Asianet Suvarna News Asianet Suvarna News

35 ವರ್ಷ ಸಹಬಾಳ್ವೆ ನಡೆಸಿದ ಪತ್ನಿಯನ್ನು ಇಳಿವಯಸ್ಸಿನಲ್ಲಿ ಕೊಂದ ಪತಿ.. ಕಾರಣ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತಿರಿ

ಇವರದ್ದು 35 ವರ್ಷಗಳ ದಾಂಪತ್ಯ. ಮಕ್ಕಳು, ಮೊಮ್ಮಕ್ಕಳನ್ನೂ ಸಹ ಕಂಡಿದ್ದಾರೆ. ಆದ್ರೆ ಕಳೆದ ರಾತ್ರಿ ಪತ್ನಿ ಭೀಕರವಾಗಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ್ದು ನಾನೇ ಅಂತ ಪತಿಯೇ ಸ್ವತಃ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಈ ಇಳಿವಯಸ್ಸಿನಲ್ಲಿ ಇದ್ಯಾಕಪ್ಪಾ ಪತ್ನಿನ ಕೊಲೆ ಮಾಡಿದೆ ? ಅಂತ ಪೊಲೀಸರು ಕೇಳಿದಾಗ, ಈ ಅಜ್ಜ ಕೊಟ್ಟ ಉತ್ತರ ಕೇಳಿದ್ರೆ ನೀವೂ ಶಾಕ್ ಆಗ್ತಿರಾ ? 

Suspicion of illicit relationship Husband killed his wife at kalaburagi rav
Author
First Published Dec 23, 2023, 1:40 PM IST

ಕಲಬುರಗಿ (ಡಿ.23): ಇವರದ್ದು 35 ವರ್ಷಗಳ ದಾಂಪತ್ಯ. ಮಕ್ಕಳು, ಮೊಮ್ಮಕ್ಕಳನ್ನೂ ಸಹ ಕಂಡಿದ್ದಾರೆ. ಆದ್ರೆ ಕಳೆದ ರಾತ್ರಿ ಪತ್ನಿ ಭೀಕರವಾಗಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ್ದು ನಾನೇ ಅಂತ ಪತಿಯೇ ಸ್ವತಃ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಈ ಇಳಿವಯಸ್ಸಿನಲ್ಲಿ ಇದ್ಯಾಕಪ್ಪಾ ಪತ್ನಿನ ಕೊಲೆ ಮಾಡಿದೆ ? ಅಂತ ಪೊಲೀಸರು ಕೇಳಿದಾಗ, ಈ ಅಜ್ಜ ಕೊಟ್ಟ ಉತ್ತರ ಕೇಳಿದ್ರೆ ನೀವೂ ಶಾಕ್ ಆಗ್ತಿರಾ ? 

ಹೌದು ! ಕಲಬುರಗಿ ಜಿಲ್ಲೆ ಚಿಂಚೊಳಿ ತಾಲೂಕಿನ ಅಲ್ಲಾಪುರ ಎಂಬ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದ ಹೈಲೈಟ್ ಇದು. ಅಲ್ಲಾಪೂರ ಗ್ರಾಮದ ಕಾಶಮ್ಮ ಎನ್ನುವ 60 ವರ್ಷದ ಮಹಿಳೆಯೇ ಕೊಲೆಯಾದ ದುರ್ದೈವಿ. ಈ ಮಹಿಳೆಯನ್ನು ಕೊಂದಿದ್ದು ಬೇರಾರೂ ಅಲ್ಲ ಈಕೆಯೊಂದಿಗೆ 30-35 ವರ್ಷ ಸಂಸಾರ ಮಾಡಿರುವ ಪತಿಯೇ ಇಳಿವಯಸ್ಸಿನಲ್ಲಿ ಈ ಭೀಕರ ಕೃತ್ಯ ನಡೆಸಿದ್ದಾನೆ. 

