Bengaluru Drug Bust: 500 ನೋಟು, ಸಿಗರೆಟ್‌ ಪ್ಯಾಕ್‌ನಲ್ಲಿ ಮಾದಕ ವಸ್ತು ಅಡಗಿಸಿಟ್ಟು ಮಾರಾಟ..!

 *   ನೈಜೀರಿಯಾದ ಪೆಡ್ಲರ್‌ನಿಂದ ಡ್ರಗ್ಸ್‌ ಖರೀದಿ
*   ಪೊಲೀಸರಿಗೆ ತಿಳಿಯಬಾರದು ಎಂದು ಪ್ಲ್ಯಾನ್‌
*   ತಿಂಗಳ ಹಿಂದೆ ಜೈಲಿಗೆ ಹೋಗಿದ್ದ ಬಂದಿದ್ದ ರೌಡಿ, ಆತನ ಸ್ನೇಹಿತನ ಸೆರೆ
 

Two Arrested For Drugs Supply in Bengaluru grg

ಬೆಂಗಳೂರು(ಮೇ.13):  ಕಾಲೇಜು ವಿದ್ಯಾರ್ಥಿಗಳಿಗೆ 500 ನೋಟು ಹಾಗೂ ಸಿಗರೆಟ್‌ ಪ್ಯಾಕ್‌ನಲ್ಲಿ ಡ್ರಗ್ಸ್‌(Drugs) ಅಡಗಿಸಿ ಪೂರೈಸುತ್ತಿದ್ದ ರೌಡಿ ಹಾಗೂ ಆತನ ಸಹಚರನನ್ನು ಸಿಸಿಬಿ(CCB) ಬಂಧಿಸಿದೆ.

ವಿದ್ಯಾರಣ್ಯಪುರ ಸಮೀಪದ ಎಂ.ಎಸ್‌.ಪಾಳ್ಯದ ನಿವಾಸಿ ಅಕ್ಬಿಬ್‌ ಪಾಷ ಹಾಗೂ ಪ್ರದೀಪ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ .15 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಮೂರು ಮೊಬೈಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸೋಲದೇವನಹಳ್ಳಿ ಬಳಿ ಡ್ರಗ್ಸ್‌ ಮಾರಾಟಕ್ಕೆ ತನ್ನ ಸಹಚರ ಪ್ರದೀಪ್‌ ಜತೆ ಪಾಷ ಸಜ್ಜಾಗಿರುವ ಮಾಹಿತಿ ಮೇರೆಗೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ಬಂಧಿಸಿದೆ.

ಬೆಂಗ್ಳೂರಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 82 ಕೆಜಿ ಮಾದಕ ವಸ್ತು ಜಪ್ತಿ, ಇಬ್ಬರ ಬಂಧನ

ಅಕ್ಬಿಬ್‌ ಪಾಷ ಕ್ರಿಮಿನಲ್‌ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಕೊಲೆ ಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಡ್ರಗ್ಸ್‌ ಕೇಸ್‌ನಲ್ಲಿ ವಿದ್ಯಾರಣ್ಯಪುರ ಠಾಣೆ ಪೊಲೀಸರಿಂದ(Police) ಬಂಧಿತನಾಗಿ ಜೈಲು ಸೇರಿದ್ದ ಆತ, ಬಳಿಕ ಜಾಮೀನು ಪಡೆದು ಹೊರ ಬಂದು ತನ್ನ ಚಾಳಿ ಮುಂದುವರಿಸಿದ್ದ. ಈ ಕ್ರಿಮಿನಲ್‌ ಕೃತ್ಯಗಳ ಹಿನ್ನೆಲೆಯಲ್ಲಿ ಪಾಷ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ರೌಡಿಪಟ್ಟಿತೆರೆಯಲಾಗಿತ್ತು. ಹಣದಾಸೆ ತೋರಿಸಿ ಪ್ರದೀಪ್‌ನನ್ನು ಡ್ರಗ್ಸ್‌ ದಂಧೆಗೆ ಪಾಷ ಸೆಳೆದಿದ್ದ. ನೈಜೀರಿಯಾ ಮೂಲದ ಪೆಡ್ಲರ್‌ನಿಂದ ಡ್ರಗ್ಸ್‌  ಖರೀದಿಸಿ ಬಳಿಕ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಆರೋಪಿಗಳು(Accused) ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಗೆ ತಿಳಿಯದಂತೆ .500 ನೋಟು ಹಾಗೂ ಸಿಗರೆಟ್‌ ಪ್ಯಾಕ್‌ನಲ್ಲಿ ಡ್ರಗ್ಸ್‌ ಅಡಗಿಸಿ ಪೂರೈಸುತ್ತಿದ್ದಾಗಿ ಪಾಷ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ನೈಜೀರಿಯಾ ಮೂಲದ ಪೆಡ್ಲರ್‌ ಸ್ಯಾಮ್ಯುಯಲ್‌ ಪತ್ತೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios