ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2023ರಲ್ಲಿ 207 ಕೊಲೆಗಳಯ ನಡೆದಿದ್ಉ, ಈ ಪೈಕಿ ಅಕ್ರಮ ಸಂಬಂಧದ ಕಾರಣಕ್ಕಾಗಿಯೇ ಅತಿಹೆಚ್ಚು ಕೊಲೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಬೆಂಗಳೂರು (ಜ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2023ರಲ್ಲಿ ನಡೆದ ಅಪರಾಧ ಕೃತ್ಯಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 207 ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಅಕ್ರಮ ಸಂಬಂಧಕ್ಕೆ ಸಂಬಂಧಪಟ್ಟ ಕೊಲೆಗಳೇ ಅತಿಹೆಚ್ಚು ಎಂದು ಬೆಂಗಳೂರು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಪೊಲೀಸರು 2023ರ ಅಪರಾಧ ಕೃತ್ಯಗಳ ಅಂಕಿ ಅಂಶ ಬಿಡುಗಡೆ ಗೊಳಿಸಿದ್ದಾರೆ. 2022ಕ್ಕೆ ಹೊಲಿಸಿದರೆ 2023ರಲ್ಲಿ ಹೆಚ್ಚು ಕೊಲೆಗಳ ವರದಿಯಾಗಿವೆ. 2022ರಲ್ಲಿ 156 ಕೊಲೆಗಳಾಗಿದ್ದರೆ, 2023ರಲ್ಲಿ 207 ಕೊಲೆಗಳು ನಡೆದಿವೆ. ಇದರಲ್ಲಿ ಪೊಲೀಸರು 202 ಪ್ರಕರಣ ಭೇದಿಸಿದ್ದಾರೆ. ಮುಖ್ಯವಾಗಿ ಕೊಲೆಗಳ ಪ್ರಕರಣಗಳು ಕ್ಷುಲ್ಲಕ ಕಾರಣಕ್ಕೆ ಮತ್ತು ಅಕ್ರಮ ಸಂಬಂಧಕ್ಕೆ ಹೆಚ್ಚು ಕೊಲೆ ಕೇಸ್ ದಾಖಲು ಆಗಿವೆ ಎಂಬ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ 49 ಕೊಲೆಯಾದರೆ, ಅಕ್ರಮ ಸಂಬಂಧಕ್ಕೆ 32 ಕೊಲೆಗಳು ನಡೆದಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಹೋಟೆಲ್ನಲ್ಲಿ ಕೆಲಸ ಕೇಳಿದ ಮಹಿಳೆಯನ್ನು ಮಂಚಕ್ಕೆ ಕರೆದ ಕ್ಯಾಷಿಯರ್: ಫಟ್ ಅಂತ ಬಿತ್ತು ಚಪ್ಪಲಿ ಏಟು!
ಮತ್ತೊಂದೆಡೆ ರೌಡಿಗಳ ಹೊಡೆದಾಟ ಮತ್ತು ಪರಸ್ಪರ ದ್ವೇಷದ ಹಿನ್ನೆಲೆಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿರುವ ಪ್ರಕರಣಗಳೂ ಹೆಚ್ಚಾಗಿವೆ. 2023ರಲ್ಲಿ 7 ರೌಡಿ ಶೀಟರ್ ಗಳ ಕೊಲೆ ನಡೆದಿವೆ. 1,692 ಮನೆ ಕಳ್ಳತನ, 5,909ವಾಹನ ಕಳ್ಳತನ, 673 ರಾಬರಿ, 36 ಡಾಕಾಯಿತಿ, 153 ಸರಗಳ್ಳತನ ವರದಿಯಾಗಿವೆ. ಜೊತೆಗೆ, ಬೆಂಗಳೂರಿನಲ್ಲಿ 2023ರಲ್ಲಿ ಬರೋಬ್ಬರಿ 176 ಅತ್ಯಾಚಾರ ಪ್ರಕರಣ ವರದಿ ಆಗಿದ್ದು, ಎಲ್ಲಾ ಪ್ರಕರಣಗಳ ಆರೋಪಿಗಳನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದುವರೆದು, 1,135 ಲೈಂಗಿಕ ದೌರ್ಜನ್ಯ ಕೇಸ್ಗಳು ವರದಿಯಾಗಿವೆ. 1,189 ಕಿಡ್ನಾಪ್ ಕೇಸ್ಗಳಲ್ಲಿ 981 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 1007 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲು ಆಗಿವೆ. 17,623 ಸೈಬರ್ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ಪೊಲೀಸರು ಕೇವಲ 1,271 ಪ್ರಕರಣಗಳನ್ನ ಭೇದಿಸಿದ್ದಾರೆ. ಇನ್ನು 5,848 ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ ಕೇಸ್ ದಾಖಲು ಆಗಿವೆ. ಕುಖ್ಯಾತ 324 ರೌಡಿಗಳು ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಹೊಸ ಒನ್ಪ್ಲಸ್ ಮೊಬೈಲ್ ಬ್ಲಾಸ್ಟ್: ಬೆಂಗಳೂರು ಯುವಕನ ತೊಡೆ ಭಾಗ ಊಸ್ಟ್!
ಬೆಂಗಳೂರು ಪೊಲೀಸರು ಕಳೆದ ವರ್ಷ 103 ಕೋಟಿ ಮೌಲ್ಯದ 5,387 ಕೆಜಿ ಡ್ರಗ್ಸ್ ಸೀಜ್ ಮಾಡಿದ್ದಾರೆ. ಡ್ರಗ್ಸ್ ಕೇಸ್ಗಳಲ್ಲಿ 4,399 ಜನರನ್ನ ಬಂಧಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 126 ವಿದೇಶಿಗರ ಬಂಧನ ಮಾಡಲಾಗಿದ್ದು, ಬೆಂಗಳೂರಿಗೆ ಬಂದಿದ್ದ 247 ವಿದೇಶಿಗರನ್ನ ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.