Asianet Suvarna News Asianet Suvarna News

ಮಹಿಳಾ ಪೇದೆ ಹತ್ಯೆಯಿಂದೆ ಮತ್ತೋರ್ವ ಲೇಡಿ ಪೊಲೀಸ್: ಎಲ್ಲಾ ನಡೆದಿದ್ದು ಪ್ರಿಯಕರನಿಗಾಗಿ!

ಹುಳಿಯಾರು ಠಾಣೆಯ ಮಹಿಳಾ ಪೇದೆ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರೀಯಕರನಿಗಾಗಿ ಮತ್ತೊಬ್ಬ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಸುಧಾಳ ಹತ್ಯೆಗೆ ಸುಫಾರಿ ನೀಡಿರುವ ಅಂಶ ಬೆಳಕಿಗೆ ಬಂದಿದೆ.

Big Twist To Huliyar Police Constable Sudha Murder Case colleague Gave supari rbj
Author
First Published Sep 19, 2022, 12:55 PM IST

ತುಮಕೂರು, ಸೆಪ್ಟೆಂಬರ್.19): ತುಮಕೂರು ಜಿಲ್ಲೆಯ ಹುಳಿಯಾರು ಠಾಣೆಯ ಮಹಿಳಾ ಪೊಲೀಸ್ ಕಾನ್ಸ್‌ ಟೇಬಲ್‌ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ನಾಪತ್ತೆಯಾಗಿದ್ದ ಹುಳಿಯಾರು ಠಾಣೆ ಪೇದೆ ಸುಧಾ ಎನ್ನುವರ ಶವ ಹಾಸನ ಜಿಲ್ಲೆಯ ಅರಸೀಕೆರೆ ಬಳಿ ಮತ್ತೆಯಾಗಿತ್ತು. ಸುಧಾಳನ್ನ ಸ್ವತಃ ಸಹೋದರ ಮಂಜುನಾಥ್ ಕೊಲೆ ಮಾಡಿ ಬಳಿಕ ಶಿವಮೊಗ್ಗದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುಧಾಳನ್ನ ಕೊಲೆ ಮಾಡಿದ್ದು ನಾನೇ ಎಂದು ಆಕೆಯ ಸಹೋದರ ಮಂಜುನಾಥ್ ಡೆತ್‌ನೋಟ್‌ನಲ್ಲಿ ಬರೆದಿದ್ದ.

ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ ಸ್ಫೋಟಕ ಮಾಹಿತಿ ಬಟಾಬಯಲಾಗಿವೆ. ಪ್ರೀಯಕರನಿಗಾಗಿ ಮತ್ತೊಬ್ಬ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಸುಧಾಳ ಹತ್ಯೆಗೆ ಸುಫಾರಿ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹುಳಿಯಾರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ರಾಣಿ ಹಾಗೂ ಮತ್ತೊಬ್ಬ ಆರೋಪಿ ನಿಖೇಶ್ ಎನ್ನುವಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹತ್ಯೆಗೆ ಸುಫಾರಿ ನೀಡಿರುವುದು ತಿಳಿದುಬಂದಿದೆ.

ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಡೆತ್‌ ನೋಟ್‌ನಿಂದ ಕಾಣೆಯಾಗಿದ್ದ ಮಹಿಳಾ ಪೇದೆ ಶವ ಪತ್ತೆ

ಒಂದೇ ಠಾಣೆಯ ಮಹಿಳಾ ಕಾನ್ ಸ್ಟೇಬಲ್ ಗಳಾಗಿದ್ದ ಕೊಲೆಯಾದ ಸುಧಾ ಹಾಗೂ ರಾಣಿ, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ಪೊಲೀಸ್ ನನ್ನ ಲವ್ ಮಾಡ್ತಿದ್ರು. ಅದೇ ವಿಚಾರಕ್ಕೆ ಕಳೆದ ಆರೇಳು ತಿಂಗಳಿಂದ  ಸುಧಾ ಹಾಗೂ ರಾಣಿ ಗಲಾಟೆ ಮಾಡಿಕೊಂಡಿದ್ದರು. ಸುಧಾಳನ್ನ ಮುಗಿಸಿದ್ರೆ ಆತ ನನಗೆ ಸಿಕ್ತಾನೆ ಅಂದುಕೊಂಡು ರಾಣಿ ಕೊಲೆಗೆ ಸುಫಾರಿ ನೀಡಿದ್ದಾಳೆ. ಸುಧಾ ಕೊಲೆಗೆ 5 ಲಕ್ಷ ಹಣಕ್ಕೆ ಸುಫಾರಿ ನೀಡಿದ್ದಳು ಎಂದು ತನಿಖೆ ವೇಳೆ ಗೊತ್ತಾಗಿದೆ.

