ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ ನಾಪತ್ತೆ,ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್
ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಪೇದೆ ನಾಪತ್ತೆ ಆಗಿರುವಂತಹ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪೇದೆ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ.
ತುಮಕೂರು, (ಸೆಪ್ಟೆಂಬರ್.16): ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಪೇದೆ ನಾಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ. ಸುಧಾ (39) ನಾಪತ್ತೆಯಾಗಿದ್ದಾರೆ.
ಒಂದೂವರೆ ವರ್ಷದಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ಸೆಪ್ಟೆಂವರ್ 13ರಂದು ಕರ್ತವ್ಯಕ್ಕೆ ತೆರಳಿದ್ದರು. ಆದ್ರೆ, ಕರ್ತವ್ಯಕ್ಕೆ ಹೋದವರು ಇದುವರೆಗೂ ವಾಪಸ್ ಬರದೇ ನಾಪತ್ತೆಯಾಗದ್ದಾರೆ. 2 ವರ್ಷದ ಹಿಂದೆ ಸುಧಾ ಅವರ ಪತಿ ಸಾವನ್ನಪ್ಪಿದ್ದು, ಅವರಿಗೆ 14 ವರ್ಷದ ಗಂಡು ಮಗು ಹಾಗೂ 10 ವರ್ಷದ ಹೆಣ್ಣು ಮಗು ಇದೆ.
ಸ್ನೇಹಿತನ ಬೈಕ್‌ನಲ್ಲಿ ಪಿಕ್‌ನಿಕ್‌ಗೆ ಹೋಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಸಾವು
ಸುಧಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.ಈ ಹಿನ್ನೆಲೆಯಲ್ಲಿ ಸುಧಾ ತಾಯಿ ದ್ರಾಕ್ಷಾಯಣಮ್ಮ ಅವರು ದೂರು ನೀಡಿದ್ದು, ಇದರ ಆಧಾರ ಮೇಲೆ ಪೇದೆ ಸುಧಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಪೊಲೀಸ್ ಕಾನ್ಸ್‌ಟೇಬಲ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್ ಆಗಿದೆ.
ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡ ಸ್ಫೋಟಕ್ಕೆ ಯತ್ನ
ತುಮಕೂರು: ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡ ಸ್ಫೋಟಕ್ಕೆ ಯತ್ನಿಸಿರುವ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ.
ಜಿಲೇಟಿನ್ ಕಡ್ಡಿ ಬಳಿಸಿ ಪಂಚಾಯ್ತಿ ಕಟ್ಟಡ ಧ್ವಂತಕ್ಕೆ ಯತ್ನಿಸಿದ್ದಾರೆ. ಸ್ಪೋಟದಿಂದ ಪಂಚಾಯ್ತಿ ಕಟ್ಟಡದ ಎರಡು ಗೋಡಿಗಳಿಗೆ ಹಾನಿಯಾಗಿದ್ದು, ಎರಡು ಕುರ್ಚಿಗಳು ಸುಟ್ಟು ಭಸ್ಮವಾಗಿ ಎಂದು ತಿಳಿದುಬಂದಿದೆ
ರಾತ್ರಿ 9 ಗಂಟಗೆ ಸಂದರ್ಭದಲ್ಲಿ ನಡೆದಿರುವ ಘಟನೆ ನಡೆದಿದ್ದು, ಜೋರಾದ ಸ್ಪೋಟದ ಶಬ್ದ ಕೇಳಿ ಬಂದಿತ್ತು. ವಿಷಯ ತಿಳಿದು ವೈ.ಎಸ್ ಹೊಸಕೋಟೆ ಪೊಲೀಸರು ಹಾಗೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.