* ಯುಗಾದಿ ಹಬ್ಬದ ದಿನ ಸುಹಾಸ್ ಅಪಹರಿಸಿ ಕೊಲೆ* 6 ಮಂದಿಗೆ ಪೊಲೀಸರಿಗೆ ಶರಣು* ತಿರುಪತಿಗೆ ತೆರಳಿ ಕೇಶಮುಂಡನ ಮಾಡಿಸಿಕೊಂಡು ಪೊಲೀಸರಿಗೆ ಶರಣು
ಬೆಂಗಳೂರು(ಮೇ.13): ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಅಪಹರಿಸಿ(Kidnap) ಹತ್ಯೆಗೈದು(Murder) ಪರಾರಿಯಾಗಿದ್ದ ಏಳು ಮಂದಿ ಆರೋಪಿಗಳು ಬೊಮ್ಮನಹಳ್ಳಿ ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ.
ಬಿಟಿಎಂ ಲೇಔಟ್ 4ನೇ ಹಂತದ ಪ್ರಜ್ವಲ್ ಅಲಿಯಾಸ್ ಕಾಂತ (22), ಹಿಮಾದ್ರಿ (21), ಜೀವನ್ (22), ಸಚಿನ್ (21), ರಾಕೇಶ್ (22), ಅವಿನಾಶ್ (21) ಹಾಗೂ ಸಾಗರ್ (19) ಬಂಧಿತರು(Arrest). ಆರೋಪಿಗಳು(Accused) ಬಿಟಿಎಂ ಲೇಔಟ್ ನಿವಾಸಿ ಸುಹಾಸ್ (19) ಎಂಬಾತನನ್ನು ಮೇ 9ರಂದು ಸಂಜೆ ಅಪಹರಿಸಿ ಎಲೆಕ್ಟ್ರಾನಿಕ್ ಸಿಟಿಯ ಬಸವನಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದರು. ಹತ್ಯೆಯ ಬಳಿಕ ಆರೋಪಿ ಸಾಗರ್ ಹೊರತುಪಡಿಸಿ ಉಳಿದ ಆರು ಮಂದಿ ಆರೋಪಿಗಳು ತಿರುಪತಿಗೆ ತೆರಳಿ ಕೇಶಮುಂಡನ ಮಾಡಿಸಿಕೊಂಡು ನಗರಕ್ಕೆ ವಾಪಸಾಗಿ ಪೊಲೀಸರಿಗೆ(Police) ಶರಣಾಗಿದ್ದಾರೆ.
Bengaluru Drug Bust: 500 ನೋಟು, ಸಿಗರೆಟ್ ಪ್ಯಾಕ್‌ನಲ್ಲಿ ಮಾದಕ ವಸ್ತು ಅಡಗಿಸಿಟ್ಟು ಮಾರಾಟ..!
ಮೃತ ಸುಹಾಸ್ ಹಾಗೂ ಆರೋಪಿಗಳು ಏರಿಯಾದಲ್ಲಿ ‘ಹವಾ’ ಸೃಷ್ಟಿಸಲು ಆವಾಜ್ ಹಾಕಿಕೊಂಡು ಓಡಾಡುತ್ತಿದ್ದರು. ಈ ನಡುವೆ ಯುಗಾದಿ ಹಬ್ಬದ ನಡುವೆ ಮೃತ ಸುಹಾಸ್ ಹಾಗೂ ಪ್ರಜ್ವಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಹೀಗಾಗಿ ಪ್ರಜ್ವಲ್, ಸುಹಾಸ್ ಮೇಲೆ ದ್ವೇಷ ಕಾರುತ್ತಿದ್ದ. ಮೇ 9ರಂದು ಸಂಜೆ ಮೃತ ಸುಹಾಸ್ ಹಾಗೂ ಆತನ ಸ್ನೇಹಿತರಾದ ಜೀವನ್ ಮತ್ತು ಮಹದೇವ ಒಂದೇ ದ್ವಿಚಕ್ರ ವಾಹನದಲ್ಲಿ ಗಾರೆಬಾವಿಪಾಳ್ಯದ ಬಳಿ ಹೋಗುತ್ತಿದ್ದರು. ಈ ವೇಳೆ ಆಟೋದಲ್ಲಿ ಎದುರಾದ ಆರೋಪಿ ಪ್ರಜ್ವಲ್ ಹಾಗೂ ಆರೋಪಿಗಳು, ದ್ವಿಚಕ್ರ ವಾಹನ ಅಡ್ಡಗಟ್ಟಿಸುಹಾಸ್‌ನನ್ನು ಬಲವಂತವಾಗಿ ಆಟೋ ಹತ್ತಿಸಿಕೊಂಡು ತೆರಳಿದ್ದಾರೆ.
