ಪ್ರಿಯಕರನ ಜೊತೆ ಸೇರಿ ಮಗಳು ತಾಯಿಗೆ ಚೂರಿ ಇರಿದ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟ್‌ನಲ್ಲಿ ನಡೆದಿದೆ
ಧಾರವಾಡ (ಜೂ. 11): ಪ್ರಿಯಕರನ ಜೊತೆ ಸೇರಿ ಮಗಳು ತಾಯಿಗೆ ಚೂರಿ ಇರಿದ ಘಟನೆ ಧಾರವಾಡದ (Dharwad) ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟ್‌ನಲ್ಲಿ ನಡೆದಿದೆ. ಪ್ರಿಯಕರ ಹಾಗೂ ಮಗಳು ಸೇರಿ ತಾಯಿ ಜೀಜಾಬಾಯಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪ್ರಿಯಕರ ಕಿರಣ್ ಹಾಗೂ ಮಗಳು ಸ್ಫೂರ್ತಿ ಸೇರಿ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ. ಹಲವು ವರ್ಷಗಳಿಂದ ಕಿರಣ ಹಾಗೂ ಜೀಜಾಬಾಯಿ ಮಗಳು ಸ್ಫೂರ್ತಿ ಪ್ರೀತಿಸುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಕಿರಣ ಜೊತೆ ಮಗಳು ಸ್ಫೂರ್ತಿ ಓಡಿ ಹೋಗಿದ್ದಳು.
ಈ ಹಿನ್ನೆಲೆಯಲ್ಲಿ ಕಿರಣ ಮೇಲೆ ಜೀಜಾಬಾಯಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಕಳೆದ 2 ತಿಂಗಳಿಂದ ಸ್ಫೂರ್ತಿ ರಿಮ್ಯಾಂಡ್ ಹೋಮ್ ನಲ್ಲಿದ್ದರು, ಇತ್ತ ಕಿರಣ್ ಕೂಡಾ ಎರಡು ತಿಂಗಳಿಂದ ಜೈಲಿನಲ್ಲಿದ್ದು ಬೇಲ್ ಮೇಲೆ ಹೊರಗೆ ಬಂದಿದ್ದ.
ಮಧ್ಯರಾತ್ರಿ 2.45 ರ ಸುಮಾರಿಗೆ ಜೀಜಾಬಾಯಿ ಮನೆಗೆ ನುಗ್ಗಿ ಕಿರಣ್ ಚಾಕು ಇರಿದಿದ್ದಾನೆ (Crime News).ಕಣ್ಣು ಬಿಟ್ಟು ನೋಡಿದಾಗ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ನೋಡಿ ಜೀಜಾಬಾಯಿ ಕಂಗಾಲಾಗಿದ್ದಾರೆ. ಜೀಜಾಬಾಯಿ ಎಚ್ಚರಗೊಳ್ಳುತ್ತಿದ್ದ ಹಾಗೆ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಬೆನ್ನಿಗೇ ಇರಿದ ಚಾಕು ಇಟ್ಟುಕೊಂಡೇ ಉಪನಗರ ಪೊಲೀಸ್ ಠಾಣೆಗೆ ಜೀಜಾಬಾಯಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಜೀಜಾಬಾಯಿಯನ್ನು ಚಿಕಿತ್ಸೆಗಾಗಿ ಕೀಮ್ಸ್ ಗೇ ದಾಖಲಿಸಿದ್ದಾರೆ. ಸದ್ಯ ಜೀಜಾಬಾಯಿ ಪರಿಸ್ಥಿತಿ ಗಂಭೀರವಾಗಿದ್ದು ಕೀಮ್ಸ್ ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಹಾವೇರಿಯ ಟ್ರೆಸರರಿ ಕಚೇರಿಯಲ್ಲಿ ಜೀಜಾಬಾಯಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ನಮ್ಮ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೇಸನ್ನು ಭೇದಿಸಿದ ಬೇರೆ ರಾಜ್ಯದ ಪೊಲೀಸ್ರು
ಇದನ್ನೂ ಓದಿ:ಹಣದಾಸೆಗೆ ಗರ್ಭಿಣಿ ಹಸು ಹತ್ಯೆ: ಇಬ್ಬರ ಬಂಧನ
