ಮಹಿಳೆ ಸೂಟ್‌ಕೇಸ್‌ನಲ್ಲಿ ವಿದೇಶಕ್ಕೆ ಹಾರಿದ 18 ಚೇಳು, ಹಿಂತಿರುಗಿಸಲು ವಿಮಾನ ಬುಕ್ !
ಪ್ರವಾಸ ಎಂಜಾಯ್ ಮಾಡಿ ಮನೆಗೆ ಬಂದ ಮಹಿಳೆಗೆ ಶಾಕ್ ಎದುರಾಗಿದೆ. ತನ್ನ ಸೂಟ್‌ಕೇಸ್‌ನಲ್ಲಿ 18 ಚೇಳು ಪತ್ತೆಯಾಗಿದೆ. ಇದನ್ನು ಮತ್ತೆ ಸ್ವದೇಶಕ್ಕೆ ಹಿಂತಿರುಗಿಸಲು ಸತತ ಸಭೆ ನಡೆಸಲಾಗುತ್ತಿದೆ.
ಆಸ್ಟ್ರೀಯಾ(ಜು.31): ರಜಾ ದಿನವನ್ನು ಹಾಯಾಗಿ ಕಳೆಯಲು ಆಸ್ಟ್ರೀಯಾದ ಮಹಿಳೆ ಕ್ರೋವೇಶಿಯಾ ಪ್ರವಾಸ ಮಾಡಿದ್ದಾರೆ. ಪ್ರವಾಸವನ್ನು ಅತೀವ ಎಂಜಾಯ್ ಮಾಡಿದ ಮಹಿಳೆ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಬಳಿಕ ಸೂಟ್‌ಕೇಸ್‌ನಲ್ಲಿನದ್ದ ಬಟ್ಟೆಗಳನ್ನು ತೆಗೆಯುತ್ತಿದ್ದ ವೇಳೆ ಅಚ್ಚರಿ ಕಾದಿದೆ. ಈ ಸೂಟ್‌ಕೇಸ್‌ನಲ್ಲಿ 18 ಚೇಳುಗಳು ಪತ್ತೆಯಾಗಿದೆ. ಮರಿ, ತಾಯಿ ಸೇರಿದಂತೆ 18 ಚೇಳು ಕಂಡ ಮಹಿಳೆ ಗಾಬರಿಯಾಗಿದ್ದಾಳೆ. ಇಷ್ಟೇ ಅಲ್ಲ ಈ ಎಲ್ಲಾ ಚೇಳುಗಳು ಜೀವಂತವಾಗಿತ್ತು. ಹೀಗಾಗಿ ಮಹಿಳೆ ತಕ್ಷಣವೇ ಆಸ್ಟ್ರಿಯಾದ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಹಿಳೆಯ ಮನೆಗೆ ಆಗಮಿಸಿದ ಪ್ರಾಣಿ ಸಂರಕ್ಷಣಾ ತಂಡ, 18 ಚೇಳುಗಳನ್ನು ರಕ್ಷಿಸಿದ್ದಾರೆ. ಸದ್ಯ ಲಿಂಝ್ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಇಡಲಾಗಿದೆ. ಇದೀಗ ಸರ್ಕಾರದ ಜೊತೆ ಮಾತುಕತೆ ನಡೆಸಿರುವ ಪ್ರಾಣಿ ಸಂರಕ್ಷಣಾ ತಂಡ ಇದೀಗ 18 ಚೇಳುಗಳನ್ನು ಕ್ರೋವೇಶಿಯಾಗೆ ಮರಳಿ ಕಳುಹಿಸಲು ನಿರ್ಧರಿಸಿದೆ. ಇದಕ್ಕಾಗಿ ವಿಮಾನ ಬುಕ್ ಮಾಡಿ, ಈ ಮೂಲಕ ಕಳುಹಿಸಲು ನಿರ್ಧರಿಸಿದೆ.
