ಪುಟಿನ್ ಮಲಮೂರ್ತ ವಿಸರ್ಜಿಸಿದ ಬೆನ್ನಲ್ಲೇ ಸೂಟ್‌ಕೇಸ್‌ನಲ್ಲಿ ಶೇಖರಣೆ, ಜೊತೆಗೆ ಒಯ್ಯುತ್ತಾರೆ 1,2!
- ರಷ್ಯಾ ಅಧ್ಯಕ್ಷರಿಗೆ ಮಲ ಮೂತ್ರದ ಚಿಂತೆ
- ಪುಟಿನ್ ಸೂಟ್‌ಕೇಸ್‌ನಲ್ಲಿ ಭದ್ರವಾಗಿರುತ್ತೆ ಮಲ ಮೂತ್ರ
- ಪುಟಿನ್ ಮಲ ಮೂತ್ರ ಸೂಟ್‌ಕೇಸ್‌ಲ್ಲಿಡುವುದೇಕೆ?
ನವದೆಹಲಿ(ಜೂ.12): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಗ್ಯ ಸಮಸ್ಯೆ ಕುರಿತು ಹಲವು ಮಾಹಿತಿಗಳು ಹೊರಬಂದಿದೆ. ಆದರೆ ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಅಧಿಕೃತ ಮೂಲಗಳು ಹಲವು ಬಾರಿ ಸ್ಪಷ್ಟನೆ ನೀಡಿದೆ. ಆದರೆ ಪುಟಿನ್‌ಗೆ ಕ್ಯಾನ್ಸರ್ ಅಂಟಿಕೊಂಡಿದೆ ಅನ್ನೋ ಮಾಹಿತಿಯೂ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಪುಟಿನ್ ಎಲ್ಲೆ ಹೋದರು ತಮ್ಮ ಮಲ ಮೂತ್ರವನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ.
ಹೌದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿ ಬಾರಿ ಮಲ ಮೂತ್ರ ವಿಸರ್ಜನೆ ಮಾಡಿದಾಗಲು ಅದನ್ನು ಸೂಟ್‌ಕೇಸ್‌ನಲ್ಲಿ ಶೇಖರಿಸಿಲಾಗುತ್ತದೆ. ಬಳಿಕ ಅದನ್ನು ಪಟಿನ್ ಹೋದ ಕಡೆಯಲೆಲ್ಲಾ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಬಹರಂಗವಾಗಿದೆ. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ನಿಜವಾಗಿದೆ. ಇದೇ ಕಾರಣಕ್ಕೆ ತಮ್ಮ ಮಲ ಮೂತ್ರವನ್ನು ಯಾರಾದರೂ ಪರೀಕ್ಷಿಸಿದರೆ ಆರೋಗ್ಯದ ಮಾಹಿತಿ ಸಂಪೂರ್ಣ ಬಯಲಾಗಲಿದೆ. ಹೀಗಾಗಿ ಪುಟಿನ್ ಯಾವುದೇ ಸುಳಿವು ಹಾಗೂ ಕುರುಹು ಸಿಗಬಾರದು ಅನ್ನೋ ಕಾರಣಕ್ಕೆ ಮಲ ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಒಯ್ಯಲಾಗುತ್ತಿದೆ.
ಉಕ್ರೇನ್ ಯುದ್ಧಕ್ಕೆ ಟ್ವಿಸ್ಟ್, ಪುಟಿನ್ ಹೊಸ ಪ್ಲಾನ್‌ಗೆ ಜಗತ್ತಿಗೆ ಶುರುವಾಯ್ತು ನಡುಕ!
ಪುಟಿನ್ ಕುರಿತ ಮಾಹಿತಿಗಾಗಿ ಹಲವು ವಿದೇಶಿ ಗುಪ್ತಚರ ಇಲಾಖೆ ಕಾಯುತ್ತಿದೆ. ಇದಕ್ಕಾಗಿ ಹಲವು ಕಸರತ್ತು ನಡೆಸುತ್ತಿದೆ. ಹೀಗಾಗಿ ತಮ್ಮ ಯಾವುದೇ ಸುಳಿವು ಗುಪ್ರಚರ ಇಲಾಖೆ ಅಧಿಕಾರಿಗಳಿಗೆ ಸಿಗದಂತೆ ಪುಟಿನ್ ಎಚ್ಚರವಹಿಸಿದ್ದಾರೆ. ಇದಕ್ಕಾಗಿ ಮಲ ಮೂತ್ರವನ್ನೂ ಶೇಖರಣೆ ಮಾಡಿ ಸೂಟ್‌ಕೇಸ್‌ನಲ್ಲಿ ಭದ್ರವಾಗಿಡಲಾಗುತ್ತಿದೆ ಎಂದು ರಷ್ಯಾದ ಮಾಜಿ ಗುಪ್ತಚರ ಇಲಾಖೆ ಅಧಿಕಾರಿ ರೆಬೆಕಾ ಕೋಫ್ಲರ್ ಹೇಳಿದ್ದಾರೆ.
