Shivamogga Rape Case: 4 ವರ್ಷಗಳಿಂದ ಮಗಳ ಮೇಲೆಯೇ ರೇಪ್ ಮಾಡಿದ ಕಾಮುಕ ತಂದೆ
* ಶಿವಮೊಗ್ಗ ತಾಲೂಕಿನ ಗೊಂವಿದಪುರ ಗ್ರಾಮದಲ್ಲಿ ನಡೆದ ಘಟನೆ
* ಮನೆಯಲ್ಲಿಯೇ ತನಗೆ ರಕ್ಷಣೆ ಇಲ್ಲದೇ ಸಂಕಟ ಪಟ್ಟಿದ್ದ ಅಪ್ರಾಪ್ತ ಬಾಲಕಿ
* ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಎಫ್ಐಆರ್
ಶಿವಮೊಗ್ಗ(ಫೆ.02): ತಂದೆ-ಮಗಳ ಸಂಬಂಧ ಬೆಲೆ ಕಟ್ಟಲಾಗದ ಸಂಬಂಧ. ಆದರೆ ಇಲ್ಲೊಬ್ಬ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರವೆಸಗಿದ(Rape) ಘಟನೆ ಶಿವಮೊಗ್ಗ(Shivamogga) ತಾಲೂಕಿನ ಗೊಂವಿದಪುರ ಗ್ರಾಮದಲ್ಲಿ ನಡೆದಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತನ್ನ ಮಗಳ ಮೇಲೆಯೇ ಕಾಮುಕ ತಂದೆ ಅತ್ಯಾಚಾರ ಎಸಗಿದ್ದನು ಎಂದು ತಿಳಿದು ಬಂದಿದೆ.
ಇಂತಹ ಅಮಾನವೀಯ ಕೃತ್ಯವೆಸಗಿದ ದುಷ್ಟ ತಂದೆಯ ಹೆಸರು ಗೋಣಪ್ಪ (45). ಈತ ಮೂಲತಃ ಹಾವೇರಿ(Haveri) ಜಿಲ್ಲೆಯ ಹಿರೆಕೇರೂರು ತಾಲೂಕಿನ ಲಿಂಗಾಪುರ ಗ್ರಾಮದವನಾಗಿದ್ದಾನೆ. ಶುಂಠಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ಒಬ್ಬಳು ಮಗಳು, ಮತ್ತಿಬ್ಬರು ಗಂಡು ಮಕ್ಕಳಿವೆ.
Shivamogga Crime ಬಾಲಕಿ ರೇಪ್ ಮಾಡಿ ವಿಡಿಯೋ ಹರಿಬಿಟ್ಟ ದುರುಳರ ಬಂಧನ!
ಹೆತ್ತಮ್ಮನಿಗೆ ಹೇಳಲಾಗದೇ ತಂದೆಯ ಅಸಹ್ಯಕರ ವರ್ತನೆಯನ್ನು ಮಗಳು(Girl) ವರ್ಷಗಳ ಕಾಲ ಸಹಿಸಿಕೊಂಡಿದ್ದಳು. ಮನೆಯಲ್ಲಿಯೇ ತನಗೆ ರಕ್ಷಣೆ ಇಲ್ಲದೇ ಅಪ್ರಾಪ್ತ ಬಾಲಕಿ ಸಂಕಟ ಪಟ್ಟಿದ್ದಳು. ಕೊನೆಗೊಂದು ದಿನ ತಾಯಿಗೆ ವಿಷಯ ತಿಳಿದರೂ ಎನೂ ಮಾಡಲಾಗದೇ ಅಸಹಾಯಕ ಸ್ಥಿತಿ ಇತ್ತು. ಗಂಡನ ದುವರ್ತನೆಯನ್ನು ತಡೆಗಟ್ಟಲಾಗದೇ ಮಗಳನ್ನು ಸಂಕಷ್ಟದಿಂದ ಪಾರು ಮಾಡಲಾಗದೇ ತಾಯಿ ಕಣ್ಣೀರು ಹೇಳ ತೀರದಾಗಿತ್ತು.
ತಂದೆಯಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಗಳನ್ನು ಪಾರು ಮಾಡಲು ತಾಯಿ ಪ್ಲಾನ್‌ವೊಂದನ್ನು ಮಾಡಿದ್ದಳು. ಮಗಳಿಗೆ ಗಂಡೊಂದನ್ನು ನೋಡಿ ಕಳೆದ 15 ದಿನಗಳ ಹಿಂದ ಎಂಗೇಜ್‌ಮೆಂಟ್ ಮಾಡಿದ್ದಳು. ಈಗಷ್ಟೇ ಮಗಳ ವಯಸ್ಸು 18 ತುಂಬಲಿರುವುದರಿಂದ ಮದುವೆಗೆ ಸಿದ್ಧತೆ ನಡೆಸಿದ್ದಳು. ಯಾವಾಗ ಎಂಗೇಜ್ ಮೆಂಟ್ ಆಯ್ತೋ ಪಾಪಿ ತಂದೆ ಕೆರಳಿದ್ದ, ಅತನನ್ನು ಮದುವೆಯಾದರೆ ನಿನ್ನನ್ನು ಬಿಡೋಲ್ಲ ಎಂದು ಮಗಳಿಗೆ ಹೆದರಿಸಿದ್ದನಂತೆ. ತಂದೆಯ ದುಷ್ಟತನದ ವರ್ತನೆಯಿಂದ ಮಗಳು ಕಣ್ಣೀರಿಟ್ಟಿದ್ದಳು. ಮಗಳನ್ನು ಬಿಡೊಲ್ಲ ಎಂದು ಗೊತ್ತಾದ ತಾಯಿ ಕೊನೆಗೊಂದು ಕಠಿಣ ನಿರ್ಧಾರ ಕೈಗೊಂಡಿದ್ದಳು. ಮಗಳೊಂದಿಗೆ ತನ್ನಿಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತವರು ಮನೆ ಶಿವಮೊಗ್ಗಕ್ಕೆ ಬಂದಿದ್ದಳು. ಆದರೆ ಹೆತ್ತಮ್ಮನ ಮನೆಗೆ ಹೋಗದ ತಾಯಿ ಮಕ್ಕಳೊಂದಿಗೆ ಅತ್ಮಹತ್ಯೆ(Suicide) ಮಾಡಿಕೊಳ್ಳಲು ನಿರ್ದರಿಸಿ ಬಿಟ್ಟಿದ್ದಳು.
ಸಾಯುವ ಮುನ್ನ ತನ್ನಕ್ಕ ಚಂದ್ರಮ್ಮಳ ಮೊಬೈಲ್‌ಗೆ ಕರೆ ಮಾಡಿ ಹೆತ್ತಪ್ಪನ ಅತ್ಯಾಚಾರದ ಸಂಪೂರ್ಣ ಕಥೆ ವಿವರಿಸಿದ್ದಳು. ತಮಗೆ ಇದರಿಂದ ಬಿಡುಗಡೆಯಾಗಲು ಸಾವೇ ಗತಿ ಎಂದು ತನ್ನ ನಿರ್ಧಾರ ತಿಳಿಸಿದ್ದಳು. ಅಕ್ಕ ಚಂದ್ರಮ್ಮ ತಂಗಿಯನ್ನ ಸಂತೈಯಿಸಿ ಈ ನಿರ್ಧಾರ ಕೈ ಬಿಡುವಂತೆ ಮಾಡಿದ್ದಳು. ಅಕೆಯ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಳಂತೆ.
Rape: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ, ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಪುತ್ರ
ಶಿವಮೊಗ್ಗ ತಾಲೂಕಿನ ಗೊಂವಿದಪುರ ಗ್ರಾಮದ ತವರು ಮನೆಯಲ್ಲಿ ಪಾಪಿ ತಂದೆಯನ್ನು ಹೆಡೆಮುರಿ ಕಟ್ಟುವ ಪ್ಲಾನ್ ನಡೆದಿತ್ತು. ಅಂದುಕೊಂಡಂತೆ ಹೆಂಡತಿ ಮಕ್ಕಳು ಕಾಣುತ್ತಿಲ್ಲ ಎಂದು ಹೆಂಡತಿಯ ಅಕ್ಕನಿಗೆ ಗೋಣಪ್ಪ ಕರೆ ಮಾಡಿದ್ದ, ಊರಿಗೆ ಬಂದು ಕರೆಕೊಂಡು ಹೋಗುವಂತೆ ಅಕ್ಕ ತಿಳಿಸಿದ್ದಳು. ಪತ್ನಿಯ ತವರಿಗೆ ಬಂದ ಪಾಪಿ ಗಂಡ ಗೋಣಪ್ಪನಿಗೆ ತವರಿನ ಗ್ರಾಮಸ್ಥರು ಧರ್ಮದೇಟು ನೀಡಿ ಮನೆಯಲ್ಲಿ ಕೂಡಿ ಹಾಕಿ ಪೋಲಿಸರ(Police) ವಶಕ್ಕೊಪ್ಪಿಸಿದ್ದರು.
ಪಾಪಿ ತಂದೆಯ ವಿರುದ್ಧ ಇದೀಗ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್ಐಆರ್(FIR) ದಾಖಲಾಗಿದೆ. ಕಾಮುಕನ್ನ ಜೈಲಿಗೆ ಕಳುಹಿಸಲು ಪೋಲಿಸರು ಮುಂದಾಗಿದ್ದಾರೆ.
8 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ
ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ಎಂಟು ವರ್ಷದ ಬಾಲಕಿಯ(Girl) ಮೇಲೆ ನೆರೆಯ ಮನೆಯ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ(Sexual Harassment) ಎಸಗಿರುವ ಅಮಾನವೀಯ ಘಟನೆ ಜ.23 ರಂದು ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲಿಸರು(Police), ಲಗ್ಗೆರೆ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್(36) ಎಂಬಾತನನ್ನು ಬಂಧಿಸಿದ್ದರು(Arrest).