ಹುಡುಗಿಯರಿಗೆ ಅಶ್ಲೀಲ ಮೇಸೆಜ್ ಆರೋಪ: ಸಹೋದ್ಯೋಗಿಗೆ ಚೂರಿ‌ ಇರಿದಿದ್ದ ನಾಲ್ವರ ಬಂಧನ!

*ಹುಡುಗಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದವನಿಗೆ ಚೂರಿ ಇರಿದಿದ್ದ ಸಹೋದ್ಯೋಗಿಗಳು‌
*ಚೂರಿ ಇರಿದಿದ್ದ ಮೋಹನ್, ರಾಕೇಶ್ , ವರುಣ್, ಸೂರಜ್ ನಾಲ್ಕು ಆರೋಪಿಗಳ ಬಂಧನ
*ನನ್ನ ಮೇಲಿನ ದ್ವೇಷಕ್ಕೆ ಚೂರಿ ಇರಿದ್ದಾರೆ ಎಂದು ದೂರು ನೀಡಿದ್ದ  ಸುರೇಂದ್ರ

Amazon Warehouse employee stabbed by Coworkers for allegedly sending vulgar messages to girls mnj

ಬೆಂಗಳೂರು (ಫೆ. 05):  ಹುಡುಗಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದವನಿಗೆ ಚೂರಿ ಇರಿದಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.  ಅಮೆಜಾನ್ ವೇರ್ ಹೌಸ್ (Amazon WareHouse) ನಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರನಿಗೆ ಸಹೋದ್ಯೋಗಿಗಳು‌ ಚೂರಿ ಇರಿದಿದ್ದರು. ಮೋಹನ್, ರಾಕೇಶ್ , ವರುಣ್, ಸೂರಜ್ ನಾಲ್ಕು ಬಂಧಿತ ಆರೋಪಿಗಳು.  ರಾತ್ರಿ 6 ಜನ ಬಂದು ಚೂರಿ ಇರಿದಿದ್ದರು ಎಂದು  ಸುರೇಂದ್ರ ದೂರು ನೀಡಿದ್ದರು. ತಮ್ಮ ಮೇಲಿನ ದ್ವೇಷಕ್ಕೆ ಚೂರಿ ಇರಿದ್ದಾರೆ ಎಂದು ಸುರೇಂದ್ರ ಆರೋಪಿಸಿದ್ದರು. 

ಸುರೇಂದ್ರ ಕಂಪನಿಯಿಂದ ಹೊರ ಬರುತ್ತಿದ್ದಂತೆ ಹೊರಗಿನಿಂದ ಜನ ಕರೆಸಿ  ಸಹೋದ್ಯೋಗಿಗಳು ಚೂರಿ ಇರಿದಿದ್ದರು ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಬಾಗಲೂರು ಪೊಲೀಸರು ನಾಲ್ವರು ಆರೋಪಿಗಳ ಬಂಧಿಸಿದ್ದು ಉಳಿದವರಿಗಾಗಿ ಶೋಧ ನಡೆಸಿದ್ದಾರೆ. 

ಆದರೆ ಆರೋಪಿಗಳ ವಿಚಾರಣೆ ವೇಳೆ ಸುರೇಂದ್ರ ಬಾರ್ ಕೋಡಲ್ಲಿ (Bar Code) ರಿಮಾರ್ಕ್ಸ್ ಬರೆಯುವ ಜಾಗದಲ್ಲಿ ಹುಡುಗಿಯರಿಗೆ  ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.  ಸಾಕಷ್ಟು ಜನ ಹುಡುಗಿಯರ ಇದರ ಬಗ್ಗೆ ಅಮೆಜಾನ್ ವೇರ್ ಹೌಸಿನ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೇ ವಿಚಾರಕ್ಕೆ ಅತನನ್ನ ಕೆಲಸದಿಂದ ಅಧಿಕಾರಿಗಳು ತೆಗೆದು ಹಾಕಿದ್ದರು ಎಂದು ಆರೋಪಿಗಳು ಹೇಳಿದ್ದಾರೆ.  