ಕ್ರೋವೇಶಿಯಗೆ ಪ್ರವಾಸ ಹೋದ ಮಹಿಳೆ ಮೂರು ವಾರ ತಂಗಿದ್ದಾಳೆ. ಹಲವು ಪ್ರವಾಸಿ ತಾಣ ಸುತ್ತಾಡಿದ್ದಾಳೆ. ಇದೇ ವೇಳೆ ಕೆಲ ಹೊಟೆಲ್‌ನಲ್ಲಿ ತಂಗಿದ್ದಾರೆ. ಕ್ರೋವೇಶಿಯಾದಿಂದ ಈ ಚೇಳುಗಳು ಸೂಟ್‌ಕೇಸ್ ಸೇರಿಕೊಂಡಿದೆ. ಆಸ್ಟ್ರೀಯಾಗೆ ಮರಳಿದ ಮಹಿಳೆ ಸೂಟ್‌ಕೇಸ್‌ನಲ್ಲಿದ್ದ ಚೇಳುಗಳನ್ನು ಪ್ರಾಣಿ ಸಂರಕ್ಷಣಾ ಕೇಂದ್ರ ಸಂರಕ್ಷಿಸಿದೆ. ಆಸ್ಟ್ರೀಯಾದಲ್ಲೇ ಈ ಚೇಳುಗಳನ್ನು ಉಳಿಸಿಕೊಂಡರೆ ಸಂತತಿ ಹೆಚ್ಚಾಗಲಿದೆ. ಆದರೆ ಈ ಚೇಳುಗಳು ಕ್ರೋವೇಶಿಯಾದ ಮೂಲದ್ದಾಗಿದೆ. ಹೀಗಾಗಿ ಈ ಚೇಳುಗಳನ್ನು ಕ್ರೋವೇಶಿಯಾಗೆ ಸೇರಬೇಕು ಎಂದು ಪ್ರಾಣಿ ಸಂರಕ್ಷಣಾ ಕೇಂದ್ರ ಹೇಳಿದೆ.
ಶಿಕ್ಷಕಿ ಸ್ಕೂಟಿಯೊಳಗೆ ಸರ್ಪ! ಹಾವಿನ ಜೊತೆಗೆ 10 ಕಿ ಮೀ ಪಯಣ!
ಕ್ರೋವೇಶಿಯಾದಿಂದ ಚೇಳುಗಳು ಆಗಮಿಸಿದ ಎರಡನೇ ಪ್ರಕರಣ ಇದಾಗಿದೆ. ಆಸ್ಟ್ರಿಯಾದಿಂದ ಕ್ರೋವೇಶಿಯಾ ಪ್ರವಾಸ ಹೋಗಿದ್ದ ಮಹಿಳೆಯ ಮನೆಗೆ ಹಿಂತಿರುಗಿದ ಮೂರು ವಾರಗಳ ಬಳಿಕ ಲಗೇಜ್ ಬ್ಯಾಗ್ ತೆರೆದು ನೋಡಿದಾಗ ಚೇಳುಗಳು ಪತ್ತೆಯಾಗಿತ್ತು. ಈ ಘಟನೆ ನಡೆದ ಒಂದೇ ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದೆ. ಕೆಲ ಚೇಳುಗಳು ಕಚ್ಚಿದರೆ ಮಾರಣಾಂತಿಕವಾಗಲಿದೆ. ಹೀಗಾಗಿ ಆಸ್ಟ್ರಿಯಾ ತಲುಪಿರುವ ಈ ಚೇಳುಗಳನ್ನು ಅದರ ವಾಸಸ್ಥಳಕ್ಕೆ ಬಿಡುವುದು ಸೂಕ್ತ ಅನ್ನೋ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚೇಳುಗಳಲ್ಲಿ 2,000 ವಿಧಗಳಿವೆ. ಇದರಲ್ಲಿ 30 ರಿಂದ 40 ಚೇಳುಗಳು ಕಚ್ಚಿದರೆ ಮಾರಣಾಂತಿಕವಾಗಲಿದೆ. ಚೇಳು ಕಡಿತಕ್ಕೆ ಜೀವ ಕಳೆದುಕೊಂಡು ಉದಾಹರಣೆಗಳು ಇವೆ. ಆಸ್ಟ್ರಿಯಾದಲ್ಲಿ ಚೇಳುಗಳ ಸಂಖ್ಯೆ ಕಡಿಮೆ. ಮಹಿಳೆ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಚೇಳುಗಳನ್ನು ಸಂರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಇದರ ಸಂರಕ್ಷಣೆ ಕೇಂದ್ರ ಸವಲಾಗಿದೆ. ಚೇಳುಗಳು ಕಣ್ಮರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಆಹಾರ ಹಾಗೂ ಇತರ ಸಮಸ್ಯೆಯಾಗದಂತೆ ನೋಡಿಕೊಳ್ಳುವುದೇ ಸವಾಲಾಗಿದೆ ಎಂದು ಪ್ರಾಣಿ ಸಂರಕ್ಷಣಾ ಕೇಂದ್ರ ಹೇಳಿದೆ.
ಎಚ್ಚರ ಎಚ್ಚರ : ಸುರಿಯುವ ಮಳೆಗೆ ಶೂ ಒಳಗೆ ಬೆಚ್ಚಗೆ ಮಲಗಿದ ನಾಗರಹಾವು