Asianet Suvarna News Asianet Suvarna News

ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡನ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

ಮಂಡ್ಯ ಜಿಲ್ಲೆಯ ಮದ್ದೂರಿನ ಜೆಡಿಎಸ್‌ ಮುಖಂಡ ಅಪ್ಪುಗೌಡ ಮೇಲೆ ಹಾಡಹಗಲೇ ರೌಡಿಗಳು ಮಚ್ಚಿನಿಂದ ಅಟ್ಯಾಕ್‌ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ.

Miscreants attacked JDS leader Appugowda in broad daylight in Maddur sat
Author
First Published Aug 12, 2023, 11:08 AM IST

ಮಂಡ್ಯ (ಆ.12): ರಾಜ್ಯದ ಸಕ್ಕರೆನಾಡು ಮಂಡ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಅಟ್ಟಹಾಸ ಮತ್ತೆ ಹೆಚ್ಚಾಗಿದೆ. ಜಿಲ್ಲೆಯ ಜೆಡಿಎಸ್‌ ಮುಖಂಡ ಅಪ್ಪುಗೌಡ ಮೇಲೆ ಹಾಡಹಗಲೇ ಸಿನಿಮಾ ಶೈಲಿಯಲ್ಲಿ ಡ್ರ್ಯಾಗರ್‌, ಮಚ್ಚು ಮತತು ಲಾಂಗು ಹಿಡಿದು ಅಟದಯಾಕ್‌ ಮಾಡಿದ್ದಾರೆ. ಅಪ್ಪುಗೌಡ ಮಾಜಿ ರೌಡಿಶೀಟರ್‌ ಕೂಡ ಆಗಿದ್ದನು.

ಜೆಡಿಎಸ್ ಮುಖಂಡ ಅಪ್ಪುಗೌಡ ಮೇಲೆ ಮರ್ಡರ್‌ ಅಟ್ಯಾಕ್ ಮಾಡಲಾಗಿದೆ. ಅಪ್ಪುಗೌಡ, ಜೆಡಿಎಸ್ ಮುಖಂಡ ಹಾಗೂ ಮಾಜಿ ರೌಡಿ ಶೀಟರ್ ಆಗಿದ್ದನು. ಪ್ರತಿ ಶನಿವಾರ ಮಂಡ್ಯ ಜಿಲ್ಲೆ ಮದ್ದೂರಿನ ಪ್ರಸಿದ್ದ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಬರುವುದರ ಬಗ್ಗೆ ಖಚಿತ ಮಾಹಿತಿ ಇಟ್ಟುಕೊಂಡು ಹತ್ಯೆಗೆ ಅಟ್ಯಾಕ್‌ ಮಾಡಲಾಗಿದೆ. ದೇವಸ್ಥಾನದಲ್ಲಿ ತಾವು ಕೂಡ ಭಕ್ತರಂತೆ ದೇವಸ್ಥಾನದಲ್ಲಿ ಹಾಗೂ ಆವರಣದಲ್ಲಿ ಹೊಂಚು ಹಾಕಿ ನಿಂತಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ಬಂದು ದೇವರಿಗೆ ಕೈಮುಗಿಯುವಾಗ ಎಲ್ಲ ದುಷ್ಕರ್ಮಿಗಳು ಏಕಾಏಕಿ ಚಾಕು ಹಾಗೂ ಡ್ರ್ಯಾಗರ್‌ ಹಿಡಿದು ಮನಸೋ ಇಚ್ಛೆ ಚುಚ್ಚಿದ್ದಾರೆ. 

ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು: ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದು ನದಿಗೆಸೆದ ಪತಿ

ದೇವರಿಗೆ ಕೈ ಮುಗಿಯುವಾಗ ಘಟನೆ: ಇನ್ನು ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಅಪ್ಪುಗೌಡ ಪೂಜೆಗೆ ತೆರಳಿದ್ದನು. ಅಪ್ಪುಗೌಡ ಬರುವಿಕೆಯನ್ನೇ ಹೊಂಚು ಹಾಕಿ ಕಾದಿದ್ದ ಆರು ಮಂದಿ ದುಷ್ಕರ್ಮಿಗಳು, ದೇವರ ದರ್ಶನಕ್ಕೆ ತೆರಳುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದ್ದಾರೆ. ತಕ್ಷಣ ದೇಗುಲದಲ್ಲಿದ್ದ  ಭಕ್ತರು ಕೂಗಿಕೊಂಡಿದ್ದಾರೆ. ಭಕ್ತರು ಕೊಗಿಕೊಳ್ಳುತ್ತಿದ್ದಂತೆ ಲಾಂಗ್ ಬೀಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಅಪ್ಪುಗೌಡನ ಬೆನ್ನು ಮತ್ತು ಭುಜಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅಪ್ಪುಗೌಡ ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದುಷ್ಕರ್ಮಿಗಳನ್ನು ಅಟ್ಟಾಡಿಸಿ ಹಿಡಿದ ಪೊಲೀಸರು:  ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದ ಹಂತಕರನ್ನು ಮದ್ದೂರು ಪೊಲೀಸರು ಕೂಡ ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ (ಛೇಸಿಂಗ್‌) ಬಂಧಿಸಿದ್ದಾರೆ. ಟಾಟಾ ಸುಮೊನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳು. ಟಾಟಾ ಸುಮೋ ಹಿಂಬಾಲಿಸಿ ಹಲಗೂರು ಪೊಲೀಸರ ಸಹಕಾರ ಪಡೆದು ದುಷ್ಕರ್ಮಿಗಳು ಅರೆಸ್ಟ್ ಮಾಡಿದ್ಆರೆ. ಹಲಗೂರು ಸಮೀಪ ದುಷ್ಕರ್ಮಿಗಳನ್ನ ಹಿಡಿದ ಖಾಕಿಪಡೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಬಂಧನ ಮಾಡಲಾಗಿದೆ.

ಕರ್ನಾಟಕ ಗುತ್ತಿಗೆದಾರರಿಗೆ ಗುನ್ನಾ ಕೊಟ್ಟ ಸಿದ್ದರಾಮಯ್ಯ: ಶೇ.40 ಕಮಿಷನ್‌ ತನಿಖೆಯಾಗದೇ ಬಿಲ್‌ ಕೊಡಲ್ಲ

ಪರಾರಿ ಆಗುತ್ತಿದ್ದ ದುಷ್ಕರ್ಮಿಗಳನ್ನು ಅಡ್ಡಗಟ್ಟಿದ ಹಲಗೂರು ಪೊಲೀಸರು: ಮದ್ದೂರು ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸುಮಾರು 25 ರಿಂದ 30 ಕಿ.ಮೀ. ದೂರದವರೆಗೆ ಹಿಂಬಾಲಿಸಿ  ದುಷ್ಕರ್ಮಿಗಳನ್ನ ಬಂಧಿಸಲಾಗಿದೆ. ಘಟನೆ ನಡೆದು ಪರಾರಿ ಆಗುವುದನ್ನು ಖಚಿತ ಮಾಡಿಕೊಂಡ ಪೊಲೀಸರು ಟಾಟಾ ಸುಮೋವನ್ನು ಒಂದು ದಾರಿಯಲ್ಲಿ ಛೇಸಿಂಗ್‌ ಮಾಡುತ್ತಾ, ಹಲಗೂರು ಪೊಲೀಸರಿಗೆ ನಾಕಾಬಂದಿ ರಚಿಸಿ ಅಡ್ಡಗಟ್ಟುವಂತೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ, ಶಸ್ತ್ರಸಜ್ಜಿತವಾಗಿ ನಾಕಾಬಂದಿ ರಚಿಸಿ ದುಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿದ ಹಲಗೂರು ಪೊಲೀಸರು, ಹಂತಕರನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರಿಗೆ ನೆರವು ನೀಡಿದ್ದಾರೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. 

Follow Us:
Download App:
  • android
  • ios