ಈ ವೇಳೆ ಸುಹಾಸ್ ಸ್ನೇಹಿತರಾದ ಜೀವನ್ ಮತ್ತು ಮಹದೇವ ದ್ವಿಚಕ್ರ ವಾಹನದಲ್ಲಿ ಆಟೋ ಫಾಲೋ ಮಾಡಿದ್ದಾರೆ. ಆದರೆ, ಮಾರ್ಗ ಮಧ್ಯೆ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿಯಾಗಿದೆ. ಹೀಗಾಗಿ ಆರೋಪಿಗಳು ಆಟೋದಲ್ಲಿ ಸುಹಾಸ್‌ನನ್ನು ಯಾವ ಕಡೆಗೆ ಕರೆದೊಯ್ದರು ಎಂಬುದು ಗೊತ್ತಾಗಿಲ್ಲ. ಹೀಗಾಗಿ ದ್ವಿಚಕ್ರ ವಾಹನ ತಳ್ಳಿಕೊಂಡು ಮನೆ ಕಡೆಗೆ ಹೋಗಿದ್ದಾರೆ. ಈ ನಡುವೆ ಆರೋಪಿಗಳು ಸುಹಾಸ್‌ನನ್ನು ಎಲೆಕ್ಟ್ರಾನಿಕ್ ಸಿಟಿ ಬಸವನಪುರ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಚಾಕುವಿನಿಂದ ಚುಚ್ಚಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!
ಚೌಟ್ರಿಯಲ್ಲಿ 200 ಗ್ರಾಂ ಚಿನ್ನ ದೋಚಿ ಅಪ್ರಾಪ್ತ ಪರಾರಿ!
ಬೆಂಗಳೂರು: ಕೆಂಗೇರಿ ಸಮೀಪ ಕಲ್ಯಾಣ ಮಂಟಪವೊಂದರಲ್ಲಿ ವರನ ಸಂಬಂಧಿಕರ 200 ಗ್ರಾಂ ಚಿನ್ನಾಭರಣವನ್ನು ಕಿಡಿಗೇಡಿಗಳು ದೋಚಿರುವ ಘಟನೆ ನಡೆದಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಈ ಕೃತ್ಯ ನಡೆದಿದ್ದು, ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ವರನ ಸಂಬಂಧಿ ಇಟ್ಟು ಮೊಬೈಲ್‌ನಲ್ಲಿ ಮಾತನಾಡುವಾಗ ದುಷ್ಕರ್ಮಿಗಳು ಕೈ ಚಳಕ ತೋರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಯುವಕ ಹಾಗೂ ಕೆಂಗೇರಿಯ ಯುವತಿ ವಿವಾಹವು ಬುಧವಾರ ಹಾಗೂ ಗುರುವಾರ ಆಯೋಜಿಸಲಾಗಿತ್ತು. ಗುರುವಾರ ಮಧ್ಯಾಹ್ನ ಕಲ್ಯಾಣ ಮಂಟಪಕ್ಕಾಗಮಿಸಿದ ಎರಡು ಕಡೆಯ ಸಂಬಂಧಿಕರು ಶಾಸ್ತ್ರಗಳಲ್ಲಿ ನಿರತರಾಗಿದ್ದರು. ಸಂಜೆ ಅರಕ್ಷತೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಸಂಬಂಧಿಕರ ಸೋಗಿನಲ್ಲಿ ಕಲ್ಯಾಣ ಮಂಟಪ ಪ್ರವೇಶಿಸಿರುವ ಆರೋಪಿಗಳು, ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕುಳಿತು ಮದುವೆ ಸಂಭ್ರಮದಲ್ಲಿದ್ದವರ ಮೇಲೆ ನಿಗಾವಹಿಸಿ ಗಮನ ಬೇರೆಡೆ ಇದ್ದಾಗ ಕಳ್ಳತನ ಮಾಡಿದ್ದಾರೆ. ಸಭಾಂಗಣದಲ್ಲಿ ಬ್ಯಾಗ್ ಕಾಣದೆ ಹೋದಾಗ ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಕಲ್ಯಾಣ ಮಂಟಪದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪ್ರಾಪ್ತ ಬಾಲಕನೊಬ್ಬ ಬ್ಯಾಗ್ ತೆಗೆದುಕೊಂಡು ಹೋಗುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
