ಅತಿಯಾದ ಮೊಬೈಲ್‌ ಗೀಳಿಗೆ ಬಿದ್ದ ಪತ್ನಿ ನಡೆಯಲ್ಲಿ ಅನುಮಾನಗೊಂಡ ಪತಿರಾಯ, ತನ್ನ ಹೆಂಡತಿಯನ್ನ ಕೊಲೆಗೈದು ಮಾವನೊಂದಿಗೆ ಜೊತೆಗೂಡಿ ಶವವನ್ನು ನದಿಗೆ ಎಸೆದಿರುವ ಘಟನೆ ತಾಲ್ಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ. 

ಶ್ರೀರಂಗಪಟ್ಟಣ (ಆ.11): ಅತಿಯಾದ ಮೊಬೈಲ್‌ ಗೀಳಿಗೆ ಬಿದ್ದ ಪತ್ನಿ ನಡೆಯಲ್ಲಿ ಅನುಮಾನಗೊಂಡ ಪತಿರಾಯ, ತನ್ನ ಹೆಂಡತಿಯನ್ನ ಕೊಲೆಗೈದು ಮಾವನೊಂದಿಗೆ ಜೊತೆಗೂಡಿ ಶವವನ್ನು ನದಿಗೆ ಎಸೆದಿರುವ ಘಟನೆ ತಾಲ್ಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪೂಜಾ (26) ಗಂಡನಿಂದಲೇ ಕೊಲೆಯಾದ ಮಹಿಳೆ. ಶ್ರೀನಾಥ್‌ (33) ಕೊಲೆ ಮಾಡಿದ ಪತಿ, ಮೊಬೈಲ್‌ನಲ್ಲಿ ರೀಲ್ಸ್‌ ಮಾಡುವ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದ ಪತ್ನಿಯ ನಡೆಯಲ್ಲಿ ಅನುಮಾನಗೊಂಡ ಪತಿ, ತನ್ನ ಪತ್ನಿಯನ್ನೇ ಅವಳ ವೇಲ್‌ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಕಳೆದ ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾ ಮತ್ತ ಶ್ರೀನಾಥ್‌, ಆರಂಭದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದದರು. ಈ ದಂಪತಿಗೆ ಒಂದು ಹೆಣ್ಣು ಮಗು ಇದೆ. ಕೆಲವು ವರ್ಷಗಳಿಂದ ಟಿಕ್‌ ಟಾಕ್‌ ಗೀಳು ಬೆಳೆಸಿಕೊಂಡಿದ್ದ ಪೂಜಾ, ರೀಲ್ಸ್‌ ಮಾಡುವ ಜೊತೆಗೆ ಹೆಚ್ಚೆಚ್ಚು ಫೋನ್‌ ಬಳಕೆ ಮಾಡುತ್ತಿದ್ದರು, ಅತಿಯಾದ ಮೊಬೈಲ್‌ ಬಳಕೆಯೇ ಇವರ ಸಂಸಾರಕ್ಕೆ ಕಂಟಕವಾಗಿ ಪರಿಣಮಿಸಿದೆ.

ಪ್ರಧಾನಿ ವಿರುದ್ಧ ಅವಿ​ಶ್ವಾಸ ನಿರ್ಣ​ಯಕ್ಕೆ ಮುಂದಾ​ಗಿ ಬೆತ್ತ​ಲೆ​ಯಾದ ಐಎನ್‌ಡಿಐಎ: ಸಂಸದ ರಾಘವೇಂದ್ರ

ಮೊಬೈಲ್‌ ಗೀಳಿಗೆ ಅಂಟಿಕೊಂಡಿದ್ದ ಪತ್ನಿಗೆ ಪತಿ ಶ್ರೀನಾಥ್‌ ಹಲವಾರು ಬಾರಿ ಬುದ್ಧಿ ಹೇಳಿದ್ದನು. ಇದರ ನಡುವೆಯೂ ನಿರಂತರ ಮೊಬೈಲ್‌ ಚಾಟಿಂಗ್‌, ರೀಲ್ಸ್‌, ಟಿಕ್‌ಟಾಕ್‌ ಗಳಲ್ಲೇ ಪೂಜಾ ಹೆಚ್ಚು ಸಮಯ ಕಳೆಯುತ್ತಿದ್ದಳು. ಇದರಿಂದ ಪತಿ ರೋಸಿಹೋಗಿದ್ದನು ಎನ್ನಲಾಗಿದೆ. ಮಿತಿ ಮೀರಿದ ಮೊಬೈಲ್‌ ಫೋನ್‌ ಬಳಕೆಯಿಂದ ಪೂಜಾ ಪರಪುರುಷನೊಂದಿಗೆ ಸಂಬಂಧ ಹೊಂದಿರುವ ಪತಿ ಅನುಮಾನಗೊಂಡಿದ್ದನು. 

2030ಕ್ಕೆ ಏಡ್ಸ್‌ ಮುಕ್ತ ಭಾರತ ನಿರ್ಮಾಣ ಸರ್ಕಾ​ರ​ದ ಗುರಿ: ಡಾ.ಸೆಲ್ವಮಣಿ

ಇದೇ ವಿಷಯವಾಗಿ ಆಗಾಗ ಸಂಸಾರ ದಲ್ಲಿ ಗಲಾಟೆಗಳು ನಡೆಯಯುತ್ತಿತ್ತು, ಪತ್ನಿಯ ನಡೆಯಿಂದ ಬೇಸತ್ತ ಶ್ರೀನಾಥ್‌ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆಗೈದಿದ್ದಾನೆ ಬಳಿಕೆ ತನ್ನ ಮಾವನ ಸಹಾಯದೊಂದಿಗೆ ಪತ್ನಿಯ ಶವವನ್ನು ಸಾಗಿಸಿ ಕಾವೇರಿ ನದಿಗೆ ಎಸೆದು ಬಂದಿದ್ದರು. ಘಟನೆಯಾದ ಮೂರು ದಿನಗಳ ಬಳಿಕ ಪೊಲೀಸರಿಗೆ ಕರೆ ಮಾಡಿ ಆರೋಪಿ ಶ್ರೀನಾಥ್‌ ಶರಣಾಗಿದ್ದಾನೆ, ಅರಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಗಳು ನಡೆಯುತ್ತಿದೆ.