Asianet Suvarna News Asianet Suvarna News

ಬೆಂಗಳೂರು ಪೆಟ್ರೋಲ್‌ ಬಂಕ್‌ ಯುವತಿ ಎಳೆದೊಯ್ದ ಕಾಮುಕ, ಕೊಲೆ ಮಾಡಿ ಮನೆಮುಂದೆ ಎಸೆದ

ಬೆಂಗಳೂರಿನ ಪೆಟ್ರೋಲ್‌ ಬಂಕ್‌ ಯುವತಿಯನ್ನು ರಾತ್ರಿವೇಳೆ ಎಳೆದೊಯ್ದ ಕಾಮುಕ, ಬೆಳಗ್ಗಿನ ಜಾವ ಆಕೆಯ ಮನೆಮುಂದೆ ಶವವನ್ನು ಎಸೆದು ಹೋಗಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.

Bengaluru Petrol Bunk young lady murder accused arrested from mahadevapura police sat
Author
First Published Aug 12, 2023, 1:04 PM IST

ಬೆಂಗಳೂರು (ಆ.12): ಕಳೆದ ಎರಡು ದಿನಗಳ ಹಿಂದೆ ಮಹದೇವಪುರದಲ್ಲಿ ರಾತ್ರಿವೇಳೆ ಕಾಣೆಯಾಗಿ ಬೆಳಗ್ಗೆ ಮನೆಮುಂದೆ ಶವವಾಗಿ ಪತ್ತೆಯಾಗಿದ್ದ ಯುವತಿಯ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಆರೋಪಿಯ ಪತ್ತೆಗೆ ಮುಂದಾದ ಪೊಲೀಸರಿಗೆ ಮೃತಳ ಪಾದವೇ ಕೊಲೆಗಾರನ ಸುಳಿವು ನೀಡಿತ್ತು. ಕೊಲೆಗಾರ ಮತ್ಯಾರೂ ಅಲ್ಲ, ಪಕ್ಕದ ಮನೆಯವನೇ ಎಂದು ಪತ್ತೆಯಾಗಿದೆ.

ಕೊಲೆಯಾದ ಯುವತಿ ಮಹಾನಂದಾ (24) ಆಗಿದ್ದಾಳೆ. ಕೊಲೆ ಮಾಡಿದ ಆರೋಪಿ ಪಕ್ಕದ ಮನೆಯ ಕೃಷ್ಣಾ ಎಂಬುದು ಪತ್ತೆಯಾಗಿದೆ. ಬೆಂಗಳೂರಿನ ಮಹದೇವಪುರದಲ್ಲಿ ರಾತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಯುವತಿಯ ಮೃತದೇಹ ಮನೆಯ ಮುಂದೆಯೇ ನಿಗೂಢವಾಗಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರ ತನಿಖೆಯಲ್ಲಿ ಭಯಾನಕ ಸಂಗತಿ ಬಯಲಾಗಿದೆ. ಮೃತ ಯುವತಿಯ ಎದುರು ಮನೆಯಲ್ಲಿದ್ದ ಕಾಮುಕನಿಂದಲೇ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ. 

ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡನ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

ಗುರುವಾರ ರಾತ್ರಿ ಎಂದರೆ (ಮೊನ್ನೆ-ಆ.10) ಮಹಾನಂದಾ ಅಡುಗೆ ಮಾಡುವ ವೇಳೆ ಮನೆಯಿಂದ ಹೊರಗೆ ಬಂದಿದ್ದಳು. ಆಗ ಪಕ್ಕದ ಮನೆಯ ಬಾಗಿಲ ಬಳಿ ಬಂದಾಗ ಆರೋಪಿ ಕೃಷ್ಣ ಆಕೆಯನ್ನು ಹಿಡಿದು ಬಲವಂತವಾಗಿ ಮನೆಯ ಒಳಗೆ ಎಳೆದುಕೊಂಡಿದ್ದಾನೆ. ಬಳಿಕ ಯುವತಿ ಮಹಾನಂದಾಗೆ ಬಲವಂತವಾಗಿ ಮುತ್ತು ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಜೋರಾಗಿ ಕಿರುಚಲು ಮುಂದಾಗಿದ್ದಾಳೆ. ಒಂದು ವೇಳೆ ಹೊರಗಿನವರಿಗೆ ಗೊತ್ತಾದಲ್ಲಿ ತನಗೆ ಧರ್ಮದೇಟು ಬೀಳುತ್ತದೆ ಎಂದರಿತ ಆರೋಪಿ, ಮಹಾನಂದಾಳನ್ನು ಹಿಂಬದಿಯಿಂದ ತಬ್ಬಿಕೊಂಡು ಒಂದು ಕೈಯಿಂದ ಆಕೆಯ ಮೂಗು, ಬಾಯಿಯನ್ನು ಮುಚ್ಚಿ ಹಾಗೂ ಇನ್ನೊಂದು ಕೈಯಿಂದ ಕುತ್ತಿಗೆ ಹಿಸುಕಿದ್ದಾನೆ. ಈ ವೇಳೆ ಕಿರುಚಾಡಲು ಸಾಧ್ಯವಾಗದೆ ಮಹಾನಂದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

