ಶಾಲಾ ಬಸ್‌ ಚಾಲಕನಿಂದ 3.5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಬಸ್‌ನಲ್ಲೇ ಅತ್ಯಾಚಾರ;  ಬಸ್ಸಿನಲ್ಲೇ ಕೃತ್ಯಬಸ್‌ ಚಾಲಕ, ಮಹಿಳಾ ಸಹಾಯಕಿ ಬಂಧನ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಮಿಶ್ರಾ ಭರವಸೆ

ಭೋಪಾಲ್‌ (ಸೆ.14): ಮೂರುವರೆ ವರ್ಷದ ಪ್ರಿ-ನರ್ಸರಿ ಮಗುವಿನ ಶಾಲೆಯ ಬಸ್‌ ಚಾಲಕನೇ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಬಸ್‌ ಚಾಲಕ ಮತ್ತು ಬಸ್ಸಿನಲ್ಲಿದ್ದ ಮಹಿಳಾ ಸಹಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೇಪ್‌ ಮಾಡಿ ಇನ್ನಷ್ಟು ಮಂದಿ ಜೊತೆ ಸೆಕ್ಸ್‌ ಮಾಡುವಂತೆ ಹಿಂಸೆ, ಯುವತಿ ಖಾಸಗಿ ಫೋಟೊ ಲೀಕ್‌

ಭೋಪಾಲ್‌ ಪ್ರಮುಖ ಶಾಲೆಯೊಂದರಲ್ಲಿ ಪ್ರೀನರ್ಸರಿಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಕಳೆದ ಗುರುವಾರ ಅತ್ಯಾಚಾರ ನಡೆದಿದೆ. ಎಂದಿನಂತೆ ಬಸ್ಸಿನಲ್ಲಿ ಮನೆಗೆ ಬಂದ ಮಗುವಿನ ಬಟ್ಟೆಬದಾಲಾಯಿಸಿರುವುದನ್ನು ಗಮನಿಸಿದ ಮಗುವಿನ ತಾಯಿ, ಮಗುವಿನ ಶಿಕ್ಷಕರಿಗೆ ಹಾಗೂ ಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಶಾಲೆ ಇದನ್ನು ನಿರಾಕರಿಸಿದೆ. ನಂತರ ಮಗು ತನ್ನ ಖಾಸಗಿ ಅಂಗಗಳಲ್ಲಿ ನೋವಾಗಿರುವುದನ್ನು ತಾಯಿಯ ಬಳಿ ಹೇಳಿದಾಗ, ವೈದ್ಯರ ಬಳಿ ಪರೀಕ್ಷೆ ಮಾಡಿದ್ದಾರೆ. ಆಗ ಮಗುವು ಚಾಲಕನು ತನ್ನ ಮೇಲೆ ದೌರ್ಜನ್ಯ ಎಸಗಿದ್ದನ್ನು ಬಾಯಿಬಿಟ್ಟಿದ್ದಾಳೆ. ಆಕ ಸಹಾಯಕಿ ಕೂಡ ಬಸ್ಸಲ್ಲೇ ಇದ್ದಿದ್ದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಯ್‌ಫ್ರೆಂಡ್‌ ಮತ್ತವನ 7 ಕುಟುಂಬಸ್ಥರಿಂದ ಯುವಕಿಯ ಅತ್ಯಾಚಾರ, ಬಲವಂತದ ಮತಾಂತರ

ಪೋಕ್ಸೋ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಬಸ್ಸಿನ ಚಾಲಕ ಮತ್ತು ಮಹಿಳಾ ಸಹಾಯಕಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ಪಾತ್ರ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ತಪ್ಪಿತಸ್ಥರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ.