ಹೊಸ ಒನ್‌ಪ್ಲಸ್ ಮೊಬೈಲ್ ಬ್ಲಾಸ್ಟ್: ಬೆಂಗಳೂರು ಯುವಕನ ತೊಡೆ ಭಾಗ ಊಸ್ಟ್!
ಬೆಂಗಳೂರಿನಲ್ಲಿ ಒನ್‌ಪ್ಲಸ್ ಮೊಬೈಲ್ ಖರೀದಿ ಮಾಡಿದ ಮೂರೇ ತಿಂಗಳಲ್ಲಿ ಬ್ಲಾಸ್ಟ್ ಆಗಿದ್ದು, ಜೇಬಿನಲ್ಲಿ ಫೋನ್ ಇಟ್ಟುಕೊಂಡಿದ್ದ ಯುವಕನ ತೊಡೆಯನ್ನೇ ಸುಟ್ಟು ಹಾಕಿದೆ.
ಬೆಂಗಳೂರು (ಜ.03): ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಾಸವಿರುವ ಯುವಕ ಕಳೆದ ಅಕ್ಟೋಬರ್ ತಿಂಗಳಲ್ಲಿ ಹತ್ತಿರದ ಮೊಬೈಲ್ ಶೋ ರೂಮ್‌ನಿಂದ ಹೊಸ ಒನ್‌ಪ್ಲಸ್ ಮೊಬೈಲ್ ಖರೀದಿಸಿದ್ದರು. ಈ ಮೊಬೈಲ್ ಅನ್ನು ಜೇಬಿನಲ್ಲಿಟ್ಟುಕೊಂಡಿದ್ದಾಗಲೇ ಬ್ಲಾಸ್ಟ್ ಆಗಿದ್ದು, ಯುವಕ ತೊಡೆ ಭಾಗಕ್ಕೆ ದೊಡ್ಡ ಗಾಯವಾಗಿದೆ. 20 ಸಾವಿರ ರೂ. ಮೊಬೈಲ್ ಖರೀದಿ ಮಾಡಿದ್ದ ಯುವಕನ ತೊಡೆ ಸರ್ಜರಿಗೆ 4 ಲಕ್ಷ ರೂ. ಬೇಕು ಎಂದು ವೈದ್ಯರು ತಿಳಿಸಿದ್ದು, ಯುವಕನ ಬಾಳಿಗೆ ಕಂಟಕವಾಗಿದೆ.
ಮೊಬೈಲ್ ಬ್ಲಾಸ್ಟ್ ಆಗುವ ಸುದ್ದಿಗಳು ಆಗಿಂದಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಆದರೆ, ಈಗ ಬೇರೆ ಎಲ್ಲೋ ಆಗಿರುವ ಸುದ್ದಿಯಲ್ಲ, ನಮ್ಮ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿಯೇ ಬ್ರ್ಯಾಂಡ್ ಎಂದು ಹೇಳಿಕೊಳ್ಳುವ ಒನ್‌ಪ್ಲಸ್ ಮೊಬೈಲ್ ಬ್ಲಾಸ್ಟ್ ಆಗಿದೆ. ಹೊಸ ಫೋನ್ ಖರೀದಿ ಮಾಡಿ ಕೇವಲ 3 ತಿಂಗಳಿಗೆ ಯುವಕ ತನ್ನ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಾಗ ಬ್ಲಾಸ್ಟ್ ಆಗಿದೆ. ಇದರಿಂದ ಯುವಕನ ತೊಡೆ ಭಾಗದಲ್ಲಿ ದೊಡ್ಡ ಗಾಯವಾಗಿದ್ದು, ಇದನ್ನು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಇದಕ್ಕೆ 4 ಲಕ್ಷ ರೂ. ಖರ್ಚಾಗಲಿದೆ ಎಂದು ಹೇಳಿದ್ದು, ಯುವಕ ಬೆಚ್ಚಿ ಬಿದ್ದಿದ್ದಾನೆ.
ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಸಮಾಜಘಾತುಕ ಶಕ್ತಿ: ಸಚಿವ ಈಶ್ವರ ಖಂಡ್ರೆ:
ವೈಟ್ ಫೀಲ್ಡ್ ನಲ್ಲಿ ವಾಸವಿರುವ ಯುವಕ ಪ್ರಸಾದ್ (24) ಎನ್ನುವವರಿಗೆ ಗಾಯವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್ (1+) ಕಂಪನಿಯ ಮೊಬೈಲ್ ಖರೀದಿಸಿದ್ದನು. ವೈಟ್‌ಫೀಲ್ಡ್‌ನ ಖಾಸಗಿ ಮೊಬೈಲ್ ಶೋ ರೂಮ್ ಒಂದರಲ್ಲಿ ಈ ಮೊಬೈಲ್ ಖರೀದಿ ಮಾಡಿದ್ದನು. ತಾನಾಯ್ತು ತನ್ನ ದುಡಿಮೆಯಾಯ್ತು ಎಂದು ವಾಸಮಾಡಿಕೊಂಡಿದ್ದ ಯುವಕನಿಗೆ ಈಗ ತೊಡೆಯ ಭಾಗಕ್ಕೆ ಗಾಯವಾಗಿ ನೋವು ಅನುಭವಿಸುವುದಲ್ಲದೇ, ಚಿಕಿತ್ಸಾ ವೆಚ್ಚಕ್ಕೂ ಹಣ ಹೊಂದಾಣಿಕೆ ಮಾಡಬೇಕಾಗಿದೆ. ಇದರಿಂದ ಯುವಕ ಕಂಗಾಲಾಗಿದ್ದು, ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾನೆ.
ನಮ್ಮ ದೇಶ ಹಿಂದೂ ರಾಷ್ಟ್ರವಾದರೆ, ಪಾಕಿಸ್ತಾನ-ಅಪಘಾನಿಸ್ತಾನದಂತೆ ದಿವಾಳಿಯಾಗಲಿದೆ: ಯತೀಂದ್ರ ಸಿದ್ದರಾಮಯ್ಯ
ಹೊಸ ಮೊಬೈಲ್ ಕೊಡುವುದಾಗಿ ಹೇಳಿದ ಶೋ ರೂಮ್ ಸಿಬ್ಬಂದಿ: ಇನ್ನು ಹೊಸ ಮೊಬೈಲ್ ಖರೀದಿ ಮಾಡಿ ವಾರಂಟಿ ಅವಧಿಯಲ್ಲಿಯೇ ಮೊಬೈಲ್ ಬ್ಲಾಸ್ಟ್ ಆಗಿದ್ದೂ ಅಲ್ಲದೆ ಯುವಕನಿಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಮೊಬೈಲ್ ಮಾರಾಟ ಮಾಡಿದ್ದ ಶೋ ರೂಮ್ ಸಿಬ್ಬಂದಿ ಯುವಕನಿಗೆ ತಾವೇ ಮೆಡಿಕಲ್ ವೆಚ್ಚವನ್ನು ಭರಿಸುವುದಾಗಿ ಹಾಗೂ ಹೊಸ ಮೊಬೈಲ್ ಕೊಡುವುದಾಗಿ ಹೇಳಿದೆ. ಆದರೆ, ವೈದ್ಯರು ಹೇಳಿದಂತೆ 4 ಲಕ್ಷ ರೂ. ವೆಚ್ಚ ಪಾವತಿ ಮಾಡೊಲ್ಲ. ಪ್ರಾಥಮಿಕ ಚಿಕಿತ್ಸೆ ಪಡೆಯಲು ಮಾತ್ರ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ನಾನು ದುಡಿಮೆ ಮಾಡುವವನಾಗಿದ್ದು, ನಿಮ್ಮ ಮೊಬೈಲ್ ಖರೀದಿಯಿಂದ ನನಗೆ ಗಾಯವಾಗಿರುವ ಜೊತೆಗೆ, ದುಡಿಮೆಯೂ ನಷ್ಟವಾಗುತ್ತಿದೆ. ಆದ್ದರಿಂದ ನನಗೆ ದುಡಿಮೆ ವೆಚ್ಚ ಹಾಗೂ ವೈದ್ಯಕೀಯ ವೆಚ್ಚವನ್ನೂ ಭರಿಸಬೇಕು ಎಂದು ಪಟ್ಟು ಹಿಡಿದಿದ್ದಾನೆ. ಮೊಬೈಲ್ ಶೋ ರೂಮ್ ಸಿಬ್ಬಂದಿ ಇದಕ್ಕೊಪ್ಪದ ಹಿನ್ನೆಲೆಯಲ್ಲಿ ವಕೀಲರನ್ನು ಸಂಪರ್ಕ ಮಾಡಿದ್ದಾನೆ.