Asianet Suvarna News Asianet Suvarna News

Bengaluru : ದೀಪಾಂಜಲಿನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಸಿಲಿಕಾನ್‌ ಸಿಟಿ ಬೆಂಗಳೂರಿನ ದೀಪಾಂಜಲಿನಗರದ ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಯ ನಡುವೆ ಜಗಳ ಉಂಟಾಗುತ್ತಿದ್ದು, ಪತಿಯೇ ಕೊಲೆ ಮಾಡಿದ್ದಾನೆ ಎಂದು ಗೃಹಿಣಿ ಮನೆಯವರು ಆರೋಪ ಮಾಡಿದ್ದಾರೆ. 

A housewife body was found hanging in Dipanjali Nagar sat
Author
First Published Jan 12, 2023, 7:57 PM IST

ಬೆಂಗಳೂರು (ಜ.12): ಸಿಲಿಕಾನ್‌ ಸಿಟಿ ಬೆಂಗಳೂರಿನ ದೀಪಾಂಜಲಿನಗರದ ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಯ ನಡುವೆ ಜಗಳ ಉಂಟಾಗುತ್ತಿದ್ದು, ಪತಿಯೇ ಕೊಲೆ ಮಾಡಿದ್ದಾನೆ ಎಂದು ಗೃಹಿಣಿ ಮನೆಯವರು ಆರೋಪ ಮಾಡಿದ್ದಾರೆ. 

ಝೈದಾ(22) ಮೃತಪಟ್ಟ ಗೃಹಿಣಿ ಆಗಿದ್ದಾಳೆ. ಕಳೆದ ಮೂರು ವರ್ಷಗಳ ಹಿಂದೆ ಸೈಫ್ ಅಲಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈಗ ಪತಿ ಸೈಫ್ ಅಲಿ ಪತ್ನಿ ಝೈದಾ ಮೇಲೆ ಹಲ್ಲೆ ನಡೆಸಿ, ಕೈ ಕುಯ್ದು, ನೇಣು ಬಿಗಿದ ಆರೋಪವನ್ನು ಮೃತೆಯ ಪೋಷಕರು ಮಾಡಿದ್ದಾರೆ. ಈ ಘಟನೆಯ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ಕೇಸ್ ದಾಖಲು ಮಾಡಿದ್ದಾರೆ. ಒಟ್ಟಾರೆ ಸುಂದರವಾಗಿದ್ದ ಜೋಡಿಯೊಂದು ಗೃಹಿಣಿ ಸಾವಿನ ಮೂಲಕ ಅಂತ್ಯವಾಗಿದೆ. ಮಗಳನ್ನು ಹೆತ್ತು ಮದುವೆ ಮಾಡಿಕೊಟ್ಟಿದ್ದ ಪೋಷಕರು ತಮ್ಮ ಮಗಳ ಉತ್ತಮ ಜೀವನಕ್ಕಾಗಿ ಪ್ರಾರ್ಥಿಸಿದರೂ ಫಲ ಸಿಗದ ಹಿನ್ನೆಲೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. 

Kodagu: ನೇಣಿಗೆ ಶರಣಾದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್‌ ಮಾಡುವ ಮೂಲಕ ರಸ್ತೆಯಲ್ಲಿ ವಾಹನ ಸಂಚಾರ ಮಾಡುವವರಿಗೆ ಅಪಾಯಕಾರಿ ಆಗಿದ್ದ ನಾಲ್ವರು ಅಪ್ತಾಪ್ತ ಯುವಕರನ್ನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಕಾರ್ಯಚರಣೆ ಮೂಲಕ ವಶಕ್ಕೆ ಪಡೆದಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದ ಅಪ್ರಾಪ್ತ ಯುವಕರ ಮೇಲೆ ಕೇಸ್ ದಾಖಲು ಮಾಡುವ ಮೂಲಕ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.  ಸಿಆರ್ ಪಿಸಿ 107 ಪ್ರಕಾರ ಕೇಸ್ ದಾಖಲು ಮಾಡಲಾಗಿದೆ. 

ಎಲ್ಲೆಲ್ಲಿ ವ್ಹೀಲಿಂಗ್ : ಪೊಲೀಸರ ಅತಿಥಿಯಾಗಿರುವ  ಅಪ್ರಾಪ್ತ ಯುವಕರು ಬೆಂಗಳೂರಿನ ನೈಸ್ ರಸ್ತೆ, ಔಟರ್ ರಿಂಗ್ ರೋಡ್ ಬಳಿ ವೀಲ್ಹಿಂಗ್ ಮಾಡುತ್ತಿದ್ದರು. ಇದರಿಂದ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಇತರೆ ವಾಹನ ಸವಾರರಿಗೆ ಎಲ್ಲಿ ತಮಗೆ ಅಪಘಾತ ಮಾಡಿ ಬಿಡುತ್ತಾರೋ ಎನ್ನುವ ಆತಂಕವೂ ಎದುರಾಗಿತ್ತು. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಇಂದು ಕಾರ್ಯಾಚರಣೆ ಮಾಡಿದ ಪೊಲೀಸರು, ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ. ಇದರಿಂದ ಈ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದ ಇತರೆ ವಾಹನ ಸವಾರರು, ಮಹಿಳಾ ವಾಹನ ಸವಾರರಿಗೆ ಕೊಂಚ ನೆಮ್ಮದಿಯನ್ನು ತಂದಿದೆ.

ಬೆಂಗಳೂರಿನಲ್ಲಿ ಮಿತಿ ಮೀರುತ್ತಿದೆ ಪುಂಡರ ವ್ಹೀಲಿಂಗ್ ಹಾವಳಿ: ಕಡಿವಾಣಕ್ಕೆ ಟಾಸ್ಕ್‌ಫೋರ್ಸ್ ಟೀಂ ರಚನೆ

ಪೋಷಕರ ವಿರುದ್ದ ಪ್ರಕರಣ ದಾಖಲು: ಇನ್ನು ಅಪ್ರಾಪ್ತ ಮಕ್ಕಳಿಗೆ ಬೈಕ್‌ ಕೊಡಬಾರದು ಎಂದು ಸಾರಿಗೆ ಇಲಾಖೆಯ ನಿಯಮವಿದೆ. ಒಂದು ವೇಳೆ ಅಪ್ರಾಪ್ತರು ಬೈಕ್‌ ಚಾಲನೆ ಮಾಡಿದಲ್ಲಿ ಅವರ ಪೋಷಕರು ಅಥವಾ ಬೈಕ್‌ ಕೊಟ್ಟಂತಹ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಜೊತೆಗೆ, 25 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಈಗ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಾಯಕಾರಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಅಪ್ರಾಪ್ತ ಯುವಕರಿಗೆ ಬೈಕ್ ಕೊಟ್ಟ ಪೋಷಕರ ವಿರುದ್ದ ಕೂಡ ಕೇಸ್ ದಾಖಲು ಮಾಡಲಾಗಿದೆ.

Follow Us:
Download App:
  • android
  • ios