ಹಿಜಾಬ್ ನಿಷೇಧ ವಾಪಸ್ ; ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮಂಡ್ಯದ 'ಹಿಜಾಬ್ ಲೇಡಿ' ಖ್ಯಾತಿಯ ಮಸ್ಕಾನ್

ಮಾರುತಿ ಈಳಿಗೇರ್ ಎನ್ನುವಾತನೇ ಕೊಲೆ ಮಾಡಿರುವ ಪಾಪಿ ಪತಿ. ಪತ್ನಿಯನ್ನ ಕೊಂದು ಸೀದಾ ರಟಕಲ್ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.‌ ಅಷ್ಟಕ್ಕೂ ಪತ್ನಿಯನ್ನ ಕೊಲ್ಲೋಕೆ ಕಾರಣ ಎನು ಅಂತ ಕೇಳಿದ್ರೆ ನೀವೂ ಶಾಕ್ ಆಗ್ತಿರಿ. ಯಾಕೆಂದ್ರೆ ಈ ಇಳಿ ವಯಸ್ಸಿನಲ್ಲೂ ಈತ ಪತ್ನಿಯ ಮೇಲೆ‌ ಅನುಮಾನ ಪಡುತ್ತಿದ್ದನಂತೆ. ಈ ಕಾರಣಕ್ಕಾಗಿಯೇ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡ್ತಿದ್ದನಂತೆ.‌ ನಿನ್ನೆ ರಾತ್ರಿಯೂ ಕುಡಿದು ಬಂದು ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. 

ಇನ್ನು ಮಾರುತಿ ಈಳಿಗೇರ್ ಹಾಗೂ ಕೊಲೆಯಾಗಿರೋ ಕಾಶಮ್ಮಗೆ ಮೂರು ಜನ ಮಕ್ಕಳು. ಮಗಳು ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿದ್ದರೇ. ಇತ್ತ ಇಬ್ಬರು ಪುತ್ರರು ತಂದೆಯ ಉಪಟಳ ತಾಳದೇ ಮನೆ ಬಿಟ್ಟು ಬೇರೆ ಕಡೆ ಜೀವನ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಕುಡಿಯೋದು ಜಗಳ ಮಾಡೋದು ಈತನ ಕಾಯಕವಾಗಿತ್ತು. ಹಾಗಾಗಿಯೇ ಮಕ್ಕಳೆಲ್ಲಾ ಈತನಿಂದ ದೂರವಾಗಿದ್ದಾರೆ. ಇನ್ನು ಕಟ್ಟಿಕೊಂಡ ಗಂಡ 30-35 ವರ್ಷ ಬಾಳ್ವೆ ಮಾಡಿದಿನಿ. ಇನ್ನೊಂದಿಷ್ಟು ವರ್ಷ ಜೊತೆಗಿದ್ದು ಶಿವನ ಪಾದ ಸೇರೋದೆ ಎಂದುಕೊಂಡು ಜೊತೆಗಿದ್ದ ಪತ್ನಿಯನ್ನು ಈ ಕಿರಾತಕ ಕೊಂದೇ ಬಿಟ್ಟಿದ್ದಾನೆ. ಘಟನಾ ಸ್ಥಳಕ್ಕೆ ರಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕೆಆರ್‌ಎಸ್ ಹಿನ್ನೀರಿನಲ್ಲಿ ಇಬ್ಬರ ಮೃತದೇಹ ಪತ್ತೆ; ಹತ್ಯೆಗೈದು ನದಿಗೆಸೆದಿರೋ ಶಂಕೆ!

ಕೊಲೆ ಮಾಡಿ ಸರೆಂಡರ್ ಆದ ಪತಿ ಮಾರುತಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಇಂತಹ ಇಳಿವಯಸ್ಸಿನಲ್ಲೂ ಅನುಮಾನದ ಪಿಶಾಚಿ ಮೈಗೇರಿಸಿಕೊಂಡು 35 ವರ್ಷ ಜೊತೆಗೆ ಬಾಳ್ವೆ ಮಾಡಿದ ಪತ್ನಿಯನ್ನೇ ಕೊಂದು ಹಾಕಿದ್ದಕ್ಕೆ ಗ್ರಾಮಸ್ಥರು ಮಮ್ಮಲ ಮರುಗುವಂತಾಗಿದೆ. ಮಕ್ಕಳೆಲ್ಲಾ ದೂರವಾದ್ರೂ ಹೇಗೆ ಇದ್ರೂ ಗಂಡ ಅಂತ ಜೊತೆಗಿದ್ದ ತಪ್ಪಿಗೆ ಕಾಶಮ್ಮ ಕೊಲೆಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

Follow Us:
Download App:
  • android
  • ios