ಸುಧಾಳನ್ನ ಕೊಲೆ ಮಾಡ್ಲೆಬೇಕು ಅಂತ ತೀರ್ಮಾನ ರಾಣಿ, ಮೊದಲ ಬಾರಿಗೆ ಕೊಲೆ ಮಾಡಲು ಸ್ಕೆಚ್‌ ಹಾಕಿ ಫೇಲ್ ಆಗಿದ್ದಳು. ಮಕ್ಕಳಿದ್ದರಿಂದ  ಸುಧಾ ಬಚಾವ್ ಆಗಿದ್ದಳು. ಸುಧಾ ಚಿಕ್ಕಪ್ಪನ ಮಗ ಮಂಜುನಾಥ್ ಹಾಗೂ ಆತನ ಸ್ನೇಹಿತ ನಿಖೇಶ್ ಗೆ 5 ಲಕ್ಚ ಹಣಕ್ಕೆ ಸುಫಾರಿ ನೀಡಿದ್ಲು. ಅದೇ ರೀತಿ ಆರೋಪಿಗಳಿಬ್ಬರು ರಾಣಿ ಹಣತೆಯಂತೆ. ಸೆಪ್ಟೆಂಬರ್ 4 ರಂದು ಶಿವಮೊಗ್ಗದಲ್ಲಿ ಓದುತ್ತಿದ್ದ ಸುಧಾ ಮಗನನ್ನ ನೋಡಿಕೊಂಡು ಬರೋ ನೆಪದಲ್ಲಿ ಸುಧಾಳನ್ನ ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಶಿವಮೊಗ್ಗದಿಂದ ವಾಪಸ್ ಬರುವಾಗ ಸುಧಾ ಕೊಲೆಗೆ ಸ್ಕೇಚ್ ಹಾಕಿದ್ರು. ಆದ್ರ, ಅದು ಮಿಸ್ ಆಗಿತ್ತು.

ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ ನಾಪತ್ತೆ,ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್

ಕೊಲೆ ಸ್ಕೇಚ್ ಮಿಸ್ ಆಗಿದ್ದಕ್ಕೆ ಗರಂ ಆಗಿದ್ದ ರಾಣಿ, ಅದೇನ್ ಮಾಡ್ತಿರೋ ನನಗೆ ಗೊತ್ತಿಲ್ಲ ಅವಳನ್ನ ಈ ವಾರದಲ್ಲೆ ಮುಗಿಸ್ಬೇಕು ಅಂತ ಸೂಚನೆ ಕೊಟ್ಟಿದ್ದಳು.ಅದರಂತೆ ಇದೇ 13 ರಂದು ಸುಧಾ ಕೊಲೆಗೆ ಮತ್ತೊಂದು ಪ್ಲಾನ್ ಕೊಟ್ಟಿದ್ಲು. ಡ್ಯೂಟಿಗೆ ಬಂದಿದ್ದ ಸುಧಾಳನ್ನ ನಿಖೇಶ್, ಸೆ.13ರ ಸಂಜೆ ಆಸ್ಪತ್ರೆಗೆಂದು ಕರೆದೊಯ್ಯುವ ನೆಪದಲ್ಲಿ ತಿಪಟೂರಿಗೆ‌ ಕರೆದುಕೊಂಡು ಹೋಗಿದ್ದಾನೆ.ಈ ವೇಳೆ ತಿಪಟೂರಿನ ಹಾಸನ ಸರ್ಕಲ್ ಬಳಿ ಸುಧಾಳ ಸಹೋದರ ಮಂಜುನಾಥ್ ಕಾರು ಹತ್ತಿಕೊಂಡಿದ್ದಾನೆ. ನಂತರ ಸುಧಾ ಕಣ್ಣಿಗೆ ಸ್ಪ್ರೈ ಮಾಡಿದ್ದಾನೆ. ಕಣ್ಣು ಉಜ್ಜಿಕೊಳ್ಳುವಷ್ಟರಲ್ಲಿ ಸುಧಾ ಎದೆಭಾಗಕ್ಕೆ ಚಾಕು ಇರಿದು ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.

