Chikkamagaluru ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ ಶಿವಮೊಗ್ಗದಲ್ಲಿ ಬಂಧನ
- ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದ ವಿಚಾರಣಾಧೀನ ಕೈದಿ
- ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿದ್ದ ಕಡೂರು ಮೂಲದ ಧನರಾಜ್
- ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಬಂಧನ
- ಕಡೂರು ಪಿಎಸ್ ಐ ರಮ್ಯಾ ನೇತೃತ್ವದಲ್ಲಿ ಜೈಲು ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.28): ಚಿಕಿತ್ಸೆಗೆಂದು ದಾಖಲಾಗಿದ್ದ ವೇಳೆ ಸರ್ಕಾರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಪೊಲೀಸರು ಶಿವಮೊಗ್ಗ (Shivamogga) ತಾಲೂಕಿನ ಕುಂಸಿಯಲ್ಲಿ ಬಂಧಿಸಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಎಸ್ಕೇಪ್ ಆಗುವ ವೇಳೆಯಲ್ಲಿ ಖತರ್ನಾಕ್ ಖೈದಿ ಜೈಲಿನ ವಾರ್ಡರ್ ರಿಗೆ ಚಳ್ಳಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದ.
ಕಡೂರು ಪೊಲೀಸರಿಂದ ಕಾರ್ಯಚಾರಣೆ: ವಿಚಾರಣಾಧೀನ ಬಂಧನ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಧನರಾಜ್ ಎಂಬುವನನ್ನ ಕಡೂರು ಪೊಲೀಸರು ಗಾಂಜಾ (Ganja) ಪ್ರಕರಣದಲ್ಲಿ ಬಂಧಿಸಿದ್ದರು. ವಿಚಾರಣಾಧೀನ ಕೈದಿ ಯಾಗಿದ್ದ ಧನರಾಜ್ ಹೊಟ್ಟೆನೋವು ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
UDUPI: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!
ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಧನರಾಜ್ ಶೌಚಾಲಯಕ್ಕೆ ಹೋಗಬೇಕೆಂದು ಕೇಳಿಕೊಂಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಕಾವಲಿಗೆ ಇದ್ದ ಸಿಬ್ಬಂದಿ ಆತನ ಕೈಗಳಿಗೆ ಹಾಕಿದ್ದ ಕೋಳವನ್ನು ಬಿಚ್ಚಿ ಕಳುಹಿಸಿದ್ದರು. ಆರೋಪಿ ಧನರಾಜ್ ಶೌಚಗೃಹಕ್ಕೆ ಹೋಗುವಾಗ ಸಿಬ್ಬಂದಿಯನ್ನು ಅದೇ ಶೌಚಾಲಯದೊಳಕ್ಕೆ ತಳ್ಳಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದನು.
ತಪ್ಪಿಸಿಕೊಂಡ ಗಾಂಜಾ ಆರೋಪಿ ಧನರಾಜ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದರು. ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಆರೋಪಿ ಧನರಾಜ್ ಇರುವುದನ್ನ ಖಚಿತಪಡಿಸಿಕೊಂಡ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ.24ರಂದು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವಿಚಾರಣಾಧೀನ ಖೈದಿ ಕಾವಲಿಗೆ ಓರ್ವ ಜೈಲು ಸಿಬ್ಬಂಧಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೇ 25 ರ ತಡರಾತ್ರಿ ವಿಚಾರಣಾಧೀನ ಖೈದಿ ಧನರಾಜ್ ತಲೆಗೆ ಕೆಲಸ ಕೊಟ್ಟು ಹೇಗಾದರೂ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಲೇಬೇಕೆಂದು ನಿರ್ಧರಿಸಿ ಪ್ಲಾನ್ ರೂಪಿಸಿ ಅದರಂತೆ ಪ್ಲಾನ್ ರೂಪಿಸಿ ಓರ್ವ ಸಿಬ್ಬಂದಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ ಮತ್ತೋರ್ವ ಸಿಬ್ಬಂದಿಯನ್ನು ತಳ್ಳಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
Chikkamagaluru; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ
ಪರಾರಿ ಆಗುವ ಹೊತ್ತಿನಲ್ಲಿ ಸಿಬ್ಬಂದಿಯನ್ನು ಶೌಚಾಲಯದ ಕೊಠಡಿಗೆ ತಳ್ಳಿ ಪರಾರಿಯಾಗಿದ್ದಾನೆ. ಖೈದಿ ಪರಾರಿಯಾಗಿರುವ ಬಗ್ಗೆ ಕಾರಾಗೃಹ ಸಿಬ್ಬಂಧಿಗಳು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಗಮನಕ್ಕೆ ತಂದಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
48 ಗಂಟೆ ಒಳಗೆ ವಿಚಾರಣಾಧೀನ ಕೈದಿ ಬಂಧನ: ವಿಚಾರಣಾಧೀನ ಕೈದಿ ಬಳಿ ಯಾವುದೇ ಮೊಬೈಲ್ ಇಲ್ಲದಿದ್ದರೂ ಕೂಡ ಆರೋಪಿಯ ಜಾಡು ಹಿಡಿದು 48 ಗಂಟೆಯೊಳಗೆ ಕಡೂರು ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಅಕ್ಷಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ರಮ್ಯಾ, ಜೈಲು ಸಿಬ್ಬಂದಿಗಳು ಪಾಲ್ಗೊಂಡಿದ್ದರು.