Asianet Suvarna News Asianet Suvarna News

ಬಾಯ್‌ಫ್ರೆಂಡ್‌ ಮತ್ತವನ 7 ಕುಟುಂಬಸ್ಥರಿಂದ ಯುವಕಿಯ ಅತ್ಯಾಚಾರ, ಬಲವಂತದ ಮತಾಂತರ

Uttar Pradesh Gang Rape: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯ ಮೇಲೆ ಬಾಯ್‌ಫ್ರೆಂಡ್‌ ಮತ್ತವನ ಕುಟುಂಬಸ್ಥರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಂತರ ಆಕೆಯನ್ನು ಬಲವಂತದಿಂದ ಮತಾಂತರ ಕೂಡ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

boyfriend and 5 of his family gang rapes girlfriend forced to covert religion
Author
First Published Sep 10, 2022, 11:00 AM IST

ಲಖನೌ: ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆಯಾಗುವ ಇರಾದೆಯೂ ಇಬ್ಬರಲ್ಲೂ ಇತ್ತು. ಆದರೆ ಯುವಕನಿಗೆ ಮದುವೆಯ ನೆಪದಲ್ಲಿ ಆಕೆಯನ್ನು ಅತ್ಯಾಚಾರ ಮಾಡುವ ಕಾಮದಾಹವಿದ್ದರೆ ಆತನ ಕುಟುಂಬಕ್ಕೆ ಅವಳನ್ನು ಬಲವಂತದಿಂದ ಮತಾಂತರ ಮಾಡುವ ಹಪಹಪಿಯಿತ್ತು. ಮನೆಗೆ ಕರೆಸಿಕೊಂಡ ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಒಬ್ಬರಾದ ನಂತರ ಒಬ್ಬರು ಕುಟುಂಬಸ್ಥರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವಕನ ಐದು ಕುಟುಂಬಸ್ಥರು ಸೇರಿ ಏಳು ಜನ ಸಂತ್ರಸ್ಥೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಬಲವಂತದಿಂದ ಆಕೆಯ ಮತಾಂತರ ಮಾಡಲಾಗಿದೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ. ಬಂಡಾ ಜಿಲ್ಲೆಯ ಅತ್ತಾರಾ ಚುಂಗಿ ಎಂಬ ಪ್ರದೇಶದಲ್ಲಿ ಜಾವೇದ್‌ ಎಂಬಾತನೇ ಯುವತಿಯ ಬಾಯ್‌ಫ್ರೆಂಡ್‌ ಮತ್ತು ಪ್ರಕರಣದ ಪ್ರಮುಖ ಆರೋಪಿ. 

ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಜಾವೇದ್‌ ಮತ್ತು ಸಂತ್ರಸ್ಥೆ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು ಮತ್ತು ದೈಹಿಕ ಸಂಬಂಧವನ್ನೂ ಹೊಂದಿದ್ದರು. ಆಕೆ ಅನ್ಯ ಧರ್ಮೀಯಳಾದ ಕಾರಣ ಮತಾಂತರವಾದ ನಂತರ ಮದುವೆಯಾಗುವುದಾಗಿ ಜಾವೇದ್‌ ಒತ್ತಾಯ ಮಾಡುತ್ತಿದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Belagavi Crime: ಮಹಿಳೆ ಮೇಲೆ ಇಬ್ಬರು ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಕಾಮುಕರ ಬಂಧನ 

ಯುವತಿಯ ಪೋಷಕರು ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 1ರಂದು ಯುವತಿ ಇಂಟರ್‌ನೆಟ್‌ ಕೆಫೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರನಡೆದಿದ್ದಾರೆ. ನಂತರ ಮಧ್ಯ ದಾರಿಯಲ್ಲಿ ಜಾವೇದ್‌ ಆಕೆಯನ್ನು ಭೇಟಿಯಾಗಿದ್ದಾನೆ. ಯಾವುದೋ ಬರ್ತ್‌ಡೇ ಪಾರ್ಟಿಯಿದೆ ಎಂದು ಕಾನ್ಪುರ ನಗರಕ್ಕೆ ಯುವತಿಯನ್ನು ಕರೆದೊಯ್ದಿದ್ದಾನೆ. ಈ ವೇಳೆ ಜಾವೇದ್‌ನ ಕುಟುಂಬವೂ ಅವರ ಜೊತೆಗೇ ಇತ್ತು ಎನ್ನಲಾಗಿದೆ. ನಂತರ ಆಕೆಯನ್ನು ಮತಾಂತರವಾಗುವಂತೆ ಬಲವಂತ ಮಾಡಲಾಗಿದೆ. ಯುವತಿ ಮತಾಂತವಾಗಲು ಸುತಾರಾಂ ಒಪ್ಪದಿದ್ದಾಗ ಆಕೆಯನ್ನು ಲಖನೌ, ಬಾರಾಬಂಕಿ ಮತ್ತು ಝಾನ್ಸಿ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಆಕೆಯನ್ನು ಅಪಹರಿಸಿ ಈ ನಗರಗಳಲ್ಲಿ ಸುತ್ತಾಡಿಸಿದ್ದಾರೆ. 