ಇದನ್ನೂ ಓದಿ:  4 ವರ್ಷಗಳಿಂದ ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆ

ಬಾಲಕಿ ರೇಪ್ ಮಾಡಿ ವಿಡಿಯೋ ಹರಿಬಿಟ್ಟ ದುರುಳರ ಬಂಧನ!: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು(College Students) ಬೆದರಿಸಿ ಅತ್ಯಾಚಾರವೆಸಗಿ ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ ಅಪ್‌ಲೋಡ್‌ ಮಾಡಿದ್ದ ಆರೋಪದ ಮೇರೆಗೆ ಐವರನ್ನು ಶಿವಮೊಗ್ಗದ ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿ ಜ.15ರಂದು ಊರಿಗೆ ತೆರಳಲು ಬಸ್‌ ನಿಲ್ದಾಣದಲ್ಲಿ ನಿಂತಿದ್ದಳು. ಆಕೆಯ ಮನೆಗೆ ಕೆಲಸಕ್ಕೆಂದು ಹೋಗಿ ಪರಿಚಯವಾಗಿದ್ದ ಸಂತೋಷ್‌ ಹಾಗೂ ಸುನಿಲ್‌ ಎಂಬುವರು ಬಾಲಕಿಯನ್ನು ಮಾತನಾಡಿಸಿದ್ದರು. ತಾವೂ ಊರಿಗೆ ಹೋಗುತ್ತಿರುವುದಾಗಿ, ಕರೆದುಕೊಂಡು ಹೋಗುವಾಗಿ ಕಾರಿಗೆ ಹತ್ತಿಸಿಕೊಂಡಿದ್ದರು.

ಬಳಿಕ ಬೆದರಿಸಿ(Threat) ಅತ್ಯಾಚಾರವೆಸಗಿ ವಿಡಿಯೋ(Video) ಮಾಡಿಕೊಂಡಿದ್ದರು. ಕೆಲ ದಿನ ಬಳಿಕ ಬಾಲಕಿಯನ್ನು(Minor) ಲೈಂಗಿಕ ಕ್ರಿಯೆಗೆ ಕರೆದಿದ್ದರು. ಆಕೆ ಬರಲು ನಿರಾಕರಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದರು. ವಿಡಿಯೋ ಗಮನಿಸಿದ ಪೊಲೀಸರು(Police) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಸಂತ್ರಸ್ತೆಯ ಹೇಳಿಕೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ, ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಪುತ್ರ

ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದು, ಬೆದರಿಸಿ ಅತ್ಯಾಚಾರ ನಡೆಸಿ, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಆರೋಪದ ಮೇಲೆ ಐವರು ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಜ. 15ರಂದು ಬಾಲಕಿ ಊರಿಗೆ ತೆರಳಲು ಬಸ್‌ ನಿಲ್ದಾಣದ ಬಳಿ ನಿಂತಿರುವಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆ ಬಂದು ಪರಿಚಯವಾಗಿದ್ದ ಸಂತೋಷ್‌ ಮತ್ತು ಸುನೀಲ್‌ ಎಂಬಿಬ್ಬರು ಬಾಲಕಿಯನ್ನು ಮಾತನಾಡಿಸಿ, ತಾವೂ ಕೂಡ ನಿಮ್ಮ ಊರಿಗೇ ಹೋಗುತ್ತಿದ್ದು, ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ, Pರಿನಲ್ಲಿ ಕರೆದೊಯ್ದು ದಾರಿಯಲ್ಲಿ ಬೆದರಿಸಿ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಾಲಕಿಯನ್ನು ಬೆದರಿಸಿ ಮತ್ತೆ ಕರೆದಿದ್ದಾರೆ. ಬಾಲಕಿ ಬರಲು ನಿರಾಕರಿಸಿದಾಗ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪಲೋಡ್‌ ಮಾಡಿದ್ದಾರೆ. ಅಪ್ರಾಪ್ತೆಯ ವಿಡಿಯೋ ಹರಿದಾಡುತ್ತಿರುವ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ನಂತರ ಸಂತ್ರಸ್ತೆ ಹೇಳಿಕೆ ಮೇಲೆ ಮತ್ತೊಂದು ದೂರು ದಾಖಲಿಸಿಕೊಂಡು ದುಷ್ಕೃತ್ಯವೆಸಗಿದ ವಾರಂಬಳ್ಳಿಯ ಸುನೀಲ್‌ ಹಾಗೂ ಆಯನೂರು ಗ್ರಾಮದ ಸಂತೋಷ ಎಂಬ ಪ್ರಮುಖ ಆರೋಪಿಗಳ ಜತೆ ಇವರಿಗೆ ಸಹಕಾರ ನೀಡಿದ ಆರೋಪದಡಿ ವಾರಂಬಳ್ಳಿ ಗ್ರಾಮದ ಸಚಿನ್‌, ಸುಬ್ಬ, ರಾಘು ಎಂಬುವವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ. 

Latest Videos
Follow Us:
Download App:
  • android
  • ios