Asianet Suvarna News Asianet Suvarna News

Rape: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ, ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಪುತ್ರ

*  ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ; ತಾಯಿಯನ್ನೇ ಅತ್ಯಾರಗೈದ ಪುತ್ರ
* ಹೆತ್ತ ತಾಯಿಯ ಮೇಲೆ ಕಾಮ ಪಿಶಾಚಿಯ ಕೃತ್ಯ
* ಅಸ್ವಸ್ಥಗೊಂಡಿರುವ ತಾಯಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ
*   ಆರೋಪಿಯ ಪತ್ನಿ ಸೀಮಂತಕ್ಕೆ ತೆರಲಿದ್ದಾಳೆ

Married man rapes mother twice after gagging her in sleep Puttur Dakshina Kannada  mah
Author
Bengaluru, First Published Jan 14, 2022, 7:45 PM IST

ಪುತ್ತೂರು(ಜ. 14) ಈ ಕಲಿಯುಗದಲ್ಲಿ ಎಂತೆಂಥ ಘನಘೋರ ಸುದ್ದಿಗಳನ್ನು ಬರೆಯಬೇಕಾದ ಪರಿಸ್ಥಿತಿ ಇದೆ. ಹೆತ್ತ
ತಾಯಿಯ (Mother) ಮೇಲೆ ಅತ್ಯಾಚಾರ (Rape)ಎಸಗಿದ ಪುತ್ರ.. ಪುತ್ತೂರಿನಿಂದ (Puttur) ಅಂಥದ್ದೊಂದು ಘಟನೆ ವರದಿಯಾಗಿದೆ.

ಹೆತ್ತ ತಾಯಿಯನ್ನೇ ಅತ್ಯಾಚಾರ ನಡೆಸಿದ ಪೈಶಾಚಿಕ ಪ್ರಕರಣವೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿದ್ದು, ದುಷ್ಕೃತ್ಯ ಎಸಗಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು (Police) ಬಂಧಿಸಿದ್ದಾಾರೆ. ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ತಾಯಿ ಪುತ್ತೂರು ಸರ್ಕಾರಿ ಆಸ್ಪತ್ರೆೆಯಲ್ಲಿ (Hospital) ಚಿಕಿತ್ಸೆೆ ಪಡೆಯುತ್ತಿದ್ದಾರೆ.

ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ 33 ವರ್ಷದ ವ್ಯಕ್ತಿ  ಆರೋಪಿ. ಜ .12 ರ ತಡ ರಾತ್ರಿ ಘಟನೆ ನಡೆದಿದೆ. ತಡ ರಾತ್ರಿ ಹಾಗೂ ಮರುದಿನ ಬೆಳಗ್ಗೆೆ ಎರಡು ಬಾರಿ, ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಾಣಿಯಂತೆ ಎರಗಿದ್ದಾನೆ.

ತಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.58 ವರ್ಷದ ಸಂತ್ರಸ್ತ ಈ ಮಹಿಳೆಯು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆೆ ದೂರು ನೀಡಿದ್ದು, ಮಗನ ವಿರುದ್ಧ ಪ್ರಕರಣ ಐಪಿಸಿ ಸೆಕ್ಷನ್ 376(2), 506 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸಂಪ್ಯ
ಠಾಣೆ ಪೊಲೀಸರು ವಶಕ್ಕೆೆ ವಿಚಾರಣೆ ನಡೆಸುತ್ತಿದ್ದಾರೆ.

ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು!

ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಕೃತ್ಯ ನಡೆದ ರಾತ್ರಿ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ಕೋಣೆಗೆ ಆರೋಪಿಯು ತೆರಳಿ ಅತ್ಯಾಾಚಾರಗೈದಿದ್ದಾನೆ. ಈ ಸಂದರ್ಭ ತಾಯಿಯೂ ಕಿರುಚಾಡಿ ತಳ್ಳಿ ಹಾಕಲು ಯತ್ನಿಸಿದ್ದಾಾರೆ. ಆ ವೇಳೆ ಆರೋಪಿಯು ತನ್ನ ತಾಯಿಯ ಬಾಯಿಯನ್ನು, ಬಟ್ಟೆೆಯಿಂದ ಒತ್ತಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ್ದಾನೆ ಹಾಗೂ ತಾಯಿ ಎಷ್ಟೇ ಬಲಯುತವಾಗಿ ಪ್ರತಿಭಟಿಸಿದರೂ ಬಲವಂತವಾಗಿ ಅತ್ಯಾಾಚಾರ ಮಾಡಿದ್ದಾನೆ.

ಬಳಿಕ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾಾನೆ. ಇದಾದ ಬಳಕ ಜ.13ರಂದು ಬೆಳಗ್ಗೆೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಯು ಬಲವಂತದಿಂದ ಅವರನ್ನು ಮನೆಯ ಹಾಲ್‌ಗೆ ಎಳೆದುಕೊಂಡು ಹೋಗಿ ಅತ್ಯಾಾಚಾರ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.

ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆೆಗೆ ಬಂದಾಗ ವೈದ್ಯರು ಪರೀಕ್ಷಿಸಿ, ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾಾರೆ. ಬಳಿಕ ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾ ಆರೋಪಿಯು ವಿವಾಹಿತನಾಗಿದ್ದು, ಆತನ ಪತ್ನಿಯು ತನ್ನ ಸೀಮಂತ ಮುಗಿಸಿಕೊಂಡು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ.

ರಾಜಸ್ಥಾನದ ಪ್ರಕರಣ: ಅಪ್ರಾಪ್ತ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ (Girl) ಮೇಲೆ ಭೀಕರ ಸರಣಿ ಅತ್ಯಾಚಾರ (Gang Rape) ನಡೆಸಿ, ಆಕೆಗೆ ಗುಪ್ತಾಂಗಗಳಿಗೆ ಹಾನಿ ಮಾಡಿರುವ ಭೀಕರ ಘಟನೆಯೊಂದು ರಾಜಸ್ಥಾನದ (Jaipur)ಅಲ್ವಾರ್‌ ನಿಂದ ವರದಿಯಾಗಿತ್ತು.  ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡ ನಡೆಸಿದ್ದರೆ, ಸಿಎಂ ಅಶೋಕ್‌ ಗೆಹ್ಲೋಟ್‌ ಜಿಲ್ಲಾಧಿಕಾರಿಗಳಿಂದ ಘಟನೆ ಕುರಿತು ವರದಿ ಕೇಳಿದ್ದಾರೆ

ಏನಾಯ್ತು?: ಬುಧವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದ 15-16 ವರ್ಷದ ಬಾಲಕಿಯನ್ನು ನಾಲ್ವರ ಗುಂಪೊಂದು ಸರಣಿ ಅತ್ಯಾಚಾರ ನಡೆಸಿ ಬಳಿಕ ರಾತ್ರಿ ವೇಳೆಗೆ ಫ್ಲೈಓವರ್‌ ಮೇಲೆ ಇಳಿಸಿ ಹೋಗಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಗಮನಿಸಿದಾಗ ಬಾಲಕಿ ರಕ್ತದ ಮಡುವಿನಲ್ಲಿ ನೋವಿನಿಂದ ಚೀರುತ್ತಾ ಮಲಗಿದ್ದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಆಕೆಯ ಗುಪ್ತಾಂಗಕ್ಕೆ ಭಾರೀ ಘಾಸಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಇದೀಗ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Follow Us:
Download App:
  • android
  • ios