ಚರಂಡಿಯಲ್ಲಿ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವಪತ್ತೆ
ಚರಂಡಿಯೊಳಗೆ ಎಸೆದಿದ್ದ ಸೂಟ್‌ಕೇಸ್ ಒಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಪಶ್ಚಿಮ ಭಾಗದ ಚರಂಡಿಯಲ್ಲಿ ಈ ಘಟನೆ ನಡೆದಿದೆ.
ನವದೆಹಲಿ: ಚರಂಡಿಯೊಳಗೆ ಎಸೆದಿದ್ದ ಸೂಟ್‌ಕೇಸ್ ಒಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಪಶ್ಚಿಮ ಭಾಗದ ಚರಂಡಿಯಲ್ಲಿ ಈ ಘಟನೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಹುಶಃ ಮಹಿಳೆಯನ್ನು ಬೇರೆ ಜಾಗದಲ್ಲಿ ಹತ್ಯೆ ಮಾಡಿ ನಂತರ ಸೂಟ್‌ಕೇಸ್‌ನಲ್ಲಿ ತುಂಬಿಸಿ ಚರಂಡಿಗೆಸೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.
ಪಶ್ಚಿಮ ದೆಹಲಿಯ ಪಂಜಾಬಿ ಬಾಘ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಇದೇ ದಾರಿಯಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ಸೂಟ್‌ಕೇಸ್‌ನ್ನು ಗಮನಿಸಿದ್ದು, ಅಲ್ಲಿ ಸಹಿಸಲಾಗದಷ್ಟು ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆ ಸೂಟ್‌ಕೇಸ್‌ನ್ನು ಕೆಲವು ಈಜುಗಾರರು ಹಾಗೂ ಪೊಲೀಸರ ಸಹಾಯದಿಂದ ಮೇಲೆತ್ತಲಾಗಿದೆ.
21 ವರ್ಷದ ಮಗಳನ್ನು ಕೊಂದು, ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ತಂದೆ!
ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಈ ಶವದ ಗುರುತು ಪತ್ತೆ ಸಾಧ್ಯವಾಗಿಲ್ಲ. ಆದರೆ ಮೃತದೇಹವೂ ಸಣ್ಣ ಪ್ರಾಯದ ಯುವತಿಯದ್ದೆಂಬಂತೆ ಕಾಣಿಸುತ್ತಿದೆ. ನಾವು ಆ ಮೃತದೇಹ, ಸೂಟ್‌ಕೇಸ್ ಹಾಗೂ ಕೆಲವು ಮಾದರಿಗಳನ್ನು ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೊತ್ತರ ಪರೀಕ್ಷೆ (autopsy) ಹಾಗೂ ವೈದ್ಯಕೀಯ ತಪಾಸಣೆ (medical examination) ನಂತರ ನಾವು ಏನಾಗಿರಬಹುದು ಎಂದು ತಿಳಿಯಬಹುದು. ಅಲ್ಲದೇ ಸಾವಿನ ಕಾರಣವೂ ತಿಳಿದಿಲ್ಲ, ಮೃತದೇಹ ಕೊಳೆತಿರುವುದರಿಂದ ದೇಹದಲ್ಲಿ ಗಾಯಗಳಿರುವ ಬಗ್ಗೆ ನೋಡಲಾಗದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಘನಶ್ಯಾಮ ಬೆನ್ಸಲ್ (Ghanshyam Bansal) ಹೇಳಿದ್ದಾರೆ.
ಮಹಿಳೆ ಸೂಟ್‌ಕೇಸ್‌ನಲ್ಲಿ ವಿದೇಶಕ್ಕೆ ಹಾರಿದ 18 ಚೇಳು, ಹಿಂತಿರುಗಿಸಲು ವಿಮಾನ ಬುಕ್ !
ಬೇರೆ ಸ್ಥಳದಲ್ಲಿ ಯುವತಿಯನ್ನು ಕೊಂದು ಸೂಟ್‌ಕೇಸ್‌ಗೆ ತುಂಬಿಸಿ ಇಲ್ಲಿಗೆ ತಂದು ಪಂಜಾಬ್ ಬಾಘ್ (Punjabi Bagh) ಚರಂಡಿಗೆ ಎಸೆಯಲಾಗಿದೆ. ಶವವೂ ಸಂಪೂರ್ಣವಾಗಿ ಕೊಳೆತಿರುವುದರಿಂದ ಏನಾಗಿದೆ ಎಂದು ತಿಳಿಯುವುದಕ್ಕೆ ಆಗುತ್ತಿಲ್ಲ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಘಟನೆಯ ಬಗ್ಗೆ ಸುಳಿವು ಸಿಗಬಹುದು ಎಂಬ ಕಾರಣಕ್ಕೆ ಪೊಲೀಸರು ಸುತ್ತಮುತ್ತಲ ಸಿಸಿಟಿವಿಗಳನ್ನು (CCTV) ಕೂಡ ಪರಿಶೀಲಿಸಿದ್ದಾರೆ. ಅಲ್ಲದೇ ಕೆಲವು ನಾಪತ್ತೆಯಾದ ವ್ಯಕ್ತಿಗಳ ಪಟ್ಟಿಯನ್ನು ಕೂಡ ಪರೀಕ್ಷಿಸುತ್ತಿದ್ದಾರೆ.
ಪುಟಿನ್ ಮಲಮೂರ್ತ ವಿಸರ್ಜಿಸಿದ ಬೆನ್ನಲ್ಲೇ ಸೂಟ್‌ಕೇಸ್‌ನಲ್ಲಿ ಶೇಖರಣೆ, ಜೊತೆಗೆ ಒಯ್ಯುತ್ತಾರೆ 1,2!
ಕಳೆದ ತಿಂಗಳು ಉತ್ತರಪ್ರದೇಶದ ನೋಯ್ಡಾದಲ್ಲಿ ಪೋಷಕರೇ ಯುವತಿಯೊಬ್ಬಳನ್ನು ಕೊಂದು ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿ ಎಸೆದಿದ್ದರು. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್ ವೇ ಬಳಿ ಕಳೆದ ತಿಂಗಳು ಈ ಘಟನೆ ನಡೆದಿತ್ತು. ದೆಹಲಿಯ 21 ವರ್ಷದ ಆಯುಷಿ ಯಾದವ್ ಎಂಬಾಕೆಯನ್ನು ತಂದೆಯೇ ಹತ್ಯೆ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿ ದೂರ ಎಸೆದಿದ್ದರು. ಕೆಂಪು ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾದ ಬಳಿಕ ಪೊಲೀಸರು ಹುಡುಕಾಟ ಆಕೆ ದೆಹಲಿಯ ಬದರ್ಪುರ ಪ್ರದೇಶದ ಆಯುಷಿ ಎಂಬುದು ತಿಳಿದು ಬಂದಿತ್ತು. ನಂತರ ಆಕೆಯ ತಂದೆಯನ್ನೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು.
ಸಗಣಿಯಿಂದ ಮಾಡಿದ ಸೂಟ್‌ಕೇಸ್ ಹಿಡಿದು ಬಜೆಟ್ ಮಂಡಿಸಲು ಬಂದ ಸಿಎಂ ಭೂಪೇಶ್ ಬಘೇಲ್