ಪುಟಿನ್ ತಮ್ಮ ಮನೆ ಹಾಗೂ ಕಚೇರಿಯನ್ನು ಹೊರತುಪಡಿಸಿ ಇತರ ಯಾವುದೇ ಕಡೆ ತೆರಳಿದರೂ ಮಲ ಮೂತ್ರ ವಿಸರ್ಜನೆಯನ್ನು ಸಂಗ್ರಹಿಸಿ ಮತ್ತೆ ಮಾಸ್ಕೋಗೆ ತರಲಾಗುತ್ತದೆ. ಅದರಲ್ಲೂ ವಿದೇಶಿ ಪ್ರವಾಸದಲ್ಲಿ ಇದು ಕಡ್ಡಾಯಾವಾಗಿದೆ. ಬಳಿಕ ಮಾಸ್ಕೋದಲ್ಲಿ ಗೌಪ್ಯ ಸ್ಥಳದಳಲ್ಲಿ ಈ ಮಲ ಮೂತ್ರಗಳನ್ನು ವಿಸರ್ಜಿಸಲಾಗುತ್ತದೆ.
ಇದಕ್ಕಾಗಿ ಹೊಸ ಅಧಿಕಾರಿಗಳ ತಂಡವನ್ನೇ ನಿಯೋಜಿಸಲಾಗಿದೆ. ಈ ಅಧಿಕಾರಿಗಳಿಗೆ ಪುಟಿನ್ ಮಲ ಮೂತ್ರವನ್ನು ಸಂಗ್ರಹಿಸವುದು,ಸೀಲ್ ಮಾಡುವುದು ಹಾಗೂ ಸುರಕ್ಷಿತವಾಗಿಡುವುದೇ ಕೆಲಸವಾಗಿದೆ. ಪುಟಿನ್ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದಕ್ಕೆ ಇದು ಸಾಕ್ಷಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಪುಟಿನ್ ಇನ್ನು ಕೇವಲ 3 ವರ್ಷ ಬದುಕುಳಿವ ಸಾಧ್ಯತೆ?
‘ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕಾನ್ಸರ್‌ನಿಂದ ಬಳಲುತ್ತಿದ್ದು, ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ಕೇವಲ ಮೂರು ವರ್ಷಗಳ ಕಾಲ ಮಾತ್ರ ಪುಟಿನ್ ಬದುಕುಳಿಯುವ ಸಾಧ್ಯತೆಗಳಿವೆ’ ಎಂದು ರಷ್ಯಾದ ಗುಪ್ತಚರ ಅಧಿಕಾರಿ ಹೇಳಿಕೆ ನೀಡಿದ್ದಾರೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ಇತ್ತೀಚೆಗೆ ರಷ್ಯಾ ಅಧ್ಯಕ್ಷರ ಆರೋಗ್ಯ ಕ್ಷೀಣಿಸುತ್ತಿದೆ. ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ದೇಹದ ಅಂಗಾಂಗ ಮರೆಮಾಚುವಂತೆ ದಿರಿಸು ಧರಿಸಿರುತ್ತಾರೆ. ಅಂಗಿಕ ಭಾಷೆ ನೋಡಿದರೇ ಅನಾರೋಗ್ಯದ ಬಗ್ಗೆ ಗೊತ್ತಾಗುತ್ತದೆ ಎಂದು ವರದಿಗಳು ಹೇಳಿದ್ದವು.
ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯುವುದು 3 ವರ್ಷ ಮಾತ್ರ, ಗುಪ್ತಚರ ಅಧಿಕಾರಿ ಸ್ಫೋಟಕ ಮಾಹಿತಿ!
ಇದರ ಬೆನ್ನಲೇ ರಷ್ಯಾ ಗುಪ್ತಚರ ಅಧಿಕಾರಿಯೊಬ್ಬರು, ಬ್ರಿಟನ್‌ನಲ್ಲಿ ನೆಲೆಸಿರುವ ಮಾಜಿ ರಷ್ಯಾದ ಗುಪ್ತಚರ ಬೋರಿಸ್ ಕಾರ್ಪಿಚ್ಕೋವ್ ಅವರಿಗೆ ಸಂದೇಶ ರವಾನಿಸಿ, ‘ಪುಟಿನ್‌ಗೆ ಕ್ಯಾನ್ಸರ್ ಇದೆ. ಅವರು 3 ವರ್ಷ ಮಾತ್ರ ಬದುಕಬಲ್ಲರು. ದೃಷ್ಟಿಮಂದವಾಗುತ್ತಿದೆ ಎಂದು ಹೇಳಿದ್ದಾರೆ’ ಎಂದು ಇಂಡಿಪೆಂಡೆಂಟ್ ತಿಳಿಸಿದೆ.