ಬಳಿಕ ಯಾರಿಗೂ ಸುಳಿವು ಸಿಗದಂತೆ ತಿಪಟೂರು-ಅರಸಿಕೆರೆ ಮಾರ್ಗ ಮದ್ಯೆ ಸುಧಾಳ ಶವವನ್ನ ರಸ್ತೆಬದಿಯ ಪೋದೆಯೊಂದರಲ್ಲಿ ಬಿಸಾಡಿ ಎಸ್ಕೇಪ್ ಆಗಿದ್ರು.ಬಳಿಕ ಕೊಲೆಗೆ ಹೆದರಿ ಸಹೋದರ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ .

ಸುಧಾಳನ್ನ ಕೊಲೆಗೈದ ರಾತ್ರಿಯೇ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್, ಡೇತ್ ನೋಟ್ ಬರೆದಿಟ್ಟು ವಿಷ ಕುಡಿದು ಶಿವಮೊಗ್ಗ ಲಾಡ್ಜ್ ನಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಜುನಾಥ್ ಬರೆದ ಡೇತ್ ನೊಟ್ ನಿಂದ ಸುಧಾ ಶವ ಪತ್ತೆಯಾಗಿತ್ತು.ಇದೀಗ ಆಕೆಯ ಕೊಲೆ ರಹಸ್ಯ ಬಯಲಾಗಿದೆ.

ಮಿಸ್ಸಿಂಗ್ ಕೇಸ್ ದಾಖಲಾಗಿತ್ತು
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯನಿರ್ವಹಿಸುತ್ತಿದ್ದ. ಸುಧಾ (39) ನಾಪತ್ತೆಯಾಗಿದ್ದರು.

ಒಂದೂವರೆ ವರ್ಷದಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ಸೆಪ್ಟೆಂವರ್ 13ರಂದು  ಕರ್ತವ್ಯಕ್ಕೆ  ತೆರಳಿದ್ದರು. ಆದ್ರೆ, ಕರ್ತವ್ಯಕ್ಕೆ ಹೋದವರು ಇದುವರೆಗೂ ವಾಪಸ್ ಬರದೇ ನಾಪತ್ತೆಯಾಗಿದ್ದರು. 2 ವರ್ಷದ ಹಿಂದೆ ಸುಧಾ ಅವರ ಪತಿ ಸಾವನ್ನಪ್ಪಿದ್ದು, ಅವರಿಗೆ 14 ವರ್ಷದ ಗಂಡು ಮಗು ಹಾಗೂ 10 ವರ್ಷದ ಹೆಣ್ಣು ಮಗು ಇದೆ.

ಸುಧಾ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿದೆ.ಈ ಹಿನ್ನೆಲೆಯಲ್ಲಿ ಸುಧಾ ತಾಯಿ ದ್ರಾಕ್ಷಾಯಣಮ್ಮ ಅವರು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು. ಇದರ ಆಧಾರ ಮೇಲೆ ಪೇದೆ ಸುಧಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.  ಮತ್ತೊಂದೆಡೆ ಪೊಲೀಸ್ ಕಾನ್ಸ್‌ಟೇಬಲ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್ ಆಗಿತ್ತು.

ಆದ್ರೆ, ಇದೀಗ ಮಹಿಳಾ ಪೇದೆ ಸುಧಾಳನ್ನ ಸ್ವತಃ ಸಹೋದರನೇ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ.

Follow Us:
Download App:
  • android
  • ios