ ಅರಣ್ಯದಿಂದ ಮೂಳೆಗಳ ರೂಪದಲ್ಲಿ ಪೊಲೀಸರಿಗೆ ದೊರೆತ ಶವದ ತುಂಡುಗಳು ಶ್ರದ್ಧಾ ಅವರ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿವೆ. ಇದು ಸಿಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ. ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿ ವಿಚಾರಣೆ ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆಯೇ, ಮೆಹ್ರೌಲಿ ಅರಣ್ಯ ಮತ್ತು ಗುರುಗ್ರಾಮ್‌ನಲ್ಲಿ ಅವರು ಹೇಳಿದ ಸ್ಥಳದಿಂದ ಪೊಲೀಸರು ಮೃತದೇಹದ ಹಲವಾರು ತುಂಡುಗಳನ್ನು ಮೂಳೆಗಳ ರೂಪದಲ್ಲಿ ವಶಪಡಿಸಿಕೊಂಡರು. ಪೊಲೀಸರಿಗೆ ಮಾನವ ದೇಹದ ದವಡೆಯೂ ಪತ್ತೆಯಾಗಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದರು. ಅಷ್ಟೇ ಅಲ್ಲ ಶ್ರದ್ಧಾ ವಾಕರ್‌ ತಂದೆಯ ಮಾದರಿಯನ್ನೂ ಡಿಎನ್‌ಎ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: Shraddha Walker Murder: ಮೆಹ್ರುಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು, ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತು!

Follow Us:
Download App:
  • android
  • ios