Asianet Suvarna News Asianet Suvarna News

ಬೆಳಗಾವಿ: ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ, ಅಳಿಯನನ್ನೇ ಕೊಲೆಗೈದ ಪಾಪಿ ಮಾವ

ನೀಲಪ್ಪ ರೋಗನ್ನವರ್ ಕೊಲೆಯಾದ ದುರ್ದೈವಿಯಾಗಿದ್ದಾನೆ. ಸ್ವಂತ ಅಳಿಯನನ್ನೇ ಕತ್ತು ಹಿಸುಕಿ ಪಾಪಿ ಮಾವ ಕೊಲೆಗೈದಿದ್ದಾನೆ. ಫಕೀರಪ್ಪ ಮನಿಹಾಳ ಸ್ವಂತ ಅಳಿಯನನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. 

28 Years Old Young Man Killed at Ramdurg in Belagavi grg
Author
First Published Dec 30, 2023, 9:19 AM IST

ಬೆಳಗಾವಿ(ಡಿ.30): ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ಅಳಿಯನನ್ನ ಮಾವನೇ ಕೊಲೆಗೈದ ಘಟನೆ  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ನೀಲಪ್ಪ ರೋಗನ್ನವರ್(28) ಕೊಲೆಯಾದ ದುರ್ದೈವಿಯಾಗಿದ್ದಾನೆ. ಸ್ವಂತ ಅಳಿಯನನ್ನೇ ಕತ್ತು ಹಿಸುಕಿ ಪಾಪಿ ಮಾವ ಕೊಲೆಗೈದಿದ್ದಾನೆ. ಫಕೀರಪ್ಪ ಮನಿಹಾಳ ಸ್ವಂತ ಅಳಿಯನನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. 

ಬೆಂಗಳೂರು ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಆರೋಪಿ ಫಕೀರಪ್ಪ ಅಳಿಯ ನೀಲಪ್ಪನನ್ನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದನು. ಕೊಲೆ ಮಾಡಿ ಬೈಕ್ ಅಪಘಾತ ಎಂಬಂತೆ ಬಿಂಬಿಸಲು ಹೋಗಿದ್ದ ಆರೋಪಿ ಫಕೀರಪ್ಪ.  ಇದು ಅಪಘಾತ ಅಲ್ಲ, ಕೊಲೆ ಎಂದು ಗೊತ್ತಾಗ್ತಿದ್ದಂತೆ ಫಕೀರಪ್ಪನನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios