ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!

ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಮೂರು ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಆಕೆಯ ವಾರ್ಡ್‌ನ ಸ್ನಾನಗೃಹದಲ್ಲಿ ಅತ್ಯಾಚಾರವೆಸಗಿದ್ದಾರೆ.
 

In Uttar Pradesh Mirzapur Pregnant woman raped by hospital staff accused absconding san

ಲಕ್ನೋ (ಮೇ. 12): ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರದ (Mirzapur) ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯೊಬ್ಬ (Hospital Staff) ಗರ್ಭಿಣಿ ಮಹಿಳೆಯ ಮೇಲೆ (Pregnant Women) ಅತ್ಯಾಚಾರವೆಸಗಿದ್ದಾರೆ. ಮಹಿಳೆ ವಾಶ್ ರೂಂಗೆ ಹೋಗಿದ್ದ ವೇಳೆ ಆರೋಪಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಮೇ 7ರ ಶನಿವಾರ ರಾತ್ರಿ ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿ 9 ರಿಂದ 10 ಗಂಟೆಯ ನಡುವೆ ಸಂತ್ರಸ್ತೆ ತನ್ನ ವಾರ್ಡ್‌ನಲ್ಲಿರುವ ವಾಶ್‌ರೂಮ್‌ಗೆ (Wash Room) ಹೋಗಿದ್ದಳು, ಈ ವೇಳೆ ಸ್ವಚ್ಛತಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾನೆ.

ಆಕೆ ಮಾಡಿರುವ ಆರೋಪದ ಪ್ರಕಾರ, ಸ್ವಚ್ಛತೆಯ ಕೆಲಸ ಮಾಡುವ ವ್ಯಕ್ತಿ ಸ್ನಾನಗೃಹಕ್ಕೆ ನುಗ್ಗಿ, ಅವಳನ್ನು ವಿವಸ್ತ್ರಗೊಳಿಸಿ ಅವಳ ಬಟ್ಟೆಗಳನ್ನು ಎಸೆದಿದ್ದ, "ನೀವು ಈಗ ಬಟ್ಟೆಯಿಲ್ಲದೆ ಎಲ್ಲಿಗೆ ಹೋಗುತ್ತೀರಿ?"  ಎಂದೂ ಪ್ರಶ್ನೆ ಮಾಡಿದ್ದಾರೆ. ಬಳಿಕ ಆಕೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಆಕೆ ಕಿರುಚಾಡಿದಾಗ, ಸಂತ್ರಸ್ತೆಯ ಮಾತು ಕೇಳಿ ಸ್ಥಳಕ್ಕಾಗಮಿಸಿದ ಇತರ ಮಹಿಳೆಯರು ನೋಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ತೆರಳಿ ಪತಿಗೆ ನಡೆದ ಘಟನೆಯನ್ನು ಹೇಳಿದ್ದಾಳೆ.

ಪತಿ ಆಕೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರು ಪೊಲೀಸರಿಗೆ ಸಂಪೂರ್ಣ ಘಟನೆಯ ವರದಿಯನ್ನು ಸಲ್ಲಿಸಿದರು. ಆಸ್ಪತ್ರೆಯ ಮುಖ್ಯಸ್ಥ ಪ್ರವೀಣ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಯ್ ಕೆ ಸಿಂಗ್ ಕೂಡ ಸಂತ್ರಸ್ತೆ ಮತ್ತು ಆಕೆಯ ಪತಿಯಿಂದ ಘಟನೆಯ ಬಗ್ಗೆ ವಿಚಾರಿಸಲು ಆಗಮಿಸಿದರು. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಏತನ್ಮಧ್ಯೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ), ಸಂಜಯ್ ಕುಮಾರ್ ವರ್ಮಾ, ' ಈ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ. 

Crime News: ಅತ್ಯಾಚಾರ ಮಾಡಿ ಕೊಲೆ, ನಂತರ ಶವದ ಜೊತೆ ಸಂಭೋಗ: ಆರೋಪಿ ಬಂಧನ

ಇನ್ನೊಂದೆಡೆ, ಮಹಿಳೆಯ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಕೊಲೆ ಮಾಡಿದ್ದಲ್ಲದೇ ಶವದ ಜತೆಗೂ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 25 ವರ್ಷದವನಾಗಿದ್ದು, ಕಟ್ಟಡ ನಿರ್ಮಾಣದ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಹೈದರಾಬಾದಿನ ಚೌತುಪ್ಪಾಲ್‌ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ. ಹೈದರಾಬಾದಿನಿಂದ 50 ಕಿಲೋಮೀಟರ್‌ ದೂರ ಇರುವ ಚೌತುಪ್ಪಾಲ್‌ ಎಂಬ ನಗರದಲ್ಲಿ ಆರೋಪಿ ಕಟ್ಟಡ ಕಾರ್ಮಿಕರ ಸೂಪರ್‌ವೈಸರ್‌ ಕೆಲಸ ಮಾಡುತ್ತಿದ್ದ. ಸಂತ್ರಸ್ಥೆಯನ್ನು ಅತ್ಯಾಚಾರ ಮಾಡಿದ ನಂತರ ಆಕೆ ಸಹಾಯಕ್ಕಾಗಿ ಕೂಗಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆತನ ಮನಸ್ಸು ಎಷ್ಟು ವಿಕೃತವಾಗಿತ್ತೆಂದರೆ ಶವದ ಜತೆಗೂ ಸಂಭೋಗ ನಡೆಸಿದ್ದಾನೆ. 

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ಎಂದ ನ್ಯಾಯಮೂರ್ತಿ, ತೀರ್ಪಿನ ವಿರುದ್ಧ ಭಾರೀ ಆಕ್ರೋಶ!

ಅವನು ವಾಸಿಸುತ್ತಿದ್ದ ಮನೆಯ ಹತ್ತಿರದಲ್ಲೇ ಇದ್ದ ಗೋಡೌನ್‌ನಲ್ಲಿ 24 ವರ್ಷದ ಸತ್ರಸ್ಥೆ ತನ್ನ ಗಂಡನ ಜೊತೆ ವಾಸವಿದ್ದಳು. ಆರೋಪಿ ಹಲವು ದಿನಗಳಿಂದ ಆಕೆಯನ್ನು ಕಾಮದೃಷ್ಟಿಯಿಂದ ನೋಡುತ್ತಿದ್ದ ಎನ್ನಲಾಗಿದೆ. ಅಲ್ಲೇ ಹತ್ತಿರದಲ್ಲಿದ್ದ ಕಾಲೇಜೊಂದರಲ್ಲಿ ಸಂತ್ರಸ್ಥೆಯ ಗಂಡ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಬಗ್ಗೆ ಆರೋಪಿಗೆ ತಿಳಿದಿತ್ತು. ಕೆಲಸಕ್ಕೆ ಹೋದರೆ ಆತ ಬರುವುದು ತುಂಬಾ ತಡವಾಗುತ್ತದೆ ಮತ್ತು ಆ ಸಮಯದಲ್ಲಿ ಸಂತ್ರಸ್ಥೆ ಒಬ್ಬಳೇ ಇರುತ್ತಾಳೆ ಎಂಬುದನ್ನು ಆರೋಪಿ ಅರಿತಿದ್ದ. ಇದೇ ಸೋಮವಾರ, ಗಂಡ ಇರದ ಸಮಯ ನೋಡಿ ಗೋಡೌನ್‌ ಒಳಗೆ ನುಗ್ಗಿದ ಆರೋಪಿ ಸಾಯಿಸುವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಆಕೆಯನ್ನು ಅತ್ಯಾಚಾರ ಮಾಡಿ ಸಾಯಿಸಿದ್ದಾನೆ. 

Latest Videos
Follow Us:
Download App:
  • android
  • ios