ಮಡಿಕೇರಿಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್‌ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ಕೊಡಗು (ಜ.10): ಸುಂದರ ನಿಸರ್ಗ ತಾಣವಾಗಿರುವ ಮಡಿಕೇರಿಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್‌ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ಶಾಲೆ- ಕಾಲೇಜು ದಿನಗಳಲ್ಲಿ ಉತ್ತಮವಾಗಿ ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾಗಿರುವ ಮಕ್ಕಳು ಮತ್ತು ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಆಲೋಚನೆ ಹಾಗೂ ನಿರ್ಧಾರದಿಂದ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ದೊಡ್ಡ ದುರಂತವಾಗಿದೆ. ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿರುವ ಜಸ್ಮಿತಾ(19) ಮೃತ ವಿದ್ಯಾರ್ಥಿನಿ ಆಗಿದ್ದಾಳೆ. ಕೊಡಗಿನ ಕುಶಾಲನಗರದ ಸಂತೋಷ್ ಎಂಬುವವರ ಪುತ್ರಿ ಜಸ್ಮಿತಾ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Ramanagara: ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ

ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಜಸ್ಮಿತಾ ಓದಿನಲ್ಲಿ ಮುಂದಿದ್ದಳು. ನೋಡಲು ಸುಂದರವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಮಗಳನ್ನು ಓದಿಸಿ ಉಜ್ವಲ ಭವಿಷ್ಯ ರೂಪಿಸಿಕೊಡಬೇಕು ಎಂದು ಕನಸು ಕಂಡಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ, ವಿದ್ಯಾರ್ಥಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು(ಜ.10): ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣದಲ್ಲಿನ ಫೋಟೋದಿಂದ ಪತ್ತೆ ಹಚ್ಚಿ ಆಕೆಯ ಪೋಷಕರ ಮಡಿಲಿಗೆ ಆಟೋ ಚಾಲಕರೊಬ್ಬರು ಸುರಕ್ಷಿತವಾಗಿ ಸೇರಿಸಿದ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಕೆಂಗುಂಟೆಯ ನಿವಾಸಿ ಬಾಲಕಿ ಕಣ್ಮರೆಯಾಗಿದ್ದು, ಬಾಲಕಿಯನ್ನು ರಕ್ಷಿಸಿದ ಆಟೋ ಚಾಲಕ ಸೋಮಶೇಖರ್‌ ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅಭಿನಂದಿಸಿದ್ದಾರೆ.

ದೆಹಲಿ ಗಣರಾಜ್ಯೋತ್ಸವ ಆರ್ ಡಿ ಸಿ-2023 ಭಾಗವಹಿಸಲು ರಾಜ್ಯದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ!

ಎರಡು ದಿನಗಳ ಹಿಂದೆ ಶಾಲೆಗೆ ಚಕ್ಕರ್‌ ಹಾಕಿ ಮಾಲ್‌ಗೆ ಸ್ನೇಹಿತರ ಜತೆ ಬಾಲಕಿ ತೆರಳಿದ್ದಳು. ಈ ವಿಚಾರ ಗೊತ್ತಾಗಿ ಶಾಲೆಯ ಪ್ರಾಂಶುಪಾಲರು, ಶಾಲೆಗೆ ಆಕೆಯ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಆಕೆ, ಮನೆ ಬಿಟ್ಟು ಹೋಗಿದ್ದಳು. ಮಗಳ ಪತ್ತೆಗೆ ಹುಡುಕಾಡಿದ ಪೋಷಕರು, ಕೊನೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಾಟ್ಸಾಪ್‌ನಲ್ಲಿ ಬಾಲಕಿಯ ನಾಪತ್ತೆ ಮಾಹಿತಿ: ಬಾಲಕಿ ಕಾಣೆಯಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರಚಾರವಾಗಿತ್ತು. ಈ ಫೋಟೋ ನೋಡಿದ್ದ ಆಟೋ ಚಾಲಕ ಸೋಮಶೇಖರ್‌ ಅವರು, ಗೊರಗುಂಟೆ ಪಾಳ್ಯ ದ ಬಸ್‌ ನಿಲ್ದಾಣದಲ್ಲಿ ಬಾಲಕಿಯನ್ನು ಸೋಮವಾರ ನೋಡಿದ್ದಾರೆ. ಕೂಡಲೇ ವಾಟ್ಸ್‌ ಆ್ಯಪ್‌ನಲ್ಲಿ ಸ್ನೇಹಿತರಿಂದ ಬಂದಿದ್ದ ಪೋಟೋಗೂ ಬಾಲಕಿ ಸಾಮ್ಯತೆ ಪತ್ತೆ ಹಚ್ಚಿದ ಅವರು, ಕೂಡಲೇ ವಾಟ್ಸ್‌ ಆ್ಯಪ್‌ನಲ್ಲಿ ಬಾಲಕಿ ಪೋಷಕರ ಮೊಬೈಲ್‌ ನಂಬರ್‌ ಹುಡುಕಿ ಕರೆ ಮಾಡಿದ್ದಾರೆ.