ರೇಪ್‌ ಮಾಡಿ ಇನ್ನಷ್ಟು ಮಂದಿ ಜೊತೆ ಸೆಕ್ಸ್‌ ಮಾಡುವಂತೆ ಹಿಂಸೆ, ಯುವತಿ ಖಾಸಗಿ ಫೋಟೊ ಲೀಕ್‌

Madhya Pradesh Rape Case: ಯುವತಿಯನ್ನು ಅತ್ಯಾಚಾರ ಮಾಡಿ ನಂತರ ಇನ್ನಷ್ಟು ಗಂಡಸರೊಂದಿಗೆ ದೇಹ ಹಂಚಿಕೊಳ್ಳುವಂತೆ ಬೆದರಿಸಿದ ತಾಯಿ - ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದ ನಂತರ ಯುವತಿ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

man rapes teen and forces her to have sex with other men in madhya pradesh

ನಾಗ್ಪುರ: 22 ವರ್ಷದ ವ್ಯಕ್ತಿ ಮತ್ತು ಅವನ ತಾಯಿಯನ್ನು ಮಧ್ಯಪ್ರದೇಶದ ಭೋಪಾಲ್‌ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಅತ್ಯಾಚಾರ ಮಾಡಿ ನಂತರ ಬೇರೆ ಗಂಡಸರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತಾಯಿ ಮಗ ಪೀಡಿಸಿದ್ದರು ಎಂಬ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ. ಸಂತ್ರಸ್ತೆ ನಾಗ್ಪುರದ ಜರಿಪಟ್ಕ ಎಂಬ ಪ್ರದೇಶದವಳು. ಮಗ ಅತ್ಯಾಚಾರ ಮಾಡಿದರೆ, ತಾಯಿ ಅದಾದ ನಂತರ ಬೇರೆ ವ್ಯಕ್ತಿಗಳೊಂದಿಗೆ ದೇಹ ಹಂಚಿಕೊಳ್ಳಲು ಬೆದರಿಸಿದ್ದಾಳೆ. ಪೊಲೀಸರಿಗೆ ವಿಷಯ ತಿಳಿಸದಂತೆಯೂ ಬೆದರಿಸಿದ್ದಾಳೆ. ಆದರೆ ಯುವತಿ ಅಲ್ಲಿಂದ ಹೊರಟ ನಂತರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾಳೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಭಾನುವಾರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

ಸಂತ್ರಸ್ತೆ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೇ ತಿಂಗಳಲ್ಲಿ ಕೆಲಸದ ಸಂಬಂಧ ಭೋಪಾಲ್‌ಗೆ ಹೋಗಿದ್ದಳು. ಅಲ್ಲಿ ಆರೋಪಿ ಅಭಿಷೇಕ್‌ ಕುರಿಲ್‌ ಪರಿಚಯವಾಗಿದ್ದ. ಅದಾದ ನಂತರ ಬಣ್ಣದ ಮಾತುಗಳನ್ನಾಡಿ ಆರೋಪಿ ಯುವತಿಯ ಮನಸ್ಸು ಗೆದ್ದಿದ್ದಾನೆ. ಮದುವೆ, ಭವಿಷ್ಯ ಎಂಬೆಲ್ಲಾ ಕನಸು ತುಂಬಿ ಕಡೆಗೆ ಅತ್ಯಾಚಾರ ಮಾಡಿ ಬೇರೆಯವರೊಂದಿಗೂ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗು ಎಂದು ಹಿಂಸಿಸಿದ್ದಾನೆ. 

"ಆರೋಪಿ ತಾಯಿ ರಜ್ನಿ (45) ಅವರನ್ನೂ ಬಂಧಿಸಿದ್ದೇವೆ. ಆಕೆ ಸಂತ್ರಸ್ತೆಯನ್ನು ಬೇರೆ ಯುವಕರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಹಿಂಸೆ ನೀಡಿದ್ದಳು ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿದ್ದಾರೆ. ಅದಕ್ಕಾಗಿಯೇ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ನಡೆಸಿದ ನಂತರ ಆಕೆಯ ಮೊಬೈಲ್‌ ಫೋನನ್ನು ಕದ್ದು ಅದರಲ್ಲಿದ್ದ ಆಕೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್‌ ಹರಿಬಿಟ್ಟಿದ್ದಾನೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Belagavi Crime: ಮಹಿಳೆ ಮೇಲೆ ಇಬ್ಬರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಕಾಮುಕರ ಬಂಧನ

ಪ್ರೇಯಸಿಯ ಮೇಲೆ ಬಾಯ್‌ಫ್ರೆಂಡ್‌ ಮತ್ತು ಕುಟುಂಬದಿಂದ ಸಾಮೂಹಿಕ ಅತ್ಯಾಚಾರ:

ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆಯಾಗುವ ಇರಾದೆಯೂ ಇಬ್ಬರಲ್ಲೂ ಇತ್ತು. ಆದರೆ ಯುವಕನಿಗೆ ಮದುವೆಯ ನೆಪದಲ್ಲಿ ಆಕೆಯನ್ನು ಅತ್ಯಾಚಾರ ಮಾಡುವ ಕಾಮದಾಹವಿದ್ದರೆ ಆತನ ಕುಟುಂಬಕ್ಕೆ ಅವಳನ್ನು ಬಲವಂತದಿಂದ ಮತಾಂತರ ಮಾಡುವ ಹಪಹಪಿಯಿತ್ತು. ಮನೆಗೆ ಕರೆಸಿಕೊಂಡ ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಒಬ್ಬರಾದ ನಂತರ ಒಬ್ಬರು ಕುಟುಂಬಸ್ಥರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವಕನ ಐದು ಕುಟುಂಬಸ್ಥರು ಸೇರಿ ಏಳು ಜನ ಸಂತ್ರಸ್ಥೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಬಲವಂತದಿಂದ ಆಕೆಯ ಮತಾಂತರ ಮಾಡಲಾಗಿದೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ. ಬಂಡಾ ಜಿಲ್ಲೆಯ ಅತ್ತಾರಾ ಚುಂಗಿ ಎಂಬ ಪ್ರದೇಶದಲ್ಲಿ ಜಾವೇದ್‌ ಎಂಬಾತನೇ ಯುವತಿಯ ಬಾಯ್‌ಫ್ರೆಂಡ್‌ ಮತ್ತು ಪ್ರಕರಣದ ಪ್ರಮುಖ ಆರೋಪಿ. 

ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಜಾವೇದ್‌ ಮತ್ತು ಸಂತ್ರಸ್ಥೆ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು ಮತ್ತು ದೈಹಿಕ ಸಂಬಂಧವನ್ನೂ ಹೊಂದಿದ್ದರು. ಆಕೆ ಅನ್ಯ ಧರ್ಮೀಯಳಾದ ಕಾರಣ ಮತಾಂತರವಾದ ನಂತರ ಮದುವೆಯಾಗುವುದಾಗಿ ಜಾವೇದ್‌ ಒತ್ತಾಯ ಮಾಡುತ್ತಿದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Belagavi Crime: ಮಹಿಳೆ ಮೇಲೆ ಇಬ್ಬರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಕಾಮುಕರ ಬಂಧನ 

ಯುವತಿಯ ಪೋಷಕರು ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 1ರಂದು ಯುವತಿ ಇಂಟರ್‌ನೆಟ್‌ ಕೆಫೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರನಡೆದಿದ್ದಾರೆ. ನಂತರ ಮಧ್ಯ ದಾರಿಯಲ್ಲಿ ಜಾವೇದ್‌ ಆಕೆಯನ್ನು ಭೇಟಿಯಾಗಿದ್ದಾನೆ. ಯಾವುದೋ ಬರ್ತ್‌ಡೇ ಪಾರ್ಟಿಯಿದೆ ಎಂದು ಕಾನ್ಪುರ ನಗರಕ್ಕೆ ಯುವತಿಯನ್ನು ಕರೆದೊಯ್ದಿದ್ದಾನೆ. ಈ ವೇಳೆ ಜಾವೇದ್‌ನ ಕುಟುಂಬವೂ ಅವರ ಜೊತೆಗೇ ಇತ್ತು ಎನ್ನಲಾಗಿದೆ. ನಂತರ ಆಕೆಯನ್ನು ಮತಾಂತರವಾಗುವಂತೆ ಬಲವಂತ ಮಾಡಲಾಗಿದೆ. ಯುವತಿ ಮತಾಂತವಾಗಲು ಸುತಾರಾಂ ಒಪ್ಪದಿದ್ದಾಗ ಆಕೆಯನ್ನು ಲಖನೌ, ಬಾರಾಬಂಕಿ ಮತ್ತು ಝಾನ್ಸಿ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಆಕೆಯನ್ನು ಅಪಹರಿಸಿ ಈ ನಗರಗಳಲ್ಲಿ ಸುತ್ತಾಡಿಸಿದ್ದಾರೆ. 

ಇದನ್ನೂ ಓದಿ: ''ಚಾಕುವಿನಿಂದ ಬೆದರಿಸಿ ಮುಂಬೈ ಮಹಿಳೆ ಮೇಲೆ ಗ್ಯಾಂಗ್‌ರೇಪ್‌ ಕಟ್ಟುಕತೆ..!''

ಬುಧವಾರ ಯುವತಿ ಜಾವೇದ್‌ ಕುಟುಂಬದಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಅಲ್ಲಿಂದ ಮನೆಗೆ ಬಂದ ಆಕೆ ನಡೆದ ಘಟನಾವಳಿಗಳ ಕುರಿತಾಗಿ ಮನೆಯವರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಬಂಡಾ ಸಾದರ್‌ ಕೊಟ್ವಾಲಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 376, 342, 506, 120 B, 3/4 POCSO Act, 3/5 (1) Prohibition of Unlawful Religious Conversion Ordinance ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಅವನ ಬಂಧನಕ್ಕಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ. 

Latest Videos
Follow Us:
Download App:
  • android
  • ios