ಪತ್ನಿ ಮುಂದೆಯೂ ಬಾಯಿಬಿಡದ ಆರೋಪಿ: ಕೊಲೆ ಬಳಿಕ ಬೆಡ್​ಶೀಟ್​ನಲ್ಲಿ ಮಹಾನಂದಾಳ ಮೃತದೇಹವನ್ನು ಸುತ್ತಿ, ಮನೆಯ ಮೂಲೆಯೊಂದರಲ್ಲಿ ಇಟ್ಟಿದ್ದನು. ಇನ್ನು ಮನೆಯಿಂದ ಹೊರಹೋಗಿದ್ದ ಆರೋಪಿಯ ಪತ್ನಿ ಮನೆಗೆ ಬಂದಿದ್ದಾಳೆ. ಆಗಲೂ, ತಾನು ಏನೂ ಮಾಡಿಲ್ಲವೆಂಬಂತೆ ಸುಮ್ಮನಿದ್ದು, ಬೆಳಗಿನ ಜಾವ ಮನೆಯೊಳಗಿದ್ದ ಶವವನ್ನು ತಂದು ಮೃತಳ ಮನೆ ಮುಂದೆ ಹಾಕಿದ್ದಾನೆ. ನಂತರ, ಮೃತದೇಹ ಪತ್ತೆಯಾದ ನಂತರ ಗೋಳಾಡುತ್ತಿದ್ದರೈ, ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ನಾಟಕವಾಡಿದ್ದನು. ಆದರೆ, ತನಿಖೆಯಲ್ಲಿ ಆರೋಪಿ ಕೃಷ್ಣ ಸಿಕ್ಕಿಬಿದ್ದಿದ್ದು, ಆತನನ್ನ ಬಂಧಿಸಿರುವ ಮಹದೇವಪುರ ಠಾಣಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗಾರನ ಸುಳಿವು ಕೊಟ್ಟಿತ್ತು ಮೃತಳ ಪಾದ: ಇನ್ನು ಕೊಲೆಯಾದ ಯುವತಿಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ. ಜೊತೆಗೆ ಮೃತೆ ಮಹಾನಂದಾ ಮನೆಯಿಂದ ಹೊರಹೋಗುವಾಗ ಚಪ್ಪಲಿಯನ್ನೂ ಧರಿಸಿರಲಿಲ್ಲ. ಆದರೂ ಆಕೆಯ ಪಾದದಲ್ಲಿ ಮಾತ್ರ ಯಾವುದೇ ಧೂಳು ಅಂಟಿಕೊಂಡಿರಲಿಲ್ಲ. ಇದರಿಂದ ಕೊಲೆಯಾರರು ಯಾರೋ ಅಕ್ಕಪಕ್ಕದವರೇ ಇರಬೇಕು ಎಂದು ಪೊಲೀಸರು ನಿರ್ಧಾರ ಕೈಗೊಂಡಿದ್ದಾರೆ. ನಂತರ, ಅಕ್ಕ-ಪಕ್ಕದವರನ್ನು ವಿಚಾರಣೆ ಮಾಡಿದಾಗ ಒಬ್ಬ ಬಾಲಕಿ ಕೊನೆಯದಾಗಿ ಮೃತಳು ಕೊಲೆ ಆರೋಪಿ ಮನೆ ಬಾಗಿಲ ಬಳಿ ನಿಂತಿರುವುದನ್ನು ಪೊಲೀಸರ ಮುಂದೆ ಹೇಳಿದ್ದಾಳೆ. ಇದರಿಂದ ಕೊಲೆಗಾರ ಇವನೇ ಎಂದು ಅನುಮಾನದಿಂದ ವಶಕ್ಕೆ ಪಡೆದು ವಿಚಾರಣೆ ಮಾಡಿದ ಬೆನ್ನಲ್ಲೇ ಕೊಲೆ ಮಾಡಿದ ಸತ್ಯವನ್ನು ಬಾಯಿಬಿಟ್ಟಿದ್ದಾನೆ. 

ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು: ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದು ನದಿಗೆಸೆದ ಪತಿ

ಕೊಲೆ ನಡೆದ ಘಟನೆ ಹಿನ್ನೆಲೆ ಏನು?: 
ಕಲಬುರಗಿ ಮೂಲದ ಮಹಾನಂದಾ ಮಹದೇವಪುರದಲ್ಲಿ ಅಕ್ಕನೊಂದಿಗೆ ವಾಸವಾಗಿದ್ದಳು. ಅಕ್ಕನ ಜತೆ ಶೆಲ್ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ ಅಡುಗೆ ಮಾಡೋದಕ್ಕೆ ಅಂತ ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ಕಾಣೆಯಾಗಿದ್ದಳು. ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ದೂರು ನೀಡಿದ್ದಳು. ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಮನೆಯ ಬಳಿ ಸಹೋದರಿಯ ಮೃತದೇಹವನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದರು. ಈಗ ಕೊಲೆಗಾರ ಯಾರೆಂಬುದು ಪತ್ತೆಯಾಗಿದೆ.

Follow Us:
Download App:
  • android
  • ios