ಇದನ್ನೂ ಓದಿ: ''ಚಾಕುವಿನಿಂದ ಬೆದರಿಸಿ ಮುಂಬೈ ಮಹಿಳೆ ಮೇಲೆ ಗ್ಯಾಂಗ್‌ರೇಪ್‌ ಕಟ್ಟುಕತೆ..!''

ಬುಧವಾರ ಯುವತಿ ಜಾವೇದ್‌ ಕುಟುಂಬದಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಅಲ್ಲಿಂದ ಮನೆಗೆ ಬಂದ ಆಕೆ ನಡೆದ ಘಟನಾವಳಿಗಳ ಕುರಿತಾಗಿ ಮನೆಯವರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಬಂಡಾ ಸಾದರ್‌ ಕೊಟ್ವಾಲಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 376, 342, 506, 120 B, 3/4 POCSO Act, 3/5 (1) Prohibition of Unlawful Religious Conversion Ordinance ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಅವನ ಬಂಧನಕ್ಕಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ. 
ದೂರನ್ನು ದಾಖಲಿಸಿಕೊಂಡ ನಂತರ ಬಂಡಾ ಜಿಲ್ಲಾ ಎಸ್‌ಪಿ ಅಭಿನಂದನ್‌ ವಿಶೇಷ ತನಿಖಾ ತಂಡವನ್ನು ರಚಿಸಿ ಜಾವೇದ್‌, ಆತನ ಸಹೋದರರಾದ ತೌಫಿಕ್‌ ಮತ್ತು ಆಸಿಫ್‌, ತಾಯಿ ಬೇಬಿ, ಅಕ್ಕ ಇಶ್ರಾತ್‌ರನ್ನು ಬಂಧಿಸಿದ್ದಾರೆ. ಎಸ್‌ಪಿ ಅಭಿನಂದನ್‌ ಮಾಹಿತಿ ಪ್ರಕಾರ, ಅವಂತಿ ನಗರದ ನಿವಾಸಿ ದಿನೇಶ್‌ ಯಾದವ್‌ ಮತ್ತು ಖಾಯ್‌ಪುರ್‌ನ ಸುನಿಲ್‌ ಗುಪ್ತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಅವರೂ ಭಾಗಿಯಾಗಿದ್ದರು ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಅಫ್ತಾಬ್‌ ಅಲಿಯಾಸ್‌ ನೂರ್‌ ತಲೆಮರೆಸಿಕೊಂಡಿರುವ ಆರೋಪಿ. 

ಇದನ್ನೂ ಓದಿ: 8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಣ್ಣು ಕಿತ್ತ ದುರುಳರು!

ಸಂತ್ರಸ್ಥೆ ಹೇಳಿಕೆ ಅನ್ವಯ, ಜಾವೇದ್‌ ಮತ್ತು ಆಕೆ ಪ್ರೀತಿಸುತ್ತಿದ್ದರು. ಮತ್ತು ಜಾವೇದ್‌ ಆಕೆಯನ್ನು ಮದುವೆಯಾಗುವ ಉದ್ದೇಶದಿಂದ ತನ್ನ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಆತ ಮತ್ತೆ ಮುಸ್ಲಿಂ ಧರ್ಮವನ್ನು ಆಚರಿಸಲು ಆರಂಭಿಸಿದ್ದ. ಸಂತ್ರಸ್ಥೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ. ಆಕೆಗೆ 18 ತುಂಬುವ ಮುನ್ನವೇ ಜಾವೇದ್‌ ಆಕೆಯೊಡನೆ ದೈಹಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಪೋಕ್ಸೊ ಪ್ರಕರಣವನ್ನು ಕೂಡ ಆತನ ಮೇಲೆ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

Follow Us:
Download App:
  • android
  • ios