Asianet Suvarna News Asianet Suvarna News

ಅನೈತಿಕ ಸಂಬಂಧ ನೋಡಿದ್ದಕ್ಕೆ ಹಲ್ಲೆ: ತಾಯಿ ವಿರುದ್ಧ 9 ವರ್ಷದ ಬಾಲಕಿ ಕೇಸ್‌!

ತನ್ನ ತಾಯಿಯ ಅನೈತಿಕ ಸಂಬಂಧ ನೋಡಿದ್ದಕ್ಕೆ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿ ಒಂಬತ್ತು ವರ್ಷದ ಬಾಲಕಿಯೊಬ್ಬಳು ಹೆತ್ತ ತಾಯಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ಬಾಲಕಿ ನೀಡಿದ ದೂರಿನಂತೆ ಕಲಬುರಗಿಯ ಬ್ರಹ್ಮಪೂರ ಠಾಣೆ ಪೊಲೀಸರು ಹಾಸ್ಟೆಲ್‌ ವಾರ್ಡನ್‌ ಆಗಿರುವ ತಾಯಿ ಹಾಗೂ ಕೆಎಎಸ್‌ ಅಧಿಕಾರಿ ರಾಮನಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Assault on daughter for witnessing illicit relationship FIR against mother at Kalaburagi rav
Author
First Published Jan 6, 2024, 12:46 PM IST

ಕಲಬುರಗಿ (ಜ.6) : ತನ್ನ ತಾಯಿಯ ಅನೈತಿಕ ಸಂಬಂಧ ನೋಡಿದ್ದಕ್ಕೆ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿ ಒಂಬತ್ತು ವರ್ಷದ ಬಾಲಕಿಯೊಬ್ಬಳು ಹೆತ್ತ ತಾಯಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ಬಾಲಕಿ ನೀಡಿದ ದೂರಿನಂತೆ ಕಲಬುರಗಿಯ ಬ್ರಹ್ಮಪೂರ ಠಾಣೆ ಪೊಲೀಸರು ಹಾಸ್ಟೆಲ್‌ ವಾರ್ಡನ್‌ ಆಗಿರುವ ತಾಯಿ ಹಾಗೂ ಕೆಎಎಸ್‌ ಅಧಿಕಾರಿ ರಾಮನಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ: ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ, ಅಳಿಯನನ್ನೇ ಕೊಲೆಗೈದ ಪಾಪಿ ಮಾವ

ಆಗಿದ್ದೇನು?: ಕಲಬುರಗಿ ವಾಸಿಯಾಗಿದ್ದ ಬಾಲಕಿ ತಂದೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಬಳಿಕ ಬಾಲಕಿ ತಾಯಿ ಸ್ವಂತ ಊರಾದ ಬೆಳಗಾವಿ ಜಿಲ್ಲೆಯಲ್ಲಿ ನೆಲೆಸಿದ್ದರು. ಬೈಲಹೊಂಗಲದ ಹಾಸ್ಟೆಲ್‌ವೊಂದರಲ್ಲಿ ವಾರ್ಡನ್‌ ಆಗಿದ್ದ ಆಕೆ ತನ್ನ ಇಲಾಖೆಯ ಕೆಎಎಸ್‌ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಹಲವು ಬಾರಿ ಇವರಿಬ್ಬರು ಮಗಳ ಮುಂದೆಯೇ ಖಾಸಗಿ ಕ್ಷಣ ಕಳೆದಿದ್ದರು. ಈ ವಿಚಾರವನ್ನು ಯಾರ ಬಳಿಯೂ ಹೇಳದಂತೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ, ಈಕೆಯನ್ನು ಸಾಯಿಸಿ ಬಿಡುತ್ತೇನೆ ಎಂದೂ ಹಲವು ಬಾರಿ ತಾಯಿ ಹೇಳಿದ್ದಾಗಿಯೂ ಬಾಲಕಿ ದೂರಿದ್ದಾಳೆ.

35 ವರ್ಷ ಸಹಬಾಳ್ವೆ ನಡೆಸಿದ ಪತ್ನಿಯನ್ನು ಇಳಿವಯಸ್ಸಿನಲ್ಲಿ ಕೊಂದ ಪತಿ.. ಕಾರಣ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತಿರಿ

ಅವರಿಬ್ಬರು ಆಕ್ಷೇಪಾರ್ಹ ಭಂಗಿಯಲ್ಲಿದ್ದುದನ್ನು ನಾನು ನೋಡಿದ್ದೇನೆ. ಹೀಗಾಗಿ ನನ್ನ ಮೇಲೆ ಬಿಸಿನೀರೆರಚಿ ದೈಹಿಕ ಹಿಂಸೆ ನೀಡಿದ್ದಾಳೆ. ಗಾಯವಾದರೂ ಆಸ್ಪತ್ರೆಗೆ ಸೇರಿಸಿಲ್ಲವೆಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

Follow Us:
Download App:
  • android
  • ios